ಸಾರಾಂಶ
ಹೊಳೆನರಸೀಪುರ: ತಾಲೂಕಿನ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ, ಕರ್ನಾಟಕ ರಾಜ್ಯ ಸರ್ಕಾರವು ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024 ಎಂದು ಗುರುತಿಸಿ, ನೀಡಿದ ಪ್ರಶಸ್ತಿ ಹಾಗೂ ಪಾರಿತೋಷಕವನ್ನು ಬೆಂಗಳೂರಿನ ವಿಕಾಸಸೌಧದಲ್ಲಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರಿಂದ ಶುಕ್ರವಾರ ಸ್ವೀಕರಿಸಿದರು.

ಬರ ಪರಿಸ್ಥಿತಿಯಲ್ಲಿ ವಿಳಂಬವಿಲ್ಲದೇ ಪರಿಹಾರ ವಿತರಣೆ, ತಹಸೀಲ್ದಾರ್ ನ್ಯಾಯಾಲಯದಲ್ಲಿದ್ದ 520 ಪ್ರಕರಣಗಳ ತ್ವರಿತ ವಿಲೇವಾರಿ, ಖಾತೆ, ಪೌತಿ ಖಾತೆ ಹಾಗೂ ಪೋಡಿಯ ತ್ವರಿತ ವಿಲೇವಾರಿ ಜತೆಗೆ ಮಂಜೂರಾತಿಗಳನ್ನು ಮಾಡಿ ಜಿಲ್ಲೆಗೆ ಅತ್ಯುತ್ತಮ ತಾಲೂಕು ಕಚೇರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾರ್ವಜನಿಕರೊಂದಿಗೆ ಹಾಗೂ ಸಿಬ್ಬಂದಿ ಜತೆಗೆ ಉತ್ತಮ ನಡವಳಿಕೆ ಹಾಗೂ ಮಾತಿನಲ್ಲಿ ಸೌಮ್ಯತೆ ಹಾಗೂ ಉತ್ತಮ ಒಡನಾಟದಿಂದ ವಿಳಂಬವಿಲ್ಲದೇ ಕಡತಗಳ ವಿಲೇವಾರಿ ಮತ್ತು ಕರ್ತವ್ಯದಲ್ಲಿ ಶಿಸ್ತು ಇವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರವು ಅತ್ಯುತ್ತಮ ತಹಸೀಲ್ದಾರ್ ಪ್ರಶಸ್ತಿಗೆ 20 ಅಧಿಕಾರಿಗಳನ್ನು ಗುರುತಿಸಿದ್ದು, ಅದರಲ್ಲಿ ತಾಲೂಕಿನ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರನ್ನು ಗುರುತಿಸಿದೆ. ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಸತ್ಯಭಾಮ, ಉಪ ವಿಭಾಗಾಧಿಕಾರಿ ಮಾರುತಿ ಹಾಗೂ ಇತರೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಪ್ರಶಸ್ತಿ ಸ್ವೀಕರಿಸಿದ್ದಾರೆ.