ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಕ್ರೀಡೆಗಳ ಅಭಿವೃದ್ಧಿಗಾಗಿ ಶಾಶ್ವತ ಕ್ರೀಡಾ ತರಬೇತಿ ಕೇಂದ್ರ ಹಾಗೂ ಸ್ಟೇಡಿಯಂ ಅತ್ಯಗತ್ಯ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ 2026ನೇ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಗಳ ಅಭಿವೃದ್ಧಿಗಾಗಿ ಶಾಶ್ವತ ಕ್ರೀಡಾ ತರಬೇತಿ ಕೇಂದ್ರ ಹಾಗೂ ಸ್ಟೇಡಿಯಂ ಅತ್ಯಗತ್ಯವಾಗಿದೆ. ಕೊಡಗು ಜಿಲ್ಲೆ ಕ್ರೀಡೆಗೆ 18 ಒಲಂಪಿಯನ್ ಗಳನ್ನು ನೀಡಿದೆ. ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ 40 ಕೋಟಿ ರು. ಯೋಜನೆಗಳನ್ನು ರೂಪಿಸಿದ್ದು ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ ಸಮುದಾಯದ ಸಹಭಾಗಿತ್ವ ದಿಂದ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡೆಗೆ 18 ಒಲಂಪಿಯನ್ ಗಳನ್ನು ನೀಡಿದೆ. ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ 40 ಕೋಟಿ ರು. ಯೋಜನೆಗಳನ್ನು ರೂಪಿಸಿದ್ದು ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ. ಸಮುದಾಯದ ಸಹಭಾಗಿತ್ವ ದಿಂದ ಅಭಿವೃದ್ಧಿ ಹೊಂದಲು ಸಾಧ್ಯ. ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವುದರಿಂದ ಕ್ರೀಡಾಪಟುಗಳಾದ ಎಸ್ .ಪಿ. ಸುನಿಲ್ ಹಾಗೂ ನಿಖಿಲ್ ಅವರಿಗೆ ಉತ್ತಮ ನೌಕರಿ ಲಭಿಸಿದೆ. ಕ್ರೀಡಾಪಟುಗಳು ಉದ್ಯೋಗಾವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಕ್ರೀಡಾಕೂಟಗಳು ಸಹಕಾರಿ ಎಂದರು.
ಮಡಿಕೇರಿಯ ಮ್ಯಾನ್ ಕಾಂಪೌಂಡ್ ನಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 2.5 ಕೋಟಿ ಅನುದಾನ ದೊರೆತಿದೆ. ಇಲ್ಲಿನ ದೇವರಾಜ್ ಅರಸ್ ಭವನದ ಬಳಿ ಎರಡು ಕೋಟಿ ರು. ವೆಚ್ಚದಲ್ಲಿ ನೂತನ ಕ್ರೀಡಾ ಶೆಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವಿರಾಜಪೇಟೆ ತಾಲೂಕಿಗೆ ಇನ್ನೊಂದು ಕ್ರೀಡಾ ಶಾಲೆಯನ್ನು ಮಂಜೂರು ಮಾಡಲಾಗಿದೆ. ಸರ್ಕಾರ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದೆ 2028ರ ಒಲಂಪಿಕ್ಸ್ ಗೆ ಕ್ರೀಡಾಪಟುಗಳನ್ನು ತಯಾರು ಮಾಡಲು 60 ಮಂದಿಯನ್ನು ಗುರುತಿಸಿದ್ದು ಪ್ರತಿ ಕ್ರೀಡಾಪಟುವಿನ ಖಾತೆಗೆ 80 ಸಾವಿರ ರು. ಗೌರವಧನ ನೀಡಲಾಗುತ್ತಿದೆ ಎಂದರು. ಶಾಸಕ ಮಂತರ್, ವಿಧಾನಪರಿಷತ್ ಸದಸ್ಯ ಮಂಡಪಂಡ ಸುಜಾ ಕುಶಾಲಪ್ಪ ಇನ್ನಿತರ ಅತಿಥಿಗಳು ಮಾತನಾಡಿದರು. ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ 26ನೇ ಆವೃತ್ತಿಯ ಪಂದ್ಯಾವಳಿಗೆ ಕೊಡಗು ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕುಟ್ಟಪ್ಪ ಬೋಪಣ್ಣ ಚಾಲನೆ ನೀಡಿದರು. ಕರ್ನಲ್ ವಿನಯ್, ಒಲಂಪಿಯನ್ ಚೆಪ್ಪುಡಿರ ಪುನಚ್ಚ, ಬ್ರಿಗೇಡ್ ಚೇನಂಡ ಚೀಯಣ್ಣ , ಬಲ್ಲಚಂಡ ಬೋಪಣ್ಣ ಚೇನಂಡ ಹಾಕಿ ಸಮಿತಿ ಅಧ್ಯಕ್ಷ ಪಿ ಕರಂಬಯ್ಯ , ಚೇನಂಡ ಕುಟುಂಬದ ಪಟ್ಟಿದಾರ ಬಿ ಪೊನ್ನಪ್ಪ ಇನ್ನಿತರ ಉಪಸ್ಥಿತರಿದ್ದರು.ವೀಕ್ಷಕ ವಿವರಣೆಯನ್ನು ಮಾಲೇಟಿರ ಶ್ರೀನಿವಾಸ್, ಅಜ್ಜೆಟ್ಟಿರ ವಿಕ್ರಂ ಮುತ್ತಪ್ಪ, ಚೋಕಿರ ಅನಿತಾ ದೇವಯ್ಯ ನಿರ್ವಹಿಸಿದರು.ಟೂರ್ನಿಯಲ್ಲಿ ಭಾಗವಹಿಸಲು 383 ತಂಡಗಳು ನೋಂದಣಿಯಾಗಿದ್ದು ಮೂರು ಮೈದಾನಗಳಲ್ಲಿ ಆರಂಭಿಕ ಪಂದ್ಯಗಳು ಜರುಗಿದವು. ಪ್ರದರ್ಶನ ಪಂದ್ಯ ಯುಎಇ ಮತ್ತು ತಾಮನೆ ತಂಡಗಳ ನಡುವೆ ನಡೆಯಿತು. ಯುಎಇ 4 ಗೋಲುಗಳನ್ನು ಹಾಗೂ ತಾಮನೆ ಒಂದು ಗೋಲು ಗಳಿಸಿ ಯುಎಇ ವಿಜೇತವಾಯಿತು.ಚೆಂದ೦ಡ ಕಪ್ -2026 ಅಂಗವಾಗಿ ಪಟ್ಟಣದಲ್ಲಿ ಆಕರ್ಷಕ ಮೆರವಣಿಗೆ ನಡೆದವು. ನಾಪೋಕ್ಲು ಪಟ್ಟಣದ ಪೊನ್ನಾಡುಸೂಪರ್ ರ್ಮಾರ್ಕೆಟ್ ಬಳಿಯಿಂದ ಕ್ರೀಡಾಂಗಣದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಅಧಿಕ ಸಂಖ್ಯೆಯ ಕ್ರೀಡಾಭಿಮಾನಿಗಳು ಕೊಡವ ಧಿರಿಸು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಾದ್ಯ ಮೇಳದೊಂದಿಗೆ ಮೆರವಣಿಗೆ ಆಕರ್ಷಕವಾಗಿತ್ತು. ಕ್ರೀಡಾಂಗಣದ ಮುಖದ್ವಾರದ ಸಮೀಪ ಹಾಕಿ ಕ್ರೀಡಾಕೂಟದ ಜನಕ ಪಾಂಡಂಡ ಕುಟ್ಟಣಿ ಅವರ ಪುತ್ತಲಿಯನ್ನು ಅನಾವರಣ ಗೊಳಿಸ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಲಾಯಿತು ಇದುವರೆಗೆ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ತಂಡಗಳು ಗುಂಡು ಹಾರಿಸಿ ಮೆರವಣಿಗೆಯನ್ನು ಆಕರ್ಷಿಕವಾಗಿಸಿದರು. ಬಳಿಕ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಲಾಯಿತು. ದಿನದ ಪಂದ್ಯಾಟದಲ್ಲಿ ಓಡಿಯಮಡ ಚೋಲಪಂಡ ವಿರುದ್ಧ 7-1 ರಲ್ಲಿ, ಚೇರಿಯಂಡ ಪಾಸುರವಿರುದ್ಧ 5-0 ಅಂತರದಲ್ಲಿ, ಮಳವಂಡ ಪೂರಿಮಾಡ ವಿರುದ್ಧ 3-0 ಅಂತರದಲ್ಲಿ ಹಾಗೂ ಬೊಳಿಯಾಡಿರ ಉದ್ದಪಂಡ ವಿರುದ್ಧ 4-0 ಅಂತರದಲ್ಲಿ ಗೆಲುವು ಸಾಧಿಸಿದವು.ಇಂದಿನ ಪಂದ್ಯ ಗಳು:ಮೈದಾನ 1ಮಾದಂಡ vs ಕೊಕ್ಕಂಡ - ಬೆಳಿಗ್ಗೆ 9 ಗಂಟೆಮೊಣ್ಣಂಡ vs ಪುತ್ತೇರಿರ- ಬೆಳಿಗ್ಗೆ 10 ಗಂಟೆತಾತಂಡ vs ಚೊಟ್ಟೆಯನಮಾಡ - ಬೆಳಿಗ್ಗೆ 11 ಗಂಟೆಬಡುವಮಂಡ vs ಬಡುವಂಡ - ಮಧ್ಯಾಹ್ನ 12 ಗಂಟೆಪೂಲಂಡ vs ಪಾಲಚಂಡ - ಮಧ್ಯಾಹ್ನ 1 ಗಂಟೆಚಂದುರ vs ಮೂಕಳೆರ - ಮಧ್ಯಾಹ್ನ 2 ಗಂಟೆಚಂದಪಂಡ vs ಬಲ್ಲಚಂಡ - ಮಧ್ಯಾಹ್ನ 3 ಗಂಟೆಮೈದಾನ 2ಮರುವಂಡ vs ಅಯ ಮಂಡ - ಬೆಳಿಗ್ಗೆ 8 ಗಂಟೆಗೆಹಂಚೆಟ್ಟಿರ vs ಅಲ್ಲುಮಾಡ - ಬೆಳಿಗ್ಗೆ 9 ಗಂಟೆಗೆಬರಿಯಂಡ vs ಬಲ್ಯಂಡ - ಬೆಳಿಗ್ಗೆ 10 ಗಂಟೆಗೆಬೈರಜಂಡ vs ಪೊನ್ನಚಂಡ - ಬೆಳಿಗ್ಗೆ 11 ಗಂಟೆಗೆಕುಟ್ಟಂಡ (ಅಮ್ಮತ್ತಿ) vs ಐನಾರ್ವಂಡ - ಮಧ್ಯಾಹ್ನ 12 ಗಂಟೆಗೆಮಾಚಂಗಡ vs ಕುಟ್ಟೆಟ್ಟಿರ - ಮಧ್ಯಾಹ್ನ 1 ಗಂಟೆಗೆಅಜ್ಜಿನಿಕಂಡ vs ಬಟ್ಟಿರ - ಮಧ್ಯಾಹ್ನ 2 ಗಂಟೆಗೆಮೈದಾನ 3ಬೊಟ್ಟಂಗಡ vs ಕೆಚೆಟ್ಟಿರ (ಬೆಗೂರು) - ಬೆಳಿಗ್ಗೆ 9 ಗಂಟೆಗೆಕುಂಚೆಟ್ಟಿರ vs ಮಾಲೆಟಿರ (ಕೆ ದಮುಳೂರು) - ಬೆಳಿಗ್ಗೆ 10 ಗಂಟೆಗೆಅಚಪಂಡ vs ಕೂಪಡಿರ - ಬೆಳಿಗ್ಗೆ 11 ಗಂಟೆಗೆಅಲಮೆಂಗಡ vs ಚೆಟ್ಟಂಗಡ - ಮಧ್ಯಾಹ್ನ 12 ಗಂಟೆಗೆಮಾಲೆಟಿರ (ಕುಕ್ಲೂರು) vs ಮಾಚಮಾಡ - ಮಧ್ಯಾಹ್ನ 1 ಗಂಟೆಗೆಮಣಿಪಂಡ vs ಬೊದ್ದಂಡ - ಮಧ್ಯಾಹ್ನ 2 ಗಂಟೆಗೆಕೊರವಂಡ vs ಅಮ್ಮಟಂಡ.