ಚದುರಂಗ ಗ್ರಾಮಕ್ಕೆ ಕಾಲಿಟ್ಟಿದ್ದು ಖುಷಿ ಶಾಸಕ

| Published : Feb 12 2024, 01:31 AM IST

ಸಾರಾಂಶ

ಚದುರಂಗದಾಟ ನಗರ ಪ್ರದೇಶಗಳಲ್ಲಿ ನಡೆಯುತ್ತಿತ್ತು ಇದೀಗ ಗ್ರಾಮಾಂತರ ಪ್ರದೇಶದಲ್ಲಿ ಆಯೋಜಿಸಿರುವುದು ಖುಷಿ ತಂದಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಚದುರಂಗದಾಟ ನಗರ ಪ್ರದೇಶಗಳಲ್ಲಿ ನಡೆಯುತ್ತಿತ್ತು ಇದೀಗ ಗ್ರಾಮಾಂತರ ಪ್ರದೇಶದಲ್ಲಿ ಆಯೋಜಿಸಿರುವುದು ಖುಷಿ ತಂದಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಪಟ್ಟಣದ ಜವಹರ್‌ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಚದುರಂಗ ಸಂಸ್ಥೆ ಹಾಗು ಗುಂಡ್ಲುಪೇಟೆ ಚೆಸ್‌ ಕ್ಲಬ್‌ ಆಯೋಜಿಸಿದ್ದ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ ಸ್ಮರಣಾರ್ಥ ವಿಭಾಗ ಮಟ್ಟದ ಚದುರಂಗ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಚದುರಂಗದಾಟ ಮಕ್ಕಳ ಬುದ್ದಿ ಶಕ್ತಿ ಹೆಚ್ಚಿಸುತ್ತದೆ.ಚದುರಂಗ ದೇಶದ ಕ್ರೀಡೆಗಳೊಂದು. ಚದುರಂಗದಾಟ ಗುಂಡ್ಲುಪೇಟೆಯಲ್ಲಿ ನಡೆಸಿದ್ದು ಖುಷಿಯ ವಿಚಾರ ಎಂದರು. ಕ್ಷೇತ್ರದಲ್ಲಿ ಚದುರಂಗ ಕ್ರೀಡೆ ಸೇರಿದಂತೆ ಯಾವುದೇ ಕ್ರೀಡೆಗೆ ನನ್ನ ಸಂಪೂರ್ಣ ಸಹಕಾರ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದರು.೭ ಶ್ರೇಣಿಗಳ ೨ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಲ್ಲಿ 28 ಮಂದಿ ಪಾರಿತೋಷಕ ಪಡೆದರು. ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳಿಂದ ಚದುರಂಗದಾಟದಲ್ಲಿ ಭಾಗವಹಿಸಿದ್ದರು. ಗುಂಡ್ಲುಪೇಟೆ ಪಟ್ಟಣದ ನಿವಾಸಿ ಹಿಂದಿ ಶಿಕ್ಷಕ ನಾಗರಾಜ ಶರ್ಮನ್ ಪುತ್ರ ಸಾಂಕೇತ್‌ ಪ್ರಥಮ ಬಹುಮಾನ ಪಡೆದುಕೊಂಡರು. ಚದುರಂಗದಾಟದ ತೀರ್ಪುಗಾರರಾಗಿ ರಾಷ್ಟ್ರೀಯ ಮಹಿಳಾ ತೀರ್ಪುಗಾರ್ತಿ ಅಮೂಲ್ಯ ಹಾಗೂ ಕಿಶೋರ್‌, ದರ್ಶನ್‌ ಕೂಡ ತೀರ್ಪುಗಾರರಾಗಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್)‌ ಚದುರಂಗ ಕ್ರೀಡೆಗೆ ಸ್ಥಳವಾಕಾಶ ನೀಡಿದ ಜವಹರ್‌ ಶಿಕ್ಷಣ ಸಂಸ್ಥೆ ಹಾಗೂ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.ಸಮಾರಂಭದಲ್ಲಿ ಎಸಿಎಫ್‌ ಕೆ.ಪರಮೇಶ್‌, ಆಹಾರ ಶಿರಸ್ತೇದಾರ್‌ ವಿಶ್ವನಾಥ್‌, ಪುರಸಭೆ ಸದಸ್ಯ ಎನ್.ಕುಮಾರ್‌, ಜಿಲ್ಲಾ ಚದುರಂಗ ಸಂಸ್ಥೆ ಹಾಗೂ ನೂರಾರು ಮಂದಿ ಇದ್ದರು.