ಸಾರಾಂಶ
ಮಕ್ಕಳ ಸರ್ವೋತ್ತೊಮುಖ ಬೆಳವಣಿಗೆಗಾಗಿ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದರು. ದೇಶದ ಅಭಿವೃದ್ಧಿಗೆ ಶಿಕ್ಷಣ ಅಸ್ತ್ರವಾಗಬೇಕು. ಉನ್ನತ ಶಿಕ್ಷಣ, ಹೆಣ್ಣು ಮಕ್ಕಳಿಗೆ ಸಮಾನ ಶಿಕ್ಷಣ ಸಿಗಬೇಕು ಎಂದು ಇವರ ಹಮ್ಮಿಕೊಂಡಿದ್ದ ದೂರದೃಷ್ಟಿ ಶಕ್ತಿಯನ್ನು ಎಲ್ಲರು ಸ್ಮರಿಸಬೇಕಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಕ್ಕಳ ಮನಸ್ಸಿನಲ್ಲಿ ಸದಾ ಸ್ಮರಿಸುವ, ನೆನಪಿನಲ್ಲಿ ಉಳಿಯುವ ಮುದ್ದಿನ ತಾತಾ ಎಂದರೆ ನೆಹರು ಎಂದು ಪ್ರಾಂಶುಪಾಲೆ ಎಂ. ಶಾಂತಿ ಹೇಳಿದರು.ಮಾದಾಪುರ ಗ್ರಾಮದ ಮೊರಾರ್ಜಿ ವಸತಿಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿ, ದೇಶದ ಭವಿಷ್ಯ ಮಕ್ಕಳು. ಶಿಕ್ಷಣ ಇವರ ಹಕ್ಕು ಎಂದು ಚಾಚಾ ನೆಹರು ಹೇಲಿದ್ದರು. ದೇಶದ ಪ್ರಥಮ ಪ್ರಧಾನಿಯಾಗಿ ಭರತ ಭೂಮಿಗೆ ಸಾಕಷ್ಟು ಕೊಡುಗೆ ನೀಡಿದರು. ಶ್ರೀಮಂತಿಕೆ ಕುಟುಂಬವಾದರೂ ನಮ್ಮೆಲ್ಲರ ಸ್ವಾತಂತ್ರ್ಯಕ್ಕಾಗಿ ಹೋರಾಟದ ಹಾದಿ ತುಳಿದು ಸೆರೆಮನೆ ವಾಸ ಅನುಭವಿಸಿದರು ಎಂದರು.
ಮಕ್ಕಳ ಸರ್ವೋತ್ತೊಮುಖ ಬೆಳವಣಿಗೆಗಾಗಿ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದರು. ದೇಶದ ಅಭಿವೃದ್ಧಿಗೆ ಶಿಕ್ಷಣ ಅಸ್ತ್ರವಾಗಬೇಕು. ಉನ್ನತ ಶಿಕ್ಷಣ, ಹೆಣ್ಣು ಮಕ್ಕಳಿಗೆ ಸಮಾನ ಶಿಕ್ಷಣ ಸಿಗಬೇಕು ಎಂದು ಇವರ ಹಮ್ಮಿಕೊಂಡಿದ್ದ ದೂರದೃಷ್ಟಿ ಶಕ್ತಿಯನ್ನು ಎಲ್ಲರು ಸ್ಮರಿಸಬೇಕಿದೆ ಎಂದರು.ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಸಂಭ್ರಮ, ಕಲರವ ಜೋರಾಗಿತ್ತು. ಹಲವು ಶಾಲೆಗಳಲ್ಲಿ ಹೊರಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಬ್ರಹ್ಮೇಶ್ವರ ದೇವಾಲಯ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇಗುಲ, ಸಾಸಲು ನಾಗಬನ, ಸಮೀಪದ ಶ್ರವಣಬೆಳಗೂಳಕ್ಕೆ ಮಕ್ಕಳು ತಂಡೋಪತಂಡವಾಗಿ ಪ್ರವಾಸ ಕೈಗೊಂಡಿದ್ದರು.
ಹಲವು ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾದಾಪುರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಂ. ಶಾಂತಿ, ಧರಣೇಶ್, ನವೀನ್, ಪ್ರಕಾಶ್, ರಾಘವೇಂದ್ರ, ಸಚಿನ್, ಲಕ್ಷ್ಮಣ್, ಉಮೇಶ್, ಆರ್. ಸೌಮ್ಯ, ಜಯಲಕ್ಷ್ಮೀ ಇದ್ದರು.