ಸಾರಾಂಶ
ಕನ್ನಡಪ್ರಭ ವಾರ್ತೆ ಖಾನಾಪುರ: ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ ಅವರಿಗೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ (ಕೆಕೆಎಂಪಿ) ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೆಕೆಎಂಪಿ ಯುವ ಘಟಕದ ರಾಜ್ಯಾಧ್ಯಕ್ಷ ರೋಹನರಾವ್ ಸಾಠೆ ಹೇಳಿದರು.
ಕನ್ನಡಪ್ರಭ ವಾರ್ತೆ ಖಾನಾಪುರಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ ಅವರಿಗೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ (ಕೆಕೆಎಂಪಿ) ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೆಕೆಎಂಪಿ ಯುವ ಘಟಕದ ರಾಜ್ಯಾಧ್ಯಕ್ಷ ರೋಹನರಾವ್ ಸಾಠೆ ಹೇಳಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ಕೆಕೆಎಂಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಕೆಎಂಪಿ ಯಾವುದೇ ರಾಜಕೀಯ ಪಕ್ಷದ ಪರ ಅಲ್ಲ. ಆದರೆ, ಸದ್ಯ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಡಾ.ಅಂಜಲಿ ನಿಂಬಾಳಕರ ಅವರಿಗೆ ಮಾತ್ರ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಕರ್ನಾಟಕದಿಂದ ಮರಾಠಾ ಸಮುದಾಯದವರು ಲೋಕಸಭೆ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಮರಾಠಾ ಸಮುದಾಯಕ್ಕೆ ಸೇರಿರುವ 3 ಲಕ್ಷ ಮತದಾರರಿದ್ದಾರೆ. ಮರಾಠಾ ಸಮುದಾಯದವರನ್ನು ಭೇಟಿಯಾಗಿ ಡಾ.ಅಂಜಲಿ ಅವರನ್ನು ಬೆಂಬಲಿಸುವಂತೆ ಕೋರುವುದಾಗಿ ವಿವರಿಸಿದರು.ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಿತೀನ ಪವಾರ, ಮರಾಠಾ ಕ್ರಾಂತಿಮೋರ್ಚಾ ರಾಜ್ಯ ಸಂಯೋಜಕ ನಾರಾಯಣ ಗಣೇಶ, ರಾಯಬಾ ಜಾಧವ, ಸಂಭಾಜಿ ಬ್ರಿಗೇಡ್ ಮುಖ್ಯಸ್ಥ ಸತೀಶ ಸೂರ್ಯವಂಶಿ, ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ, ಹರೀಶ ನಿಂಬಾಳಕರ, ದಿಲೀಪ ಪವಾರ ಇತರರು ಇದ್ದರು.