ಕಿಕ್ಕೇರಿ ಪಟ್ಟಣದ ಪಿಎಸ್ ಶಾಲಾ ಮಕ್ಕಳ ಸಂಸತ್‌ ಚುನಾವಣೆ

| Published : Jul 09 2025, 12:28 AM IST

ಸಾರಾಂಶ

ಕಿಕ್ಕೇರಿ ಪಟ್ಟಣದ ಕೆಪಿಎಸ್ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಸಂಸತ್‌ ಚುನಾವಣೆಯಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು. 8 ರಿಂದ 10ನೇ ತರಗತಿ ಮಕ್ಕಳು ಸರತಿಯಲ್ಲಿ ನಿಂತು ಮತದಾನದ ಹಕ್ಕು ಚಲಾಯಿಸಿದರು. ಕೆಪಿಎಸ್ ಪ್ರಜ್ವಲ್ ಹಾಗೂ ಕೆಪಿಎಸ್‌ ಉಜ್ವಲ್ ಪಕ್ಷಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪಟ್ಟಣದ ಕೆಪಿಎಸ್ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಸಂಸತ್‌ ಚುನಾವಣೆಯಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು.

8 ರಿಂದ 10ನೇ ತರಗತಿ ಮಕ್ಕಳು ಸರತಿಯಲ್ಲಿ ನಿಂತು ಮತದಾನದ ಹಕ್ಕು ಚಲಾಯಿಸಿದರು. ಕೆಪಿಎಸ್ ಪ್ರಜ್ವಲ್ ಹಾಗೂ ಕೆಪಿಎಸ್‌ ಉಜ್ವಲ್ ಪಕ್ಷಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಎರಡು ಪಕ್ಷಗಳಲ್ಲಿ 18 ಅಭ್ಯರ್ಥಿಗಳಾಗಿ ಒಟ್ಟು 36 ಮಕ್ಕಳು ಚುನಾವಣೆ ಕಣದಲ್ಲಿದ್ದರು.

ಪ್ರತಿ ಪಕ್ಷದಲ್ಲಿಯೂ ಅಧ್ಯಕ್ಷರನ್ನು ನೇಮಿಸಿಕೊಂಡು ಅಧ್ಯಕ್ಷರ ನೇತೃತ್ವದಲ್ಲಿ ಬಿರುಸಿನಿಂದ ಮತ ಪ್ರಚಾರ ಮಾಡಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಗಾಗಿ ಪ್ರಕಟಣೆ, ಕರಪತ್ರ, ಮತದಾನದ ಬ್ಯಾಲೆಟ್ ಪೇಪರ್, ಮತದಾರರ ಪಟ್ಟಿ, ಮತದಾನ ಮಾಡಿದ ಗುರುತಿಗೆ ಬೆರಳಿಗೆ ಶಾಯಿ ಹಾಕುವುದು, ಚುನಾವಣಾ ಮತಗಟ್ಟೆ, ಮತದಾನ ಹಾಕಲು ಮತಪೆಟ್ಟಿಗೆಯನ್ನು ಸುಂದರವಾಗಿ ನಿರ್ಮಿಸಿದ್ದರು.

ನಂತರ ಕೆಪಿಎಸ್‌ ಪ್ರಜ್ವಲ್‌ ಪಕ್ಷದ ಅಧ್ಯಕ್ಷರಾಗಿದ್ದ ಗಗನ್‌ ನಾಯಕತ್ವದಲ್ಲಿ 12 ಅಭ್ಯರ್ಥಿಗಳು ಬಹುಮತ ಪಡೆದು ಸರ್ಕಾರ ರಚನೆ ಮಾಡಿದರು. ಕೆಪಿಎಸ್‌ಉಜ್ವಲ್‌ ಪಕ್ಷದ ಅಧ್ಯಕ್ಷ ಜೀವನ್ ನಾಯಕತ್ವದಲ್ಲಿ 6 ಅಭ್ಯರ್ಥಿಗಳು ವಿಜೇತರಾದರು. ಬಹುಮತ ಪಡೆದ ವಿಜೇತ ಕೆಪಿಎಸ್‌ಪ್ರಜ್ವಲ್ ಪಕ್ಷ ಮುಖ್ಯಮಂತ್ರಿ, ಸಚಿವ ಖಾತೆ ರಚಿಸಿಕೊಂಡು ಮಂತ್ರಿಮಂಡಲ ರಚನೆ ಮಾಡಿಕೊಂಡರು.

ಎರಡು ಪಕ್ಷಗಳ ಸಲಹೆಗಾರರಾಗಿ ಶಿಕ್ಷಕರಾದ ಬಿ.ಎನ್.ಪರಶಿವಮೂರ್ತಿ, ನಂದಿನಿ, ಎಂ.ಎಚ್.ಕೃಷ್ಣಪ್ಪ, ದೀಪಕ್ ಪಟೇಲ್‌ ಇದ್ದರು. ಚುನಾವಣಾಧಿಕಾರಿಯಾಗಿ ಎಸ್.ಎಂ.ಬಸವರಾಜು, ಗಿರೀಶ್, ಸುರೇಶ್, ಮಹಮದ್‌ರಿಜ್ವಿ, ಶ್ರೀಕಾಂತ್ ಚಿಮ್ಮಲ್, ಹೆಗಡೆ, ರಮ್ಯಾ, ರಾಗಿಣಿ, ವಿಶಾಲಾಕ್ಷಿ, ಅಶ್ವಿನಿ, ಚುನಾವಣಾ ವೀಕ್ಷಕರಾಗಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಶೇಖರ್, ದಿನೇಶ್‌ ಬಾಬು ಉಪಸ್ಥಿತರಿದ್ದರು.