ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕೆ ನೆರವು ಒದಗಿಸುವ ತನ್ನ ಬದ್ಧತೆಯನ್ನು ಮುಂದುವರಿಸಿರುವ ಅದಾನಿ ಸಮೂಹದ ಸಿಎಸ್‌ಆರ್ ವಿಭಾಗವಾದ ಅದಾನಿ ಫ಼ೌಂಡೇಶನ್, ಉಡುಪಿ ಜಿಲ್ಲೆಯ 85 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ 7000 ವಿದ್ಯಾರ್ಥಿಗಳಿಗೆ 40 ಲಕ್ಷ ರು. ಮೌಲ್ಯದ ಶಾಲಾ ಕಿಟ್ / ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದೆ.
ಕಾಪು : ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕೆ ನೆರವು ಒದಗಿಸುವ ತನ್ನ ಬದ್ಧತೆಯನ್ನು ಮುಂದುವರಿಸಿರುವ ಅದಾನಿ ಸಮೂಹದ ಸಿಎಸ್‌ಆರ್ ವಿಭಾಗವಾದ ಅದಾನಿ ಫ಼ೌಂಡೇಶನ್, ಉಡುಪಿ ಜಿಲ್ಲೆಯ 85 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ 7000 ವಿದ್ಯಾರ್ಥಿಗಳಿಗೆ 40 ಲಕ್ಷ ರು. ಮೌಲ್ಯದ ಶಾಲಾ ಕಿಟ್ / ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದೆ. ಇಲ್ಲಿನ ಅದಾನಿ ಪವರ್ ಲಿಮಿಟೆಡ್‌ನ ಅಂಗಸಂಸ್ಥೆ ಉಡುಪಿ ಥರ್ಮಲ್ ಪವರ್ ಪ್ಲ್ಯಾಂಟ್ (ಉಡುಪಿ ಟಿಪಿಪಿ) ವತಿಯಿಂದ ಕಳೆದ 10 ವರ್ಷಗಳಂತೆ ಈ ಬಾರಿಯೂ ತನ್ನ ಸ್ಥಾವರದ ಪರಿಸರದಲ್ಲಿ ಸಿಎಸ್‌ಆರ್ ಚಟುವಟಿಕೆಗಳ ಭಾಗವಾಗಿ ಶಾಲಾ ಬ್ಯಾಗ್, ನೋಟ್ ಪುಸ್ತಕ, ಜಿಯೊಮೆಟ್ರಿ ಬಾಕ್ಸ್, ಕೊಡೆ ಸೇರಿದಂತ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಕಿಟ್ ನಲ್ಲಿ ಒದಗಿಸಲಾಯಿತು. .ಈ ಬಗ್ಗೆ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಕಿಶೋರ್ ಆಳ್ವ ಅವರು ‘ಶಿಕ್ಷಣ ವ್ಯವಸ್ಥೆಯ ಬೆನ್ನಲುಬಾಗಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳ ಸಾವಿರಾರು ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಈ ಶಾಲೆಗಳನ್ನೇ ಅವಲಂಬಿಸಿದ್ದಾರೆ. ನಾವು ಶಾಲಾ ಕಿಟ್‌ಗಳನ್ನು ವಿತರಿಸುವಾಗ ಕೇವಲ ನೋಟ್ ಪುಸ್ತಕಗಳು ಅಥವಾ ಶಾಲೆ ಬ್ಯಾಗ್‌ಗಳನ್ನು ನೀಡುತ್ತಿಲ್ಲ, ಮಕ್ಕಳಿಗೆ ಆತ್ಮವಿಶ್ವಾಸ, ಗೌರವ ಮತ್ತು ತಮ್ಮ ಶಿಕ್ಷಣವನ್ನು ಮುಂದುವರಿಸುವ ಪ್ರೋತ್ಸಾಹವನ್ನು ನೀಡುತ್ತಿದ್ದೇವೆ. ಇದು ಅವರ ಶೈಕ್ಷಣಿಕ ಭವಿಷ್ಯಕ್ಕೆ ಬಲವಾದ ಅಡಿಪಾಯ ನಿರ್ಮಿಸಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
ಶಿಕ್ಷಣವು ಅದಾನಿ ಫ಼ೌಂಡೇಶನ್‌ನ ಪ್ರಮುಖ ಸಿಎಸ್‌ಆರ್ ಆದ್ಯತೆಯಾಗಿದ್ದು, ಪ್ರತೀವರ್ಷ ಸಿಎಸ್‌ಆರ್ ಬಜೆಟ್‌ನ ಸುಮಾರು ಶೇ. 20 ಮೊತ್ತವನ್ನು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮೀಸಲಿಡಲಾಗುತ್ತಿದೆ ಎಂದವರು ಹೇಳಿದ್ದಾರೆ.