ಸಾರಾಂಶ
ಹಾವೇರಿ: ಮನುಷ್ಯ ಮುಂದೆ ಬರಲು ಧ್ಯಾನ ಮತ್ತು ಜ್ಞಾನ ಬಹಳ ಮುಖ್ಯ. ಇವೆರಡೂ ಆಗಬೇಕಾದರೆ ವಿದ್ಯೆ ಮತ್ತು ಧಾರ್ಮಿಕ ಸಂಸ್ಕಾರ ಮುಖ್ಯ. ಯಾವ ಸಮಾಜದಲ್ಲಿ ವಿದ್ಯಾವಂತರು ಸಂಸ್ಕಾರವಂತರು ಇರುತ್ತಾರೊ ಆ ಸಮಾಜಕ್ಕೆ ಒಳ್ಳೆಯ ಭವಿಷ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಹಾನಗಲ್ಲ ರಸ್ತೆಯ ತುಳಸಿ ಐಕಾನ್ ಬಡಾವಣೆಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಏರ್ಪಡಿಸಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನ 201ನೇ ವಿಜಯೋತ್ಸವ, ರಾಣಿ ಚೆನ್ನಮ್ಮನ ವೃತ್ತದ ಭೂಮಿ ಪೂಜೆ, ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಯುದ್ಧದಲ್ಲಿ ಮೊದಲು ಸೈನಿಕರು, ಸೇನಾಪತಿ ಹೋಗುತ್ತಾರೆ. ಆದರೆ, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೆ ಅಲ್ಲ. ವೀರ ರಾಣಿ ಕಿತ್ತೂರು ಚೆನ್ನಮ್ಮಳೇ ಯುದ್ಧದಲ್ಲಿ ಮೊದಲು ಹೋಗಿ ಯುದ್ಧ ಭೂಮಿಯಲ್ಲಿ ನಾಯಕತ್ವ ಕೊಟ್ಟಿರುವ ವೈಶಿಷ್ಟ್ಯ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಳದು. ಚೆನ್ನಮ್ಮಾಜೀ ಅವರನ್ನು ಬೈಲಹೊಂಗಲ ಜೈಲಿನಲ್ಲಿ ಹಾಕಿದಾಗ ಬ್ರಿಟಿಷರು ಪ್ರತಿದಿನ ಅವಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದರು. ಆದರೆ, ಎಂದೂ ಕುಗ್ಗಿರಲಿಲ್ಲ. ಆದರೆ, ಯಾವಾಗ ಸಂಗೊಳ್ಳಿ ರಾಯಣ್ಣ ಸೆರೆ ಸಿಕ್ಕ ಅಂತ ಸುದ್ದಿ ಬಂತೊ ಆಗ ಚೆನ್ನಮ್ಮ ತನ್ನ ಆತ್ಮಾಹುತಿ ಮಾಡಿಕೊಂಡಳು. ಅಂದರೆ ನಂಬಿಕೆಯನ್ನು ಇಟ್ಟು ಯಾವ ರೀತಿ ತಮ್ಮ ಸಂಸಾರ ನೋಡಿಕೊಳ್ಳುತ್ತಿದ್ದಳು ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಿದರು.ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದು ಸುಲಭವಿರಲಿಲ್ಲ. ಆದರೆ, ಚೆನ್ನಮ್ಮ ಮೋಸಕ್ಕೆ ಬಲಿಯಾದಳು. ನಮಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರೇರಣೆ. ಅವರಿಗೆ ಇಡೀ ದೇಶಕ್ಕೆ ಪ್ರೇರಣೆ ಕೊಡುವ ಶಕ್ತಿ ಇದೆ. ಅದಕ್ಕಾಗಿಯೇ ಸಂಸತ್ತಿನಲ್ಲಿ ಅವರ ಪ್ರತಿಮೆಗೆ ಗೌರವದಿಂದ ತಲೆ ಬಾಗುತ್ತೇವೆ ಎಂದು ಹೇಳಿದರು.ಪಂಚಮಸಾಲಿ ಸಮಾಜ ನನಗೆ ಬಹಳಷ್ಟು ಪ್ರೀತಿ ವಿಶ್ವಾಸ ಸಹಾಯ ಸಹಕಾರ ಕೊಟ್ಟಿದೆ. ನಾನು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ನಾನು ಚಿರ ಋಣಿಯಾಗಿದ್ದೇನೆ. ನಾವು ಮಾಡುವ ಕೆಲಸ ಆ ಪ್ರೀತಿಯ ಮುಂದೆ ಅಲ್ಪ, ಯಾವುದೇ ಸಮಾಜ ಯಾವುದೇ ವ್ಯಕ್ತಿಗೆ ಸಹಾಯ ಮಾಡಿದಾಗ ಆ ಆಶೀರ್ವಾದದ ಶಕ್ತಿ ದೊಡ್ಡದು.
ಕಟ್ಟಡಕ್ಕೆ ಅಗತ್ಯ ನೆರವು: ನಾನು ವಿಧಾನಸಭಾ ಸದಸ್ಯನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಈಗ ಲೋಕಸಭಾ ಸದಸ್ಯನಾಗಿದ್ದೇನೆ. ಇಲ್ಲಿ ದೊಡ್ಡ ಜವಾಬ್ದಾರಿಯನ್ನು ರುದ್ರಪ್ಪ ಲಮಾಣಿಯವರು ತೆಗೆದುಕೊಂಡಿದ್ದಾರೆ. ಕಟ್ಟಡ ಕಟ್ಟಲು ಎಲ್ಲರ ಸಹಕಾರ ಕೇಳಿ, ಈಗಾಗಲೇ ಶಿವಾನಂದ ಪಾಟೀಲರು 25 ಲಕ್ಷ ರು. ಕೊಟ್ಟಿದ್ದಾರೆ ಅವರಿಗೆ ಅಭಿನದಂನೆಗಳು. ನನ್ನ ಸಂಸದರ ನಿಧಿಯಿಂದ ಎಷ್ಟು ಸಾಧ್ಯವೂ ಅಷ್ಟು ಹಣ ಕೊಡುತ್ತೇನೆ ಎಂದು ಹೇಳಿದರು.ರಾಜ್ಯಾದ್ಯಂತ ಚೆನ್ನಮ್ಮನ ಜ್ಯೋತಿ: ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಆ ಸಂದರ್ಭದಲ್ಲಿ ಕಿತ್ತೂರು ಜ್ಯೋತಿ ಬೆಳಗಾವಿಯಲ್ಲಿ ಸುತ್ತಿ ಅಲ್ಲಿಯೇ ಕಿತ್ತೂರಿಗೆ ಹೋಗುತ್ತಿತ್ತು. ಕಿತ್ತೂರು ಚೆನ್ನಮ್ಮಳನ್ನು ಬೆಳಗಾವಿಗೆ ಮಾತ್ರ ಸೀಮಿತ ಮಾಡಬೇಡಿ ಎಂದು ಕಿತ್ತೂರು ಚೆನ್ನಮ್ಮನ ಜ್ಯೋತಿಯನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮತ್ತೆ ಕಿತ್ತೂರಿಗೆ ಬರುವಂತೆ ಮಾಡಿದೆ ಈಗ ಅದು ನಿರಂತರವಾಗಿ ನಡೆಯುತ್ತಿದೆ. ನಮ್ಮ ನಾಯಕರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಕಿತ್ತೂರು ಕೋಟೆ ಅಭಿವೃದ್ಧಿಗೆ 8 ಕೋಟಿ ರು. ಕೊಟ್ಟಿರುವುದನ್ನು ಸ್ಮರಿಸುತ್ತೇನೆ ಎಂದರು.;Resize=(128,128))
;Resize=(128,128))
;Resize=(128,128))