ಸಾರಾಂಶ
ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ಮೂವತ್ತು ಕೆ ವಿ ಜನರೇಟರ್ ಮತ್ತು ಇದಕ್ಕೆ ನಿರ್ಮಾಣ ಮಾಡಲಾಗಿರುವ ನೂತನ ಕೊಠಡಿಯನ್ನು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ಮೂವತ್ತು ಕೆವಿ ಜನರೇಟರ್ ಮತ್ತು ಇದಕ್ಕೆ ನಿರ್ಮಾಣ ಮಾಡಲಾಗಿರುವ ನೂತನ ಕೊಠಡಿಯನ್ನು ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಉದ್ಘಾಟಿಸಿದರು.ಹಿಂದೆ ಇದ್ದ 15 ಕೆವಿ ಜನರೇಟರ್ ಬದಲಾಗಿ 6 ಲಕ್ಷ ರುಪಾಯಿ ವೆಚ್ಚದಲ್ಲಿ ನೂತನ ಜನರೇಟರ್ ಖರೀದಿಸಿ ಇದಕ್ಕೆ ಸುಸಜ್ಜಿತ ಕೊಠಡಿ ನಿರ್ಮಾಣ ಮಾಡಲಾಗಿದ್ದು, ಇದರ ಸದುಪಯೋಗವನ್ನು ಸಭೆ ಸಮಾರಂಭಗಳನ್ನು ನಡೆಸುವರು ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ಸಮಾಜದ ಉಪಾಧ್ಯಕ್ಷ ಚರ್ಮಂಡ ಅಪ್ಪುಣು ಪೂವಯ್ಯ, ಗೌರವ ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್, ಕಾಯಂ ಆಹ್ವಾನಿತ ಪದಾಧಿಕಾರಿಗಳಾದ ಪಡಿಞರಂಡ ಅಯ್ಯಪ್ಪ, ಖಚಾಂಚಿ ಕೊರಂಡ ಪ್ರಕಾಶ್ ನಾಣಯ್ಯ, ನಿರ್ದೇಶಕಕರಾದ ತೊರೇರ ಮುದ್ದಯ್ಯ, ಪಾನಿಕುಟ್ಟಿರ ಕುಟ್ಟಪ್ಪ, ಕೊಂಗೆಪ್ಪಂಡ ರಘು, ತೊರೇರ ರಾಜಪೂವಯ್ಯ, ಪಂದಿಕಂಡ ಕುಶದಿನೇಶ್, ಕೊಕ್ಕೇರ ಜಗನಾಥ್, ಕೊಪ್ಪಡ ಪಟ್ಟು ಪಳಂಗಪ್ಪ, ಮೂರೀರ ಶಾಂತಿ, ಮಲ್ಲಾಡ ಸುಥಾ, ಪೊಟ್ಟಂಡ ವಸಂತಿ, ಚಳಿಯಂಡ ಕಮಲಾ ಮುಂತಾದವರು ಹಾಜರಿದ್ದರು.