ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗಿನ ಪುತ್ತರಿ ಹಬ್ಬಕ್ಕೆ ಡಿ.14ರ ದಿನ ನಿಶ್ಚಯಿಸಲಾಗಿದೆ. ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶುಕ್ರವಾರ ದೇವಾಲಯದ ತಕ್ಕ ಮುಖ್ಯಸ್ಥರು, ಪ್ರಮುಖರ ಹಾಗೂ ಭಕ್ತರ ಸಮ್ಮುಖದಲ್ಲಿ ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿ ಶಶಿಕುಮಾರ್ ಅವರು ನಿಗದಿ ಮಾಡಿದರು.ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಡಿ.14ರಂದು ರಾತ್ರಿ ಕರ್ಕಾಟಕ ಲಗ್ನದ ರೋಹಿಣಿ ನಕ್ಷತ್ರದಲ್ಲಿ 7.30ಕ್ಕೆ ಪುತ್ತರಿ ಹಬ್ಬದ ನೆರೆ ಕಟ್ಟುವುದು, ರಾತ್ರಿ 8.30ಕ್ಕೆ ಕದಿರು ಕೊಯ್ಯುವುದು, ರಾತ್ರಿ 9.30ಕ್ಕೆ ಊಟೋಪಚಾರ ನಡೆಯಲಿದೆ.
ಸಾರ್ವಜನಿಕರಿಗೆ ಡಿ.14 ರಂದು ರಾತ್ರಿ 7.50ಕ್ಕೆ ನೆರೆ ಕಟ್ಟುವುದು, ರಾತ್ರಿ 8.50ಕ್ಕೆ ಕದಿರು ತೆಗೆಯುವುದು ರಾತ್ರಿ 9.50ಕ್ಕೆ ಊಟೋಪಚಾರ ಸಮಯ ನಿಗದಿ ಮಾಡಿಕೊಳ್ಳಲಾಗಿದೆ.ಮುಹೂರ್ತದ ಮುನ್ನಾದಿನ ಶುಕ್ರವಾರ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ ನಡೆಯಲಿದೆ.
ಜ್ಯೋತಿಷ್ಯ ಶಶಿಕುಮಾರ್, ಕಣಿಯರ ನಾಣಯ್ಯ ಕುಟುಂಬದವರು ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿ ದಿನ ನಿಗದಿ ಮಾಡಿದ ಬಳಿಕ ದೇವತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ದಿನ ನಿಗದಿ ಪಟ್ಟಿಗೆ ವಿಶೇಷ ಪ್ರಾರ್ಥನೆಯ ಮೂಲಕ ಅರ್ಚಕರಿಗೆ ನೀಡಿ ಮುಖ್ಯ ಅರ್ಚಕ ಕುಶ ಭಟ್ ಮತ್ತು ಜಗದೀಶ್ ಪೂಜೆ ನೆರವೇರಿಸಿದ ಬಳಿಕ ತೀರ್ಥ ಪ್ರಸಾದ ನೀಡುವುದರ ಮೂಲಕ ತಕ್ಕ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.ನಂತರ ಭಕ್ತ ಜನ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ದೇವತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ವೇಳಾಪಟ್ಟಿ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು . ತಕ್ಕ ಮುಖ್ಯಸ್ಥ ಹಾಗೂ ಪ್ರಮುಖರಾದ ಕುಂಡ್ಯೋಳಂಡ ರಮೆಶ್ ಮುದ್ದಯ್ಯ, ಪಾಂಡಂಡ ನರೇಶ್ ಅಂಜಪರವಂಡ ರವಿ ಚೋಮಣಿ, ಕೇಟೋಳಿರ ಸನ್ನಿ ಸೋಮಣ್ಣ , ಕುಂಡಿಯೊಳಂದ ರಮೇಶ್ ಮುದ್ದಯ್ಯ, ಕಲ್ಯಾಟಂಡ ಮುತ್ತಪ್ಪ ಮತ್ತಿತರರು ಮಾತನಾಡಿ, ಪುತ್ತರಿ ಹಬ್ಬದ ಆಚರಣೆ ಜಿಲ್ಲೆಗೆ ವಿಶಿಷ್ಟವಾಗಿದೆ. ಧಾನ್ಯ ಲಕ್ಷ್ಮಿ ಮನೆಗೆ ಕರೆತರುವ ಹಬ್ಬವನ್ನು ಎಲ್ಲರೂ ನಿಗದಿ ಪಡಿಸಿದ ಸಮಯದಲ್ಲೇ ಆಚರಿಸುವಂತಾಗಬೇಕು. ದೇಶಕಟ್ಟನ್ನು ಎಲ್ಲರೂ ಪಾಲಿಸಬೇಕು. ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದ ಆಚರಣೆಯನ್ನು ಯಥಾವತ್ತಾಗಿ ಪಾಲಿಸಬೇಕು ಎಂದರು.ಪ್ರಮುಖರಾದ ರಾಜ ಅಪ್ಪಣ್ಣ , ಅಪ್ಪಣ್ಣ , ಕುಟ್ಟಪ್ಪ, ಬಟ್ಟೀರ ಚೋಂದಮ್ಮ , ಕುಟ್ಟಂಜೆಟ್ಟಿರ ಶಾಮ್ ಬೋಪಣ್ಣ, ಮೇದಪ್ಪ , ಕೇಟೋಳಿರ ಗಣಪತಿ, ಮಾರ್ಚಂಡ ಅಯ್ಯಪ್ಪ, ಪರದಂಡ ಸದಾ ನಾಣಯ್ಯ, ಬಿದ್ದಾಟಂಡ ಬೇಬಿ ಬೆಳ್ಯಪ್ಪ , ಕಣಿಯರ ನಾಣಯ್ಯ, ಪರದಂಡ ಸದಾ ನಾಣಯ್ಯ, ಕಲ್ಯಾಟಂಡ ರಾಜ ಅಪ್ಪಣ್ಣ, ಮೇರಿಯಂಡ ಅರಸು ಅಚ್ಚಮ್ಮ, ಗಗನ್, ಭುವೇರಿಯಂಡ ಪೂವಣ್ಣ ,ಕೊಳುವಂಡ ಕಾರ್ಯಪ್ಪ ಮತ್ತಿತರರಿದ್ದರು.