ಸಾರಾಂಶ
ಜ್ಞಾನವೇ ವಿದ್ಯಾರ್ಥಿಯ ಯಶಸ್ಸಿಗೆ ಅಂತಿಮ ಸಾಧನ ಎಂದು ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ ಹೇಮಂತ್ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಯಳಂದೂರು
ಜ್ಞಾನವೇ ವಿದ್ಯಾರ್ಥಿಯ ಯಶಸ್ಸಿಗೆ ಅಂತಿಮ ಸಾಧನ ಎಂದು ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ ಹೇಮಂತ್ ಕುಮಾರ್ ತಿಳಿಸಿದರು.ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ವರ್ಷದ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಸ್ವಾಗತ ಕಾರ್ಯಕ್ರಮ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜ್ಞಾನವೇ ವಿದ್ಯಾರ್ಥಿಯ ಸಾಧನೆಗೆ ಅಂತಿಮ ಸಾಧನ ಹಾಗೂ ಜ್ಞಾನಾರ್ಜನೆಯ ಮೂಲಕವೇ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯ ಎಂದರು.
ಇತಿಹಾಸ ಪ್ರಾಧ್ಯಾಪಕ ಪ್ರೊ ಗಣೇಶ್ ಪ್ರಕಾಶ್ ಮಾತನಾಡಿ, ಉತ್ತಮ ಮಾರ್ಗದರ್ಶನ ಕಂಡುಕೊಂಡು ಉತ್ತಮ ಜೀವನ ವೃದ್ಧಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಆಂಗ್ಲ ಭಾಷಾ ಉಪನ್ಯಾಸಕ ಶ್ರೀನಿವಾಸ ಅಂಬಳೆ ರವರು ಜನ್ಮದ ಅತ್ಯಂತ ಪುಟ್ಟ ಜೀವನವು ಬಹುಪಾಲು ನಿದ್ರೆಯಲ್ಲಿಯೇ ಕಳೆದು ಹೋಗುತ್ತದೆ. ಆದ್ದರಿಂದ ಈ ಅಲ್ಪ ಸಮದಲ್ಲಿಯೇ ವಿದ್ಯಾರ್ಥಿಗಳು ಸಾಧಿಸಬೇಕಾದದ್ದು ಬಹಳ ಎಂದು ಸಲಹೆ ನೀಡಿದರು.
ಕನ್ನಡ ಪ್ರಾಧ್ಯಾಪಕಿ ಪ್ರೊ ಪದ್ಮ ಮಾತನಾಡಿ, ಪರಿಶ್ರಮವೇ ವಿದ್ಯಾರ್ಥಿಯ ಏಳಿಗೆ ಕಾರಣವಾಗುವ ಸಂಗತಿ ಎಂದರು.ಮಂಜುಳ, ಕೆ. ಎಸ್.ಲಾಮಣಿ, ಮಂಜುನಾಥ್, ಮಹೇಶ್ಇದ್ದರು.