ಸಾರಾಂಶ
ನ್ಯಾಯ ನಿಷ್ಠುರರಾದ ಕಲಬುರ್ಗಿ ಅವರು ಎಂದಿಗೂ ಸತ್ಯದ ವಂಚನೆ ಹಾಗೂ ಆತ್ಮದ್ರೋಹ ಮಾಡಿಕೊಳ್ಳಲಿಲ್ಲ. ಯಾರನ್ನೋ ಮೆಚ್ಚಿಸುವುದಕ್ಕಾಗಿ ಸಂಶೋಧನೆ ಮಾಡದೆ, ಸಂಶೋಧನೆಯಲ್ಲಿ ಸತ್ಯದ ಹುಡುಕಾಟ ನಡೆಸಿದರು.
ಧಾರವಾಡ:
ಸತ್ಯಶೋಧನೆ ಹಾಗೂ ನ್ಯಾಯ ನಿಷ್ಠುರತೆ ಸಹಿಸದ ಸನಾತನ ಹಾಗೂ ಸಂಪ್ರದಾಯವಾದಿಗಳು ಡಾ. ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆ ಮಾಡಿದರು ಎಂದು ನಾಡೋಜ ಡಾ. ಗೊ.ರು. ಚನ್ನಬಸಪ್ಪ ವಿಷಾದ ವ್ಯಕ್ತಪಡಿಸಿದರು.ಆಲೂರು ವೆಂಟಕರಾವ್ ಸಭಾಭವನದಲ್ಲಿ ಗುರುವಾರ ನಡೆದ ಡಾ. ಎಂ.ಎಂ. ಕಲಬುರ್ಗಿ ಅವರ 86ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಬದುಕಿನುದ್ದಕ್ಕೂ ಅನೇಕ ಟೀಕೆ-ಟಿಪ್ಪಣಿ, ಸವಾಲು ಎದುರಿಸಿದ ಡಾ. ಕಲಬುರ್ಗಿ ಅವರಗೆ ಅನಿಷ್ಠ ರಾಜಕಾರಣಿಗಳ ಕುರಿತು, ಇಂದಿನ ಸಂವಿಧಾನ ವಿರೋಧಿಗಳ ಬಗ್ಗೆ ಅಸಹನೆ ಇತ್ತು. ಈ ಅನಿಷ್ಠ ಶಕ್ತಿಗಳ ಕಲಬುರ್ಗಿ ಅವರನ್ನು ಬಲಿ ಪಡೆದವು ಎಂದರು.ನ್ಯಾಯ ನಿಷ್ಠುರರಾದ ಕಲಬುರ್ಗಿ ಅವರು ಎಂದಿಗೂ ಸತ್ಯದ ವಂಚನೆ ಹಾಗೂ ಆತ್ಮದ್ರೋಹ ಮಾಡಿಕೊಳ್ಳಲಿಲ್ಲ. ಯಾರನ್ನೋ ಮೆಚ್ಚಿಸುವುದಕ್ಕಾಗಿ ಸಂಶೋಧನೆ ಮಾಡದೆ, ಸಂಶೋಧನೆಯಲ್ಲಿ ಸತ್ಯದ ಹುಡುಕಾಟ ನಡೆಸಿದರು ಎಂದರು.
ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಡಾ. ಬಾಳಣ್ಣ ಶೀಗಿಹಳ್ಳಿ, ವಿಜಯ ಕಲಬುರ್ಗಿ, ಸಂಶೋಧಕಿ ಹನುಮಾಕ್ಷಿ ಗೋಗಿ, ಎಚ್.ಎಸ್. ಮೇಲಿನಮನಿ, ಡಾ. ಸಿದ್ಧನಗೌಡ ಪಾಟೀಲ, ಚಂದ್ರಶೇಖರ ವಸ್ತ್ರದ, ಕನ್ನಡ-ಸಂಸ್ಕೃತಿ ಇಲಾಖೆ ಬೆಳಗಾವಿ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಇದ್ದರು.