ಸಾರಾಂಶ
ಮುರುಗಮಲ್ಲ ದರ್ಗಾದ ಬಳಿ ಅಪಹರಣವಾಗಿದ್ದ ಮಗು ಹುಬ್ಬಳಿಯಲ್ಲಿ ಪತ್ತೆಯಾಗಿದ್ದು, ಚಿಕ್ಕಬಳ್ಳಾಪುರ ಪೋಲಿಸರು ಮಗುವನ್ನು ಹುಬ್ಬಳಿಯಿಂದ ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಚಿಕ್ಕಬಳ್ಳಾಫುರ: ಮುರುಗಮಲ್ಲ ದರ್ಗಾದ ಬಳಿ ಅಪಹರಣವಾಗಿದ್ದ ಮಗು ಹುಬ್ಬಳಿಯಲ್ಲಿ ಪತ್ತೆಯಾಗಿದ್ದು, ಚಿಕ್ಕಬಳ್ಳಾಪುರ ಪೋಲಿಸರು ಮಗುವನ್ನು ಹುಬ್ಬಳಿಯಿಂದ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಮುರುಗಮಲ್ಲ ಗ್ರಾಮದ ಅಮ್ಮಜಾನ್ ಬಾವಜಾನ್ ದರ್ಗಾಕ್ಕೆ ಭಾನುವಾರ ಬೆಂಗಳೂರು ಮೂಲದ ಜಬೀವುಲ್ಲಾ ಹಾಗೂ ಸುಮೈಯಾ ದಂಪತಿ ಎರಡು ವರ್ಷ ನಾಲ್ಕು ತಿಂಗಳ ಗಂಡು ಮಗು ಜಾವೀದ್ ನನ್ನು ಕರೆತಂದಿದ್ದರು. ಈ ವೇಳೆ ಮಧ್ಯಾಹ್ನ 3.22 ರ ಸಮಯದಲ್ಲಿ ದರ್ಗಾ ಒಳಗೆ ಹೋಗುತ್ತಿದ್ದಾಗ ಜನಸಂದಣಿ ನಡುವೆ ಮಗುವನ್ನು ಅಪಹರಣ ಮಾಡಲಾಗಿದೆ. ಪೋಷಕರು, ಮಗುವನ್ನು ಪತ್ತೆ ಮಾಡಿಕೊಡುವಂತೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಮಂಗಳವಾರ ಹುಬ್ಬಳ್ಲಿಯಲ್ಲಿ ಮಗು ಪತ್ತೆಯಾಗಿದೆ