ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಪಿಇಟಿ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ 11ನೇ ರಾಜ್ಯ ಮಟ್ಟದ ಕಿವುಡರ ಟಿ.20 ಕ್ರಿಕೆಟ್ ಪಂದ್ಯಾವಳಿ ಸಂಭ್ರಮದಿಂದ ನಡೆಯಿತು.
ಮಡಿಕೇರಿ: ಮಂಡ್ಯ ಜಿಲ್ಲಾ ಕಿವುಡರ ಸಂಘದ ವತಿಯಿಂದ ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಪಿಇಟಿ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆದ 11ನೇ ರಾಜ್ಯ ಮಟ್ಟದ ಕಿವುಡರ ಟಿ.20 ಕ್ರಿಕೆಟ್ ಪಂದ್ಯಾವಳಿ ಸಂಭ್ರಮದಿಂದ ನಡೆಯಿತು.ಪಂದ್ಯಾವಳಿಯಲ್ಲಿ ಬಳ್ಳಾರಿ ತಂಡ ಪ್ರಥಮ, ಕೊಡಗು ದ್ವಿತೀಯ, ದಕ್ಷಿಣ ಕನ್ನಡ ತೃತೀಯ ಮತ್ತು ಮೈಸೂರು ತಂಡ ನಾಲ್ಕನೇ ಸ್ಥಾನ ಗಳಿಸಿತು. ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷರಾದ ಗೌರು ಸೋಮಣ್ಣ, ಉಪಾಧ್ಯಕ್ಷ ಕೆ.ಕೆ.ಶಂಕರ ನಾರಾಯಣ, ಕಾರ್ಯದರ್ಶಿ ರಂಜಿತ್, ಕೋಶಾಧಿಕಾರಿ ಸುರೇಶ್ ಮತ್ತಿತರರು ಕ್ರೀಡಾಕೂಟ ಹಾಗೂ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.