ಸಾರಾಂಶ
ರಾಮನಗರ: ತಾಲೂಕಿನ ಬಿಳಗುಂಬ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಕಿರಣ್ ಹಾಗೂ ಉಪಾಧ್ಯಕ್ಷರಾಗಿ ಬಿ.ಸಿ.ರಾಘವೇಂದ್ರ ಆಯ್ಕೆಯಾಗಿದ್ದಾರೆ.
ರಾಮನಗರ: ತಾಲೂಕಿನ ಬಿಳಗುಂಬ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಕಿರಣ್ ಹಾಗೂ ಉಪಾಧ್ಯಕ್ಷರಾಗಿ ಬಿ.ಸಿ.ರಾಘವೇಂದ್ರ ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ಒಟ್ಟು 11 ನಿರ್ದೇಶಕರಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಕಿರಣ್ ಮತ್ತು ರಾಮಚಂದ್ರಯ್ಯ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದು 6 ಮತಗಳನ್ನು ಪಡೆದ ಎನ್.ಕಿರಣ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ರಾಮಚಂದ್ರಯ್ಯ 5 ಮತ ಪಡೆದು ಸೋಲು ಅನುಭವಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ. ರಾಘವೇಂದ್ರ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿ ಪುರುಷೋತ್ತಮ್, ಸಂಘದ ಸಿಇಒ ಹೇಮಂತ್‌ಗೌಡ ಇದ್ದರು.
ನೂತನ ಅಧ್ಯಕ್ಷ ಎನ್.ಕಿರಣ್ ಮಾತನಾಡಿ, ಸಹಕಾರಿಗಳು ಸೇರಿ ಕಟ್ಟಿಕೊಂಡಿರುವ ಎಂಪಿಸಿಎಸ್‌ಗಳು ಗ್ರಾಮದಲ್ಲಿ ದೇವಾಲಯವಿದ್ದಂತೆ. ಜೊತೆಗೆ ಗ್ರಾಮೀಣರ ಆರ್ಥಿಕ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ನಮ್ಮ ಬಿಳಗುಂಬ ಎಂಪಿಸಿಎಸ್‌ನಲ್ಲಿ ಪ್ರತಿನಿತ್ಯ 1600 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಎಲ್ಲರ ಸಹಕಾರದಲ್ಲಿ ಮಾದರಿ ಸಂಘವಾಗಿ ರೂಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆಶಿವಲಿಂಗಯ್ಯ, ಬಿಳಗುಂಬ ಗ್ರಾಪಂ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಕುರುಬರಹಳ್ಳಿ ಪಿಎಸಿಎಂಎಸ್ ಅಧ್ಯಕ್ಷ ಶಾಂತಯ್ಯ, ಗ್ರಾಪಂ ಸದಸ್ಯ ಬೋರೇಗೌಡ, ಮುಖಂಡ ರಾದ ಜಿ.ಟಿ.ಕೃಷ್ಣ, ದೊಡ್ಡಿಶಿವರಾಜು, ಮಾಸ್ಟರ್ ರಮೇಶ್, ರಾಜಣ್ಣ, ನಾರಾಯಣ್, ತಮ್ಮಯ್ಯಣ್ಣ, ಕೃಷ್ಣಪ್ಪ, ಹೊನ್ನೇಗೌಡ, ನವೀನ. ಮಹೇಶ್ ಅಭಿನಂದಿಸಿದರು.28ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಬಿಳಗುಂಬ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಕಿರಣ್ ಅವರನ್ನು ಮುಖಂಡರು ಅಭಿನಂದಿಸಿದರು.