ರೈತ ವಿರೋಧಿ ನೀತಿ ಖಂಡಿಸಿ ಬೇಲೂರಲ್ಲಿ ಕಿಸಾನ್ ಮೋರ್ಚಾ ಪ್ರತಿಭಟನೆ

| Published : Feb 17 2024, 01:18 AM IST

ರೈತ ವಿರೋಧಿ ನೀತಿ ಖಂಡಿಸಿ ಬೇಲೂರಲ್ಲಿ ಕಿಸಾನ್ ಮೋರ್ಚಾ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ರಾಜ್ಯಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಆಗಮಿಸಿರುವ ರೈತರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿತು. ಬೇಲೂರಲ್ಲಿ ದೆಹಲಿಯಲ್ಲಿ ರೈತರ ಬಂಧನ ವಿರೋಧಿಸಿ ಮಾತನಾಡಿದರು.

ಬಂಧಿತ ರೈತರ ಬಿಡುಗಡೆಗೆ ಆಗ್ರಹಬೇಲೂರು: ಕರಾಳ ರೈತ ಮಸೂದೆಯನ್ನು ಹಿಂಪಡೆಯಬೇಕು ಎಂದು ವಿವಿಧ ರಾಜ್ಯಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಆಗಮಿಸಿರುವ ರೈತರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ, ಜನಪರ ಸಂಘಟನೆಗಳು ಅಗ್ರಹಿಸಿದವು.

ಇಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಪ್ರದಾನ ಕಾರ್ಯದರ್ಶಿ ಸ್ವಾಮಿ ಗೌಡ ಮಾತನಾಡಿ, ‘ರೈತರು ದೇಶದ ಬೆನ್ನೆಲುಬು, ಅವರೇ ನಮ್ಮ ಆಸ್ತಿ ಎಂದು ಹೇಳಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ರೈತರ ವಿರುದ್ಧ ಮಸೂದೆಗಳನ್ನು ಜಾರಿಗೆ ತಂದು ನಮ್ಮನ್ನು ಸಂಕಷ್ಟಕ್ಕೆ ತಂದಿದ್ದಾರೆ, ಎಪಿಎಂಸಿ ಕಾಯ್ದೆ, ಕನಿಷ್ಠ ಬೆಂಬಲ ಬೆಲೆ ಇನ್ನೂ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನೆ ಮಾಡಿದರೆ ಅವರನ್ನು ಬಂದಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಅಲ್ಲದೆ ನಮ್ಮ ದೇಶದ ರೈತರ ಆತ್ಮಸ್ಥೈರ್ಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರೈತರನ್ನು ಬಂಧಿಸಿದರೆ ಹೆದರುವ ಮನುಸ್ಯರಲ್ಲ, ನಮ್ಮ ಹೋರಾಟಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತದೆ, ಕರಾಳ ಕೃಷಿ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕು, ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಬೇಕು ಇಲ್ಲದಿದ್ದಲ್ಲಿ ಇದೇ 27 ರಂದು ಎಲ್ಲಾ ಕೇಂದ್ರಗಳಲ್ಲೂ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು,

ತಾಲೂಕು ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಕಾಮಾಕ್ಷಿ ರಾಜು ಮಾತನಾಡಿ, ಅಂಗನವಾಡಿ ಕಾರ್ಯಕರ್ತರ ಕೆಲಸವನ್ನು ಕಾಯಂಗೊಳಿಸಬೇಕು, ಸಂಬಳವನ್ನು ಹೆಚ್ಚಿಸಬೇಕು, ಅಲ್ಲದೆ ಕೆಲಸಕ್ಕೆ ಸಮಯನ್ನು ನಿಗದಿ ಮಾಡಬೇಕು, ಈ ವಿಚಾರವಾಗಿ ಹಲವಾರು ದಿನಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ, ಈಡೇರಿಸದಿದ್ದರೆ ಹೋರಾಟ ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು,

ತಾಲೂಕು ಸಿಐಟಿಯು ಕಾರ್ಯದರ್ಶಿ ಮಂಜುಳಮ್ಮ, ವಿವಿಧ ಪ್ರಗತಿ ಪರ ಸಂಘಟನೆಗಳು, ಸಾಮಾಜಿಕ ಹೋರಾಟ ಸಮಿತಿ, ಅಂಗನವಾಡಿ ಕಾರ್ಯಕರ್ತರು, ತಾಲೂಕು ರೈತ ಒಕ್ಕೂಟ ಭಾಗವಹಿಸಿದ್ದವು.

ಸಂಯುಕ್ತ ಕಿಶಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ, ಜನಪರ ಸಂಘಟನೆಗಳ ರೈತ ಸಂಘದ ಸಮಿತಿ ವತಿಯಿಂದ ಬೇಲೂರಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.