ಕೊಡವ ಮುಸ್ಲಿಂ ಅಸೋಸಿಯೇಷನ್ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ದುದ್ದಿಯಂಡ ಎಚ್. ಸೂಫಿ ಹಾಜಿ ಪುನರಾಯ್ಕೆಗೊಂಡಿದ್ದಾರೆ.
ಪೊನ್ನಂಪೇಟೆ: ಕೊಡವ ಮುಸ್ಲಿಂ ಅಸೋಸಿಯೇಷನ್ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ದುದ್ದಿಯಂಡ ಎಚ್. ಸೂಫಿ ಹಾಜಿ ಪುನರಾಯ್ಕೆಗೊಂಡಿದ್ದಾರೆ. ವಿರಾಜಪೇಟೆಯಲ್ಲಿ ಇತ್ತೀಚಿಗೆ ನಡೆದ ಸಂಸ್ಥೆಯ 2023-26ನೇ ಸಾಲಿನ ತ್ರೈವಾರ್ಷಿಕ ಮಹಾಸಭೆಯಲ್ಲಿ ಮೂಲತಃ ವಿರಾಜಪೇಟೆ ಬಳಿಯ ನಲ್ವತ್ತೋಕ್ಲು ಗ್ರಾಮದವರಾದ ಸೂಫಿ ಹಾಜಿಯವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಗೊಳಿಸಲಾಗಿತ್ತು. ನೂತನ ಹಿರಿಯ ಉಪಾಧ್ಯಕ್ಷರಾಗಿ ಕಾಟ್ರಕೊಲ್ಲಿಯ ಅಕ್ಕಳತಂಡ ಎಸ್. ಮೊಯ್ದು, ಉಪಾಧ್ಯಕ್ಷರಾಗಿ ಕೊಟ್ಟಮುಡಿಯ ಹರಿಶ್ಚಂದ್ರ ಎ. ಹಂಸ ಮತ್ತು ಕೋಶಾಧಿಕಾರಿಯಾಗಿ ಹಳ್ಳಿಗಟ್ಟಿನ ಚಿಮ್ಮಿಚ್ಚಿರ ಇಬ್ರಾಹಿಂ (ಉಮ್ಣಿ) ಹಾಜಿ ಅವಿರೋಧವಾಗಿ ಆಯ್ಕೆಗೊಳಿಸಿದ ಮಹಾ ಸಭೆ, ಆಡಳಿತ ಮಂಡಳಿಯ ಉಳಿದ ಪದಾಧಿಕಾರಿಗಳನ್ನು ನೇಮಕಗೊಳಿಸುವ ಪೂರ್ಣ ಅಧಿಕಾರವನ್ನು ಈ ಪ್ರಮುಖರಿಗೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಸಂಸ್ಥೆಯ 2026-29ನೇ ಸಾಲಿನ ಪೂರ್ಣ ಪ್ರಮಾಣದ ಕಾರ್ಯಕಾರಿ ಸಮಿತಿಯನ್ನು ಅಧ್ಯಕ್ಷ ಡಿ.ಹೆಚ್. ಸೂಫಿ ಹಾಜಿ ಘೋಷಿಸಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ತೂಚಮಕೇರಿಯ ಈತಲತಂಡ ಎಂ. ರಫೀಕ್ ಪುನರಾಯ್ಕೆಗೊಂಡಿದ್ದು, ಮೂರ್ನಾಡಿನ ಹಿರಿಯ ವೈದ್ಯರಾದ ಡಾ. ಜೋಯಿಪೆರ ಎ. ಕುಂಜ್ಹಿಅಬ್ದುಲ್ಲಾ ಅವರನ್ನು ಸಂಸ್ಥೆಯ ಸಲಹೆಗಾರರಾಗಿ ಆಯ್ಕೆಗೊಳಿಸಲಾಗಿದೆ. ಸಂಘಟನಾ ಕಾರ್ಯದರ್ಶಿಯಾಗಿ ಕೊಟ್ಟೋಳಿಯ ಮೀತಲ್ತಂಡ ಎಂ. ಇಸ್ಮಾಯಿಲ್, ನೂತನ ಸಹ ಕಾರ್ಯದರ್ಶಿಯಾಗಿ ವಿರಾಜಪೇಟೆಯ ಆಲೀರ ಹೆಚ್. ಅಬ್ದುಲ್ ಲತೀಫ್ ನೇಮಕಗೊಂಡಿದ್ದಾರೆ. ಹಿರಿಯ ನಿರ್ದೇಶಕರಾಗಿ ಚಾಮಿಯಾಲದ ಪುದಿಯತ್ತಂಡ ಎಚ್. ಶಂಸುದ್ದೀನ್, ಕೊಂಡಂಗೇರಿಯ ಕುಪ್ಪಂದಿರ ಕೆ. ಯೂಸುಫ್ ಹಾಜಿ ಮತ್ತು ಬೇಟೋಳಿಯ ಮಂಡೇಂಡ ಎ. ಮೊಯ್ದು ಅವರನ್ನು ನೇಮಿಸಲಾಗಿದೆ.ಕೊಂಡಂಗೇರಿಯ ಪುಡಿಯಂಡ ಇ. ಶಾದುಲಿ, ಚಾಮಿಯಾಲದ ಪುದಿಯಾಣೆರ ಎಂ. ಹನೀಫ್, ಎಡಪಾಲದ ಕುಪ್ಪೋಡಂಡ ಎ. ಅಬ್ದುಲ್ ರಶೀದ್, ವಿರಾಜಪೇಟೆಯ ದುದ್ದಿಯಂಡ ಎಚ್. ಮೊಯ್ದು, ಕೇಂಗೋಟಂಡ ಎಸ್. ಸೂಫಿ, ಐಮಂಗಲದ ಕೋಳುಮಂಡ ಎಸ್. ರಫೀಕ್, ಪೊನ್ನಂಪೇಟೆಯ ಆಲೀರ ಎಂ. ರಶೀದ್, ಕೊಳಕೇರಿಯ ಚೆರುಮಾನಿಕಾರಂಡ ಎ. ಅಹಮದ್, ಹಾಲುಗುಂದದ ಕತ್ತಣಿರ ಎ. ಅಬ್ದುಲ್ ರಹಿಮಾನ್ (ಅಂದಾಯಿ), ಅಂಬಟ್ಟಿಯ ಕರ್ತೊರೆರ ಎಸ್. ಶರ್ಫುದ್ದೀನ್, ಕೋಕೇರಿಯ ಕಿಕ್ಕರೆ ಯು. ಮಹಮ್ಮದ್, ಕುಂಜಿಲದ ಕುಂಡಂಡ ಎ. ರಜಾಕ್, ಎಮ್ಮೆಮಾಡಿನ ಬಲ್ಯತ್ಕಾರಂಡ ಯು. ಮೊಹಮ್ಮದ್ ಅಶ್ರಫ್, ಚಿಟ್ಟಡೆಯ ಕೂವಲೆರ ಯು. ಫಕ್ರುದ್ದೀನ್ ಮತ್ತು ಕಂಡಂಗಾಲದ ಮಂದಮಾಡ ವೈ. ಹನೀಫ್ ಅವರನ್ನು ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಳಿಸಲಾಗಿದೆ. ಗುಂಡಿಕೆರೆಯ ಕುವೇಂಡ ವೈ. ಆಲಿ, ಕೊಮ್ಮೆತೋಡಿನ ಪೊಯಕೆರ ಎಸ್. ರಫೀಕ್, ದೇವಣಗೇರಿಯ ಪುಡಿಯಂಡ ಯು. ಹನೀಫ್ ಮತ್ತು ಚೆರಿಯಪರಂಬುವಿನ ಪರವಂಡ ಎ. ಸಿರಾಜುದ್ದೀನ್ ಆಡಳಿತ ಮಂಡಳಿಯ ಆಹ್ವಾನಿತರಾಗಿ ಆಯ್ಕೆಗೊಂಡಿದ್ದಾರೆ.