ಶೀರೂರು ಪರ್ಯಾಯ ಮಹೋತ್ಸವ ಪ್ರಯುಕ್ತ ಕಿನ್ನಿಮೂಲ್ಕಿ ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ ಕಿನ್ನಿಮೂಲ್ಕಿ ಜಂಕ್ಷನ್ ಬಳಿ ಸಾಂಸ್ಕೃತಿಕ ರಸಮಂಜರಿ, ನೃತ್ಯ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಉಡುಪಿ: ಶೀರೂರು ಪರ್ಯಾಯ ಮಹೋತ್ಸವ ಪ್ರಯುಕ್ತ ಕಿನ್ನಿಮೂಲ್ಕಿ ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ ಕಿನ್ನಿಮೂಲ್ಕಿ ಜಂಕ್ಷನ್ ಬಳಿ ಸಾಂಸ್ಕೃತಿಕ ರಸಮಂಜರಿ, ನೃತ್ಯ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿ ಮಾತನಾಡಿ, ನಮ್ಮ ಧಾರ್ಮಿಕ ಆಚರಣೆ, ನಂಬಿಕೆಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸುವುದರೊಂದಿಗೆ ಹಿಂದಿನಿಂದಲೂ ನಡೆದು ಬಂದ ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸುವುದರ ಜನತೆಗೆ ಮುಂದಿನ ಪೀಳಿಗೆಗೆ ರವಾನಿಸುವ ಕೆಲಸವನ್ನು ಮಾಡಬೇಕಾಗಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಪ್ರಸಾದ್ ನೇತ್ರಾಲಯ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಿದ್ದರು. 100 ಶಾಲೆಗಳಿಗೆ ಸ್ಪೋರ್ಟ್ಸ್ ಕಿಟ್‌, 100 ಅಂಗನವಾಡಿಗಳಿಗೆ ಕುಕ್ಕರ್, 100 ಶಾಲೆಗಳಿಗೆ ಫ್ಯಾನ್‌ಗಳನ್ನು ಆರೋಗ್ಯನಿಧಿಯನ್ನು ವಿ.ಪ. ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ವಿತರಿಸಿದರು.ಪ್ರಮುಖರಾದ ರಾಮಪ್ರಸಾದ್ ಬೆಂಗಳೂರು, ಡಾ. ತಲ್ಲೂರು ಶಿವರಾಮ್ ಶೆಟ್ಟಿ, ಕೆ. ಉದಯ ಕುಮಾರ್ ಶೆಟ್ಟಿ, ರವಿ ಶೆಟ್ಟಿ, ರಮೇಶ್ ಕಾಂಚನ್, ನಾಗರಾಜ ಸುವರ್ಣ, ಆನಂದ್ ಪಿ. ಸುವರ್ಣ, ಮಹಾಬಲ ಸಾಲ್ಯಾನ್, ರೆನೋಲ್ಡ್ ಪ್ರವೀಣ್ ಕುಮಾರ್, ಹರಿಪ್ರಸಾದ್ ರೈ, ಶೇಖ್ ರಶೀದ್ ಅಹಮ್ಮದ್, ಪ್ರಖ್ಯಾತ್ ಶೆಟ್ಟಿ, ಜಯನ್ ಮಲ್ಪೆ, ಪ್ರವೀಣ್ ಆಚಾರ್ಯ, ರೂಪೇಶ್ ಕಲ್ಮಾಡಿ, ಸತೀಶ್ ಸಾಲ್ಯಾನ್ ಮಣಿಪಾಲ, ನಗರಸಭೆ ಮಾಜಿ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಹರೀಶ್, ಪ್ರಶಾಂತ್ ಆಚಾರ್ಯ, ಚಿತ್ರನಟರಾದ ಶೈನ್ ಶೆಟ್ಟಿ, ಕೃತಿ ಬಿ. ಶೆಟ್ಟಿ, ಕಾಜಲ್ ಕುಂದರ್ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್‌ನ ಸಂಸ್ಥಾಪಕ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.

ವಿವಿಧ ಕ್ಷೇತ್ರದ ಸಾಧಕರಾದ ಡಾ. ಚಂದ್ರಶೇಖರ್ ವಿ.ಎಸ್., ಸತೀಶ್ ಸುವರ್ಣ ಪಂದುಬೆಟ್ಟು, ಡಾ. ಜಯಂತ್ ಭಟ್ ಮಣೋಳಿಗುಜ್ಜಿ, ರಕ್ಷಿತ್ ಮಲ್ಪೆ, ಕಮಲಾ ಪೂಜಾರಿ, ಸೋನಾ ಅಡ್ಕರ್ ಸುಳ್ಯ, ಮೋಹಿತ್ ಅವರನ್ನು ಸನ್ಮಾನಿಸಲಾಯಿತು. ಸುಮಾರು 100 ಕ್ಕೂ ಅಧಿಕ ಅಂಗನವಾಡಿಗಳಿಗೆ ಕುಕ್ಕರ್, 100 ಶಾಲೆಗೆ ಫ್ಯಾನ್, 100 ಶಾಲೆಗೆ ಸ್ಪೋರ್ಟ್ಸ್ ಕಿಟ್, ರಿಕ್ಷಾಚಾಲಕರಿಗೆ ಇನ್ಶೂರೆನ್ಸ್ ವಿತರಿಸಲಾಯಿತು.