ಕಿನ್ನಿಗೋಳಿ: ಮಹಿಳೆಯರ ಆರೋಗ್ಯ ಜಾಗೃತಿ ಕಾರ್ಯಕ್ರಮ

| Published : Mar 12 2025, 12:48 AM IST

ಸಾರಾಂಶ

ಮಂಗಳೂರು ಧರ್ಮಪಾಲಕ ಸಂಘದ ಡಯಾಸಿಸನ್ ಕೌನ್ಸಿಲ್ ಫಾರ್ ಕ್ಯಾಥೋಲಿಕ್ ವಿಮೆನ್, ಡೀನರಿ ಸ್ತ್ರೀ ಸಂಘಟನೆ, ದಕ್ಷಿಣ ಕನ್ನಡ ಕಥೊಲಿಕ್ ಸಂಘ ಹಾಗೂ ಆರೋಗ್ಯದ ಸಹಯೋಗದೊಂದಿಗೆ ಕಿನ್ನಿಗೋಳಿ ಚರ್ಚ್ ಶಾಲೆಯಲ್ಲಿ ಮಹಿಳೆಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಾಲ, ಕಾಲಕ್ಕೆ ತಪಾಸಣೆ ಮೂಲಕ ರೋಗವನ್ನು ಪತ್ತೆ ಹಚ್ಚಿದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದು ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ವಂದನೀಯ ರೋನಾಲ್ಡ್ ಗೋಮ್ಸ್‌ ಹೇಳಿದ್ದಾರೆ.

ಮಂಗಳೂರು ಧರ್ಮಪಾಲಕ ಸಂಘದ ಡಯಾಸಿಸನ್ ಕೌನ್ಸಿಲ್ ಫಾರ್ ಕ್ಯಾಥೋಲಿಕ್ ವಿಮೆನ್, ಡೀನರಿ ಸ್ತ್ರೀ ಸಂಘಟನೆ, ದಕ್ಷಿಣ ಕನ್ನಡ ಕಥೊಲಿಕ್ ಸಂಘ ಹಾಗೂ ಆರೋಗ್ಯದ ಸಹಯೋಗದೊಂದಿಗೆ ಕಿನ್ನಿಗೋಳಿ ಚರ್ಚ್ ಶಾಲೆಯಲ್ಲಿ ಮಹಿಳೆಯರಿಗೆ ಜರಗಿದ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ದೇರಳಕಟ್ಟೆ ಮತ್ತು ಭಾರತೀಯ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ಸಹಕಾರದಲ್ಲಿ ಕಾರ್ಯಕ್ರಮ ನೆರವೇರಿತು.

ಪ್ರಮುಖರಾದ ಫಾ. ಆಸ್ವಾಲ್ಡ್ ಮೊಂತೇರೊ, ವಿಕಾರ್ ಫೊರೇನ್ ಫಾ. ಅನಿಲ್ ಡಿಸೋಜಾ, ಡೀನರಿ ಸ್ತ್ರೀ ಸಂಘಟನೆ ನಿರ್ದೇಶಕ ಫಾ. ಜೋಕಿಂ ಫೆರ್ನಾಂಡಿಸ್, ದಕ್ಷಿಣ ಕನ್ನಡ ಕಥೋಲಿಕ್ ಸಂಘದ ಅಧ್ಯಕ್ಷ ಗ್ರೆಟ್ಟಾ ಪಿಂಟೋ, ಡಿಸಿಸಿಡಬ್ಲ್ಯೂ ಅಧ್ಯಕ್ಷೆ ಅನಿತಾ ಡಿಸೋಜಾ, ಡೀನರಿ ಸ್ತ್ರೀ ಸಂಘಟನೆ ಅಧ್ಯಕ್ಷೆ ನಳಿನಿ ಡಿಸೋಜಾ, ಕಾರ್ಯದರ್ಶಿ ಸಂಗೀತಾ ಸಿಕ್ವೇರಾ, ಕಿನ್ನಿಗೋಳಿ ಸ್ತ್ರೀ ಸಂಘಟನೆ ಅಧ್ಯಕ್ಷೆ ಗ್ರೆಟ್ಟಾ ರೊಡ್ರಿಗಸ್, ಕಾರ್ಯದರ್ಶಿ ವಿಲಿಯಮ್ ಡಿಸೋಜಾ, ಕಿನ್ನಿಗೋಳಿ ಪಾರಿಶ್ ಕೌನ್ಸಿಲ್ ಉಪಾಧ್ಯಕ್ಷ ಡಾ. ಆಶ್ವತಿ, ಡಾ. ಅಫ್ಸಲ್, ಡಾ. ಶ್ರೇಯಾ ಹೆಗ್ಡೆ, ಡಾ. ರಶ್ಮಿ, ಡಾ. ಹಬಿಬಾ ಮತ್ತು ಡಾ. ಸಿಮ್ರನ್, ಕಣಚೂರು ವೈದ್ಯರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಕಿನ್ನಿಗೋಳಿ, ದಾಮಸ್‌ ಕಟ್ಟೆ, ಬಳ್ಕುಂಜೆ, ಮುಂಡ್ಕೂರು, ಬೋಳ, ಪಕ್ಷಿಕೆರೆ, ನಿಡ್ಡೋಡಿ ಮತ್ತು ನೀರುಡೆ ಗ್ರಾಮಗಳಿಂದ ಹೆಚ್ಚಿನ ಮಹಿಳೆಯರು ಆಗಮಿಸಿ ಪಾಲ್ಗೊಂಡಿದ್ದರು.