ಸಾರಾಂಶ
ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘ ಹೂಟಗಳ್ಳಿ ಮೈಸೂರು 11ನೇ ವರ್ಷದ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘ ಹೂಟಗಳ್ಳಿ ಮೈಸೂರು ಇದರ 11 ನೇ ವರ್ಷದ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಜರುಗಿತು.ಸಂಘದ ಅಧ್ಯಕ್ಷರಾದ ಪೊನ್ನಚನ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯಲ್ಲಿ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕಿದ್ದು ನೂತನ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷರಾಗಿದ್ದ ಪೊನ್ನಚನ ಅಪ್ಪಯ್ಯ ಹಾಗೂ ಅವರ ತಂಡದವರು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಪೊನ್ನಚ್ಚನ ಅಪ್ಪಯ್ಯ, ಉಪಾಧ್ಯಕ್ಷ ಚೆರುಕನ ಲವ, ಗೌರವ ಕಾರ್ಯದರ್ಶಿ ಮುಕ್ಕಾಟಿ ಅರುಣ ಕುಮಾರ್, ಸಹ ಕಾರ್ಯದರ್ಶಿ ಹೊಸೋಕ್ಲು ಅಪ್ಪಯ್ಯ, ಖಚಾಂಚಿ ಎಡಿಕೇರಿ ಪೂಣಚ್ಚ, ನಿರ್ದೇಶಕರಾಗಿ ಕರ್ಣಯ್ಯನ ನೀಲಾಕ್ಷಿ ಮೋಹನ್, ಚಿಕ್ಕೋಡಿ ಪುಷ್ಪ , ರೇಖಾ ರಮೇಶ್ , ನೆಕ್ಕಿಲ ಮಾದವ, ಉದಿಯನ ಸುರೇಶ್, ಚೆರುಕನ ಕುಶ, ಚೀಯಪ್ಪನ ರಾಜೇಶ್, ಸೂರ್ತಲೆ ಹರೀಶ್, ಮುಕ್ಕಾಟಿ ತಿಲಕಾ ನಂದ, ಸಲಹಾ ಸೂಚಕರಾಗಿ ಸಂಘದ ಮಾಜಿ ಅಧ್ಯಕ್ಷರಾದ ಚೆಟ್ಟಿಮಾಡ ಜನಾರ್ಧನ ಮತ್ತು ನಡುಮನೆ ಚಂಗಪ್ಪ ನವರನ್ನು ಆಯ್ಕೆಮಾಡಲಾಯಿತು. ಮುಂದಿನ ಎರಡು ವರ್ಷದ ಅವಧಿಗೆ ಈ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಲಿದೆ ಎಂದು ಕಾರ್ಯದರ್ಶಿ ಮುಕ್ಕಾಟಿ ಅರುಣ ಅವರು ಸಭೆಯಲ್ಲಿ ಪ್ರಕಟಿಸಿದರು.