ಸಾರಾಂಶ
ಚಾಮನಾಳ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ನೂತನ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ಮಡಿವಾಳ ಎನ್. ಆಲಗೂರ ಅವರ ಪದಗ್ರಹಣ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ಯಾವುದೇ ಗ್ರಾಮದಲ್ಲಿ ರೈತರಿಗೆ ಸಮಸ್ಯೆ ಉಂಟಾದರೆ ಅದರ ಮೂಲ ತಿಳಿದುಕೊಂಡು ಹೋರಾಟದ ಮೂಲಕ ಅದನ್ನು ಬಗೆಹರಿಸಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ ಮದ್ದರಕಿ ಹೇಳಿದರು.ತಾಲೂಕಿನ ಚಾಮನಾಳ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ನೂತನ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ಮಡಿವಾಳ ಎನ್. ಆಲಗೂರ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತ ಸಂಘಕ್ಕೆ ಸೇರಿದ ಮೇಲೆ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಬದುಕು ಹೋರಾಟಕ್ಕೆ ಮೀಸಲಿಡಬೇಕು. ರೈತರ ಸಮಸ್ಯೆ ಅಂತ ಬಂದಾಗ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೇ ಒಗ್ಗೂಡಿ ರೈತ ಸಂಘಟನೆಯನ್ನು ಗಟ್ಟಿಗೊಳಿಸಿ ಹೋರಾಟ ರೂಪಿಸಬೇಕು. ಇತ್ತೀಚಿಗೆ ಮೆಣಸಿನಕಾಯಿ ಬೆಳೆಗೆ ನೀರು ಹರಿಸಲು ನಾರಾಯಣಪೂರ ಡ್ಯಾಂ ಬಳಿ ನಡೆಸಿದ ಹೋರಾಟದ ಬಗ್ಗೆ ತಿಳಿಸಿದರು.ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯ ರೈತರಿಗೆ ಹಸಿರು ಶಾಲು ಹೊದಿಸಿ, ರೈತಗೀತೆ ಹಾಡುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ನೂತನ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ಮಡಿವಾಳ ಎನ್. ಆಲಗೂರ ಅವರಿಗೆ ಸನ್ಮಾನಿಸಲಾಯಿತು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಉಪಾಧ್ಯಕ್ಷ ಪರಶುರಾಮ್, ನಿವೃತ್ತ ಪ್ರಾಂಶುಪಾಲ ಶಶಿಕಾಂತ್ ಚಾಮನಾಳಕರ್, ನಿವೃತ್ತ ಯೋಧ ಅಮೋಘಸಿದ್ದ ಬಾಗೇವಾಡಿ ಸೇರಿದಂತೆ ಇತರರಿದ್ದರು.ನನ್ನನ್ನು ರೈತ ಸಂಘದ ತಾಲೂಕಾಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ. ರೈತ ಸಂಘವನ್ನು ಜಾತ್ಯತೀತ, ಪಕ್ಷಾತೀತವಾಗಿ ಮುಂದುವರಿಸಿಕೊಂಡು ಸಂಘಟನೆಯನ್ನು ಬಲಿಪಡಿಸಿ, ರೈತ ಸಮಸ್ಯೆಗಳಿಗೆ ಹೋರಾಟ ರೂಪಿಸುತ್ತೇನೆ.
ಮಡಿವಾಳ ಎನ್. ಆಲಗೂರ, ನೂತನ ತಾಲೂಕಾಧ್ಯಕ್ಷ;Resize=(128,128))
;Resize=(128,128))
;Resize=(128,128))
;Resize=(128,128))