ಖಾಸ್ಗತೇಶ್ವರ ಸಂಗೀತ ಪಾಠಶಾಲೆ: ಮಕ್ಕಳಿಗೆ ಪ್ರಶಸ್ತಿ ಪ್ರದಾನ

| Published : Jun 26 2024, 12:33 AM IST

ಖಾಸ್ಗತೇಶ್ವರ ಸಂಗೀತ ಪಾಠಶಾಲೆ: ಮಕ್ಕಳಿಗೆ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಬೆಳಕು ಸಾಹಿತ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜೂ.24 ರಂದು ಸೋಮವಾರ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದ ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಬೆಳಕು ಸಾಹಿತ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜೂ.24 ರಂದು ಸೋಮವಾರ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಾದ ಸೋಮಶೇಖರ್ ಚಲಪತಿ ಅವರಿಗೆ ರಾಷ್ಟ ಮಟ್ಟದ ಗಾನಕೋಗಿಲೆ ಪ್ರಶಸ್ತಿ, ಕುಮಾರ ರುದ್ರ ಅವರಿಗೆ, ರಾಷ್ಟ ಮಟ್ಟದ ಗಾನರತ್ನ ಪ್ರಶಸ್ತಿ, ಕುಮಾರ ಚರಣ್ ಅವರಿಗೆ ರಾಷ್ಟ್ರ ಮಟ್ಟದ ಪುಟ್ಟರಾಜ ಗವಾಯಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಪಟ್ಟಣದ ಎಸ್.ಕೆ. ಸಂಗೀತ ಪಾಠಶಾಲೆಯ ಪ್ರಾಚಾರ್ಯ ಈಶ್ವರ ಬಡಿಗೇರ್, ಸಂಗೀತ ಶಿಕ್ಷಕರಾದ ಅಶೋಕ ರಾಜನಕೋಳೂರ, ಚಳಿಗೆಪ್ಪ ಬೇವಿನಾಳ, ನರಸಿಂಹರಾವ್ ಜಹಾಗೀರದಾರ್ ಕಾಮನಟಗಿ, ಶರಣಗೌಡ ಗೆಣ್ಣೂರ, ಬಸನಗೌಡ ಬಿರಾದಾರ್, ಪ್ರದೀಪ ಮೀರಜಕರ್, ರಾಘು ಪತ್ತಾರ ಸೇರಿದಂತೆ ಇತರರು ಸಂತಸ ವ್ಯಕ್ತಪಡಿಸಿದ್ದಾರೆ.