ಮೊಬೈಲ್ಗಳಿಗೆ ಅನಾಮಿಕ ವ್ಯಕ್ತಿಗಳಿಂದ ಅಥವಾ ಅಪರಿಚಿತ ಮೂಲಗಳಿಂದ ಅನಗತ್ಯ ಆ್ಯಪ್ ಗಳು,
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಜಾಗರೂಕತೆಯಿಂದ ಬಳಸುವುದರ ಜೊತೆಗೆ, ಪೋಷಕರಲ್ಲಿಯೂ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಇನ್ಸ್‌ಪೆಕ್ಟರ್ ಗಂಗಾಧರ್ ಹೇಳಿದರು.ತಾಲೂಕಿನ ಹಿರೇಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮೊಬೈಲ್ಗಳಿಗೆ ಅನಾಮಿಕ ವ್ಯಕ್ತಿಗಳಿಂದ ಅಥವಾ ಅಪರಿಚಿತ ಮೂಲಗಳಿಂದ ಅನಗತ್ಯ ಆ್ಯಪ್ ಗಳು, ಲಿಂಕ್ ಗಳು ಹಾಗೂ ಸಂದೇಶಗಳು ಬಂದಾಗ ಅವುಗಳನ್ನು ತೆರೆಯದೆ ನಿರ್ಲಕ್ಷಿಸಬೇಕು. ಯಾವುದೇ ಅಪರಿಚಿತ ಆ್ಯಪ್ ಗಳನ್ನು ಮೊಬೈಲ್ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಬಾರದು. ವೈಯಕ್ತಿಕ ಮಾಹಿತಿ, ಬ್ಯಾಂಕ್ಖಾತೆ ವಿವರ, ಪಾಸ್ವರ್ಡ್, ಓಟಿಪಿ ಸೇರಿದಂತೆ ಯಾವುದೇ ಮಾಹಿತಿಯನ್ನು ಅಪರಿಚಿತರಿಗೆ ನೀಡಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ಮಳೆಯ ಕೊರತೆ ಹಾಗೂ ಬರಗಾಲದ ಪರಿಸ್ಥಿತಿಯಿಂದ ಪರಿಸರ ಸಂರಕ್ಷಣೆಯ ಅಗತ್ಯ ಮತ್ತಷ್ಟು ಹೆಚ್ಚಾಗಿದೆ. ಪರಿಸರದ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಕೆಲಸ ಮಾಡಬೇಕು ಎಂದರು.ಶಾಲೆಯ ಪ್ರಾಂಶುಪಾಲರಾದ ಕುಬ್ರ ಮುಬೀನ, ಜಿಲ್ಲಾ ಜನಜಾಗೃತಿ ಸದಸ್ಯರಾದ ಸ್ವಾಮಿ ಮಾಸ್ಟರ್, ಸಿ.ಎನ್. ನಾಗಣ್ಣ, ವಿನಯ ಭಜರಂಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ವೇಣುಗೋಪಾಲ್, ಕೃಷಿ ಮೇಲ್ವಿಚಾರಕ ತಿರುಮಲ್ಲೇಶ್, ಮೇಲ್ವಿಚಾರಕಿ ಶಾಂತ, ಸೇವಾಪ್ರತಿನಿಧಿಗಳಾದ ಮಹೇಶ್, ದೇವಿಕಾ, ಜಯರಾಮ್, ವೆಂಕಟಪ್ಪನಾಯಕ, ರಾಜೇಗೌಡ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಯೋಜನೆಯ ಸಿಬ್ಬಂದಿ ಇದ್ದರು.