ಮಕ್ಕಳಲ್ಲಿ ಪಠ್ಯದ ಜತೆಗೆ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಅಗತ್ಯ ಜ್ಞಾನವನ್ನು ಪ್ರೌಢಶಾಲಾ ಹಂತದಲ್ಲಿಯೇ ಬೆಳೆಸುವ ನಿಟ್ಟಿನಲ್ಲಿ ಕನ್ನಡಪ್ರಭ ಯುವ ಆವೃತ್ತಿ ವಿಶೇಷ ಗಮನ ನೀಡಿ ಕೆಲಸ ಮಾಡುತ್ತಿದೆ.
ಗದಗ: ಕನ್ನಡಪ್ರಭ ಪತ್ರಿಕೆ ವಿದ್ಯಾರ್ಥಿಗಳಿಗಾಗಿಯೇ ರೂಪಿಸಿರುವ ಯುವ ಆವೃತ್ತಿಯು ಮಕ್ಕಳ ಸಮಗ್ರ ಜ್ಞಾನ ವೃದ್ಧಿಗೆ ಅತ್ಯಂತ ಉಪಯುಕ್ತಕಾರಿಯಾಗಿದೆ ಎಂದು ಭೈರನಹಟ್ಟಿ ದೊರೆಸ್ವಾಮಿ ಮಠ ಶಾಂತಲಿಂಗ ಶ್ರೀಗಳು ಅಭಿಪ್ರಾಯಪಟ್ಟರು.
ಭಾನುವಾರ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿರುವ ದೊರೆಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿದರು.ಮಕ್ಕಳಲ್ಲಿ ಪಠ್ಯದ ಜತೆಗೆ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಅಗತ್ಯ ಜ್ಞಾನವನ್ನು ಪ್ರೌಢಶಾಲಾ ಹಂತದಲ್ಲಿಯೇ ಬೆಳೆಸುವ ನಿಟ್ಟಿನಲ್ಲಿ ಕನ್ನಡಪ್ರಭ ಯುವ ಆವೃತ್ತಿ ವಿಶೇಷ ಗಮನ ನೀಡಿ ಕೆಲಸ ಮಾಡುತ್ತಿದೆ. ಮುಂದಿನ ತಲೆಮಾರನ್ನು ಅತ್ಯಂತ ಗಟ್ಟಿಯಾಗಿ ಮತ್ತು ಜ್ಞಾನಯುಕ್ತವಾಗಿ ನಿರ್ಮಾಣ ಮಾಡುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿಯೂ ಕನ್ನಡಪ್ರಭ ಅತ್ಯಂತ ಮುಂಚೂಣಿಯಲ್ಲಿದೆ ಎಂದರು.
ವಿದ್ಯಾರ್ಥಿಗಳಿಗೆ ನಿತ್ಯವೂ ಪೂರೈಕೆ ಮಾಡುತ್ತಿರುವ ಯುವ ಆವೃತ್ತಿಯನ್ನು ವಿದ್ಯಾರ್ಥಿಗಳಿಗೂ ತಪ್ಪದೇ ಓದಬೇಕು ಹಾಗೂ ಅವುಗಳನ್ನು ಜತನದಿಂದ ತೆಗೆದಿಟ್ಟುಕೊಂಡು, ಅವಶ್ಯವಿರುವಾಗಲೆಲ್ಲ ಮರುಬಳಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ಈಗಿನಿಂದಲೇ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕನ್ನಡಪ್ರಭದ ಯುವ ಆವೃತ್ತಿಯಲ್ಲಿನ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಐಎಎಸ್, ಐಪಿಎಸ್ ಮತ್ತು ಕೆಎಎಸ್ ಪರೀಕ್ಷೆಗಳಲ್ಲಿ ನಮ್ಮ ಮಠದಲ್ಲಿನ ವಿದ್ಯಾರ್ಥಿಗಳು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.ಸಾಮಾಜಿಕ ಕಾರ್ಯಕರ್ತ ಮಂಜುನಾಥ ಬ್ಯಾಳಿ ಮಾತನಾಡಿ, ಕನ್ನಡಪ್ರಭ ಯುವ ಆವೃತ್ತಿ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿದೆ. ಅದಕ್ಕಾಗಿಯೇ ಅದನ್ನು ಪ್ರತಿಯೊಂದು ಶಾಲೆಯವರು ಪಡೆದುಕೊಂಡು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಭಾಷೆಯನ್ನು ಬರೆಯಬೇಕು ಎಂದ ಅವರು, ಶ್ರೀಮಠದೊಂದಿಗಿನ ಅವರ ಒಡನಾಟ, ನಾಡು, ನುಡಿ, ಜಲ ಭಾಷೆಗಾಗಿ ಅವಿರತ ಶ್ರಮಿಸುತ್ತಿರುವ ಶಾಂತಲಿಂಗ ಶ್ರೀಗಳ ಕನ್ನಡಪ್ರೇಮ ಸೇರಿದಂತೆ ಹಲವಾರು ಪ್ರಮುಖ ವಿಷಯದ ಕುರಿತು ಮಾತನಾಡಿದರು.
ಕನ್ನಡಪ್ರಭ ಜಿಲ್ಲಾ ಪ್ರಧಾನ ವರದಿಗಾರ ಶಿವಕುಮಾರ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸರಣ ವಿಭಾಗದ ಪ್ರಸಾದ ಕೆ. ಸೇರಿದಂತೆ ಶ್ರೀಮಠದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಮಾಹಾಂತೇಶ ಹಿರೇಮಠ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಕನ್ನಡಪ್ರಭದ ಯುವ ಆವೃತ್ತಿ ಹಾಗೂ ನವಜ್ಯೋತಿ ಸಂಸ್ಥೆಯ ದಿನದರ್ಶಿಕೆಯನ್ನು ಶ್ರೀಗಳು ಬಿಡುಗಡೆ ಮಾಡಿದರು.