ಸಾರಾಂಶ
ರೋಣ ಪಟ್ಟಣದ ಮಡಿವಾಳ ಮಾಚೀದೇವ ವಿದ್ಯಾಸಂಸ್ಥೆಯ ಶ್ರೀ ಶಾರದಾ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ 10ನೇ ತರಗತಿ ವಿದ್ಯಾರ್ಥಿಗಳಿಗೆ 'ಕನ್ನಡಪ್ರಭ' ಯುವ ಆವೃತ್ತಿ ವಿತರಿಸಲಾಯಿತು.
ರೋಣ: ಪತ್ರಿಕೆ ಓದುವುದರಿಂದ ಪ್ರಚಲಿತ ವಿದ್ಯಮಾನ ಮತ್ತು ಸಾಮಾನ್ಯ ಜ್ಞಾನ ವೃದ್ಧಿಯಾಗುವ ಜತೆಗೆ ಬುದ್ಧಿಶಕ್ತಿ ವಿಕಸಗೊಳ್ಳುವುದು. ಆದ್ದರಿಂದ ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಶಾರದಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್.ಬಿ. ಮಡಿವಾಳರ ಹೇಳಿದರು.
ಗುರುವಾರ ಪಟ್ಟಣದ ಮಡಿವಾಳ ಮಾಚೀದೇವ ವಿದ್ಯಾಸಂಸ್ಥೆಯ ಶ್ರೀ ಶಾರದಾ ಬಾಲಕಿಯರ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ''''ಕನ್ನಡಪ್ರಭ'''' ಯುವ ಆವೃತ್ತಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣವು ಜ್ಞಾನಾರ್ಜನೆಗಾಗಿ ವಿವಿಧ ವಿಷಯಗಳನ್ನು ನಾನಾ ಮಾರ್ಗಗಳಿಂದ ಪಡೆಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆಗಳು ಉತ್ತಮ ಶಿಕ್ಷಣದ ಸಾಧನಗಳಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಹಾಗೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಲು ಪೂರಕ ವಿಷಯಗಳನ್ನು ''''ಕನ್ನಡಪ್ರಭ'''' ಯುವ ಆವೃತ್ತಿ ಪ್ರಕಟಿಸುತ್ತಿದೆ. ವಿದ್ಯಾರ್ಥಿಗಳಿಗೆ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿಯುವಂತೆ, ಅತ್ಯಂತ ಸರಳವಾಗಿ ಮನಮುಟ್ಟುವಂತೆ ''''ಕನ್ನಡಪ್ರಭ'''' ಯುವ ಆವೃತ್ತಿಯಲ್ಲಿನ ಸಾಮಾನ್ಯ ಜ್ಞಾನ ಹಾಗೂ ಪಠ್ಯ ವಿಷಯಗಳನ್ನು ಪ್ರಕಟಿಸುತ್ತಿದೆ. ಯುವ ಆವೃತ್ತಿ ವಿದ್ಯಾರ್ಥಿಗಳ ಓದಿಗೆ ನೆರವಾಗಲಿದೆ. ಶಿಕ್ಷಣ ಕೇವಲ ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಅಂಕ ಗಳಿಸುವುದಕ್ಕೆ ಸೀಮಿತವಾಗಬಾರದು. ಭವಿಷ್ಯದ ಜೀವನ ಉಜ್ವಲಗೊಳ್ಳುವಲ್ಲಿ ಸಹಕಾರಿಯಾಗಬೇಕು ಎಂದರು.ಶಾಲೆಯ ಎಸ್‌ಎಸ್‌ಎಲ್‌ಸಿಯ 55 ವಿದ್ಯಾರ್ಥಿಗಳಿಗೆ ''''ಕನ್ನಡಪ್ರಭ'''' ಯುವ ಆವೃತ್ತಿ ವಿತರಿಸಲಾಯಿತು. ಮುಖ್ಯೋಪಾಧ್ಯಾಯ ಆರ್.ಬಿ. ಮಡಿವಾಳರ, ಸಹ ಶಿಕ್ಷಕರಾದ ವಿ.ಎಂ. ಬಾವಿ, ಎಚ್.ಆರ್. ಓಲೇಕಾರ, ಬಿ.ಎಚ್. ಕೊರ್ಲಹಳ್ಳಿ, ಮಂಜುಳಾ ಮಡಿವಾಳರ, ಎ.ಆರ್. ಹೆಬ್ಬಳ್ಳಿ, ಎಂ.ಎಸ್. ಹೊಸಮನಿ, ಐ.ಆರ್. ಕುಲಕರ್ಣಿ, ಅನ್ನಪೂರ್ಣಾ ಹೊಸಮನಿ, ವಿ.ಡಿ. ಮಾಳಗಿ, ಎಸ್.ಎಂ. ಪಾಟೀಲ, ಪಿ.ಆರ್. ನಾಯಕ, ಎಂ.ಎ. ಬಡೇಖಾನ, ಎಸ್.ಟಿ. ವಾಲ್ಮೀಕಿ, ಎಸ್.ಐ. ನೀಲಪ್ಪಗೌಡ್ರ, ಎಸ್.ಡಿ. ಹುಲ್ಲೂರು, ಎಸ್.ಎಫ್. ಹುಣಸಿಮರದ ಮುಂತಾದವರು ಉಪಸ್ಥಿತರಿದ್ದರು.