ಕಿನ್ನಿಗೋಳಿ: ಸೀಮಂತ ಕಾರ್ಯಕ್ರಮದಲ್ಲಿ ಕವಿಗೋಷ್ಠಿ

| Published : Dec 31 2024, 01:01 AM IST

ಸಾರಾಂಶ

ತಾಳಿಪಾಡಿ ಗುತ್ತಿನ ಮನೆಯ ಸೊಸೆ ನಿಧಿ ಮೋಹನ್ ಪೂಂಜ ಅವರ ಸೀಮಂತದಲ್ಲಿ ತುಳು ಕವಿಗೋಷ್ಠಿ ನಡೆಸುವ ಮೂಲಕ ವಿಶೇಷ ರೀತಿಯಲ್ಲಿ ನಡೆಯಿತು. ತಾಳಿಪಾಡಿ ಗುತ್ತುದ ಪೂಂಜ ಕುಟುಂಬ ಮತ್ತು ಜೈ ತುಳುನಾಡ್ ಸಹಯೋಗದಲ್ಲಿ ತುಳು ಭಾಷೆಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಿನ್ನಿಗೋಳಿಯ ತಾಳಿಪಾಡಿ ಗುತ್ತಿನ ಮನೆಯ ಸೊಸೆ ನಿಧಿ ಮೋಹನ್ ಪೂಂಜ ಅವರ ಸೀಮಂತದಲ್ಲಿ ತುಳು ಕವಿಗೋಷ್ಠಿ ನಡೆಸುವ ಮೂಲಕ ವಿಶೇಷ ರೀತಿಯಲ್ಲಿ ನಡೆಯಿತು.

ತಾಳಿಪಾಡಿ ಗುತ್ತುದ ಪೂಂಜ ಕುಟುಂಬ ಮತ್ತು ಜೈ ತುಳುನಾಡ್ ಸಹಯೋಗದಲ್ಲಿ ತುಳು ಭಾಷೆಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಯಿತು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಣಿಪಾಲ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಯ ಸಹ ಪ್ರಾಧ್ಯಾಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ವಹಿಸಿ ಮಾತನಾಡಿ, ಮರೆಯಾಗುತ್ತಿರುವ ಮಾತೃ ಭಾಷೆ ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಬೇಕು. ಈ ಕವಿಗೋಷ್ಠಿ ವಿಶೇಷವಾಗಿದೆ ಎಂದು ಹೇಳಿದರು.

ಜೈ ತುಳುನಾಡ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ, ಜೈ ತುಳುನಾಡ್ ಸ್ಥಾಪಕ ಸಮಿತಿ ಸದಸ್ಯ ಕಿರಣ್ ತುಲುವೆ ಉಪಸ್ಥಿತರಿದ್ದರು.

ಕವಿಗೋಷ್ಠಿಯಲ್ಲಿ ಕವಿಗಳಾದ ನವೀನ ಕುಮಾರ್ ಪೆರಾರ, ವೈಷ್ಣವಿ ಸುಧೀಂದ್ರ ರಾವ್, ಶ್ವೇತಾ ಡಿ. ಬಡಗಬೆಳ್ಳೂರು, ಪ್ರೇಮಾ ಆರ್. ಶೆಟ್ಟಿ ಮೂಲ್ಕಿ ತಮ್ಮ ಕವಿತೆಗಳನ್ನು ವಾಚಿಸಿದರು.ಜೈ ತುಳುನಾಡ್ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಪೂಂಜ ತಾರಿಪಾಡಿ ಗುತ್ತು ಸ್ವಾಗತಿಸಿದರು. ಚಿರಶ್ರೀ ಕಾರ್ಯಕ್ರಮ ನಿರೂಪಿಸಿದರು.