ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಬುಧವಾರ ಶಿವರಾತ್ರಿ ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ನಡೆದವು.ಕಿಕ್ಕೇರಿ ಇನ್ಸ್ ಸ್ಪೆಕ್ಟರ್ ರೇವತಿ ಮಾತನಾಡಿ, ಅಂಧಕಾರದಲ್ಲಿನ ಬದುಕಿಗೆ ನೆಮ್ಮದಿಗೆ ಮುಕ್ತಿಯೋಗದಿಂದ ಲಭಿಸಲಿದೆ. ಸತ್ಯದ ಅನಾವರಣಕ್ಕಾಗಿ ಶಿವನ ಆರಾಧಿಸಿ ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು. ಆಧ್ಯಾತ್ಮಿಕಚಿಂತನೆ, ಪೂಜೆ, ಆರಾಧನೆ ಮಹತ್ವ ತಿಳಿಸಿಕೊಡಬೇಕು ಎಂದರು.
ಶಿವರಾತ್ರಿಯಲ್ಲಿ ಮಾಡುವ ಉಪವಾಸ, ವೃತ, ಜಾಗರಣೆಗಳಿಂದ ನಮ್ಮಲ್ಲಿ ನಕತ್ತಲು ಎಂಬ ಅಂಧಕಾರ, ಪಂಚವಿಕಾರಗಳಿಂದ ಮನಸ್ಸು ಜಾಗೃತಿಯಾಗಲಿದೆಎಂದು ನುಡಿದರು.ಚನ್ನರಾಯಪಟ್ಟಣ ಸಂದೀಪ್ ಜೈನ್ ಮಾತನಾಡಿ, ನಮ್ಮರಾಷ್ಟ ಸೇರಿದಂತೆ ವಿಶ್ವದಲ್ಲಿನ 145 ರಾಷ್ಟ್ರದಲ್ಲಿ 8500 ಸೇವಾ ಕೇಂದ್ರ, ಭಾರತದಲ್ಲಿ ಸುಮಾರು 4 ಸಾವಿರ ಸೇವಾ ಕೇಂದ್ರ ಇದೆ. ಮೌಲ್ಯ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣ ನೀಡಿ ಭಗವಂತನ ಹತ್ತಿರಕ್ಕೆ ಸನಿಹವಾಗಲು ಆತ್ಮಕ್ಕೆ ಪರಮಾತ್ಮನ ಪರಿಚಯ ಮಾಡಿಕೊಡುವುದು ಸಂಸ್ಥೆ ಉದ್ಧೇಶವಾಗಿದೆ ಎಂದು ಹೇಳಿದರು.
ಈ ವೇಳೆ ಬಸವಶೆಟ್ಟಿ, ಸ್ವಾಮಿ, ಮೊಟ್ಟೆ ಮಂಜು, ದೇವರಾಜು, ಫತಾರಾಂ, ಜೇಟುಸಿಂಗ್, ಅರ್ಚನ, ನಾಗಮ್ಮ, ಗೀತಾ, ಜಯಮ್ಮ, ಸರಸ್ವತಿ, ಭಾಗ್ಯಮ್ಮ, ತುಳಸಿ ಇದ್ದರು.ಶಿವರಾತ್ರಿ ಅಂಗವಾಗಿ ವಿವಿಧ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ
ಮಳವಳ್ಳಿ:ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಬುಧವಾರ ಪಟ್ಟಣದ ಕೋಟೆ ಗಂಗಾಧರೇಶ್ವರಸ್ವಾಮಿ, ಮದ್ದೂರು ರಸ್ತೆಯ ಮಹದೇಶ್ವರಸ್ವಾಮಿ ದೇವಸ್ಥಾನ ಹಲವೆಡೆ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ದವು.
ಪಟ್ಟಣದ ಕೋಟೆ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬೆಳಗಿನ ಜಾವ ವಿಶೇಷ ಹೂಮ ಹವನ ನಡೆಸಿ ಅಭಿಷೇಕ ನೇರವೇರಿಸಲಾಯಿತು. ಶಿವಲಿಂಗಕ್ಕೆ ವಿಶೇಷ ಬಗೆಯ ವಿವಿಧ ಹೂಗಳಿಂದ ಮಾಡಿದ್ದ ಅಲಂಕಾರ ಭಕ್ತರ ಗಮನ ಸೆಳೆಯಿತು.ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಮಂದಿ ಸದರಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದುಕೊಂಡರು. ಪೂಜಾ ಕೈಂಕರ್ಯಗಳನ್ನು ಅರ್ಚಕ ಸತೀಶ್ ನೆರವೇರಿಸಿದರು. ಭಕ್ತರಿಗೆ ಪ್ರಸಾಧ ವಿನಿಯೋಗ ಮಾಡಲಾಯಿತು.
ತಾಲೂಕಿನ ದುಗ್ಗನಹಳ್ಳಿಯ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲೂ ಸಹ ಶಿವರಾತ್ರಿ ಸಂಭ್ರಮ ಜೋರಾಗಿತ್ತು. ಅಕ್ಕಪಕ್ಕದ ಹತ್ತಾರು ಗ್ರಾಮಗಳ ನೂರಾರು ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು.ಪಟ್ಟಣದ ಹೊರವಲಯದ ದಂಡಿನ ಮಾರಮ್ಮ, ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ, ತಾಲೂಕಿನ ಕಲ್ಲುವೀರನಹಳ್ಳಿ-ಕಂದೇಗಾಲದ ಮತ್ತಿತಾಳೇಶ್ವರಸ್ವಾಮಿ, ತಳಗವಾದಿ ಸೋಮೇಶ್ವರ ದೇವಸ್ಥಾನ, ಮಾದಹಳ್ಳಿಯ ಬಸವೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದ್ದವು.