ಕಾರ್ತಿಕ ಮಾಸದ ಆರಂಭದಲ್ಲಿ ರೈತರು ಭೂತಾಯಿ ಹಾಗೂ ತಿಪ್ಪೆಗಳಿಗೆ ಪೂಜಿಸುವುದು ವಾಡಿಕೆ. ರೈತರು ಅನ್ನ ನೀಡುವ ಭೂತಾಯಿಗೆ ಮೃಷ್ಟನ್ನವಾದ ಗೊಬ್ಬರವನ್ನು ವರ್ಷವಿಡಿ ಒಂದೆಡೆ ಕಲೆ ಹಾಕಿ ರಾಶಿಗೆ ತಿಪ್ಪೆಎಂದು ಕರೆಯಲಾಗುತ್ತದೆ. ಈ ತಿಪ್ಪೆ ಬಳಿ ರೈತರು ತಮ್ಮಕುಟುಂಬ ಸಮೇತರಾಗಿ ತೆರಳಿ ತಿಪ್ಪೆ ಸುತ್ತ ನೀರಿನ ಸಂಪ್ರೋಕ್ಷಣೆ ಮಾಡಿದರು.

ಕಿಕ್ಕೇರಿ:

ರಾಸಾಯನಿಕ ಮುಕ್ತ ಗೊಬ್ಬರವಾಗಿ ಭೂತಾಯಿ ಒಡಲು ಸಮೃದ್ಧಿ ಸಾರವಾಗಲಿ ಎಂದು ರೈತರು ತಾವು ಸಂಗ್ರಹಿಸಿರುವ ತಿಪ್ಪೆಗಳನ್ನು ಪೂಜಿಸಿದರು.

ಹೋಬಳಿಯ ಜಯಪುರ ಗ್ರಾಮ ಸೇರಿದಂತೆ ಗೋವಿಂದನಹಳ್ಳಿ, ಕೊಪ್ಪಲು ಗ್ರಾಮಗಳಲ್ಲಿ ರೈತರುತಿಪ್ಪೆ ಪೂಜೆಯನ್ನು ವಿಶೇಷವಾಗಿ ಆಚರಿಸಿದರು.

ಕಾರ್ತಿಕ ಮಾಸದ ಆರಂಭದಲ್ಲಿ ರೈತರು ಭೂತಾಯಿ ಹಾಗೂ ತಿಪ್ಪೆಗಳಿಗೆ ಪೂಜಿಸುವುದು ವಾಡಿಕೆ. ರೈತರು ಅನ್ನ ನೀಡುವ ಭೂತಾಯಿಗೆ ಮೃಷ್ಟನ್ನವಾದ ಗೊಬ್ಬರವನ್ನು ವರ್ಷವಿಡಿ ಒಂದೆಡೆ ಕಲೆ ಹಾಕಿ ರಾಶಿಗೆ ತಿಪ್ಪೆಎಂದು ಕರೆಯಲಾಗುತ್ತದೆ.

ಈ ತಿಪ್ಪೆ ಬಳಿ ರೈತರು ತಮ್ಮಕುಟುಂಬ ಸಮೇತರಾಗಿ ತೆರಳಿ ತಿಪ್ಪೆ ಸುತ್ತ ನೀರಿನ ಸಂಪ್ರೋಕ್ಷಣೆ ಮಾಡಿದರು. ತಿಪ್ಪೆ ಮುಂದೆ ರಂಗೋಲಿ ಬಿಡಿಸಿದರು. ಪುಷ್ಪಗಳಿಂದ ಅಲಂಕರಿಸಿದರು. ತಿಪ್ಪೆ ಮೇಲೆ ಮಡಿಕೆ ನೀರನ್ನು ಇಟ್ಟರು. ಮಡಿಕೆ ಸುತ್ತ ಹುಚ್ಚೆಳ್ಳು, ಸೆಣಬು, ಅವರೆ ಹೂವುಗಳನ್ನು ಇಟ್ಟು ಶೃಂಗರಿಸಿದರು. ವಿಭೂತಿಧಾರಣೆ ಮಾಡಿಕೊಂಡಿದರು.

ನಂತರ ಧಾನ್ಯಲಕ್ಷ್ಮೀ ಆಗಿರುವ ತಿಪ್ಪೆ ಮುಂದೆ ವಿಳ್ಳೆದೆಲೆ, ಬಾಳೆಹಣ್ಣು, ತೆಂಗಿನಕಾಯಿ ಇಟ್ಟು ಎಡೆ(ನೈವೇದ್ಯ)ಯಂತೆ ರಾಗಿ ರೊಟ್ಟಿ, ಅನ್ನ, ಹಾಲು, ಬೆಲ್ಲ, ವಿವಿಧ ಬಗೆಯಆಹಾರ ತಿನಿಸು ಇಟ್ಟು ಪೂಜಿಸಿದರು. ಭೂತಾಯಿ ಭಂಜರಾಗುತ್ತಿದೆ. ಭೂಮಿಗೆ ತಿಪ್ಪೆಗೊಬ್ಬರ ಹಾಕದೆ ರಾಸಾಯನಿಕಗೊಬ್ಬರ, ಕ್ರಿಮಿನಾಶಕ ಸಿಂಪಡಣೆಯಿಂದ ಜೀವಾಣು, ಎರೆಹುಳು, ಶಿಲೀಂಧ್ರಗಳು ಸಾಯುವಂತಾಗಿದೆ. ಇಂತಹ ಅಧುನಿಕ ಬೇಸಾಯ ಪದ್ಧತಿ ರಾಸಾಯನಿಕಗೊಬ್ಬರ ಬಿಡುವಂತಾಗಲಿ. ನೈಸರ್ಗಿಕ ಮನೆ, ಕೊಟ್ಟಿಗೆಗೊಬ್ಬರ ಹೇರಳವಾಗಿ ಸಿಗುವಂತಾಗಲಿ. ಗೊಬ್ಬರವಾಗಿ ಪರಿವರ್ತನೆಯಾಗಲು ಎರೆಹುಳು ಹೇರಳವಾಗಿ ಭೂಮಿಯೊಳಗೆ ಜೀವಿಸುವಂತಾಗಲಿ ಎಂದು ಪ್ರಾರ್ಥಿಸಿದರು.

ತಿಪ್ಪೆ ಭೂತಾಯಿ ರಸಗೊಬ್ಬರವಾಗಿ ಪರಿವರ್ತನೆಯಾಗಲಿ. ಬೆಳೆಗೆ ರೋಗ ರುಜಿನ ಬಾರದಂತೆ ಗೊಬ್ಬರವಾಗಲಿ. ಯಾವುದೇ ಸಾಂಕ್ರಾಮಿಕರೋಗ ಬೆಳೆಗೆ ಹಾಗೂ ತಿಂದಜನ, ಜಾನುವಾರುಗಳಿಗೆ ತಗುಲದಿರಲಿ ಎಂದು ಮೊರೆ ಇಟ್ಟರು.ಕಾರ್ತಿಕ ಮಾಸದ ಅಂಗವಾಗಿ ದೇಗುಲಗಳಲ್ಲಿ ವಿಶೇಷ ಪೂಜೆ, ಉತ್ಸವ

ಪಾಂಡವಪುರ: ಚಿನಕುರಳಿ ಕಾರ್ತಿಕ ಮಾಸದ ಮೊದಲ ಸೋಮವಾರದ ಪ್ರಯುಕ್ತ ಗ್ರಾಮದ ಸಣ್ಣತಮ್ಮೇಗೌಡ ಕುಟುಂಬ ವರ್ಗದವರಿಂದ ಗ್ರಾಮದ ಶ್ರೀಗಣಪತಿ ದೇವಸ್ಥಾನ, ಶ್ರೀರಾಮೇಶ್ವರ ದೇವಸ್ಥಾನ, ಅಂಕನಾಥೇಶ್ವರ ದೇವಸ್ಥಾನ, ಶ್ರೀರಾಮಾಂಜನೇಸ್ವಾಮಿ ದೇವಸ್ಥಾನ, ಶ್ರೀಆದಿಲಕ್ಷ್ಮಿ, ಮನೆಮಂಚಮ್ಮ, ಮಾಸ್ತಮ್ಮ, ತ್ರಿಪುರಸುಂದರಮ್ಮ, ದಣ್ಣಮ್ಮ, ಪಟ್ಟಲದಮ್ಮ ಹಾಗೂ ಬೀರೇಶ್ವರದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ, ಹೂವಿನ ಅಲಂಕಾರದಗಳೊಂದಿಗೆ ನೆರವೇರಿಸಲಾಯಿತು.ಬಳಿಕ ಮಧ್ಯಾಹ್ನ 3 ಗಂಟೆಗೆ ಶ್ರೀರಾಮಾಂಜನೇಯಸ್ವಾಮಿ ಉತ್ಸವವನ್ನು ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ದೇವಸ್ಥಾನದ ಆವರಣದಲ್ಲಿ ಭಕ್ತರು, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಸಲಾಗಿತ್ತು. ಎಲ್ಲಾ ದೇವಸ್ಥಾನಗಳನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ದೇವರ ಉತ್ಸವದಲ್ಲಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಸೇರಿದಂತೆ ಸಣ್ಣತಮ್ಮೇಗೌಡ ಅಂಕಮ್ಮ ಕುಟುಂಬದ ಎಲ್ಲರು ಭಾಗವಹಿಸಿ ದೇವರಿಗೆ ಭಕ್ತಿಭಾವ ಸಮರ್ಪಿಸಿದರು.