ಕೊಡಗು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಪದವಿ ಕೋರ್ಸ್‌‌ ಪ್ರವೇಶ ಆರಂಭ

| Published : Sep 05 2024, 12:37 AM IST

ಕೊಡಗು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಪದವಿ ಕೋರ್ಸ್‌‌ ಪ್ರವೇಶ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಆವರಣ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ ಇಲ್ಲಿ 2024-25 ಶೈಕ್ಷಣಿಕ ಸಾಲಿನ ಸ್ನಾತ್ತಕೋತ್ತರ/ಡಿಪ್ಲೊಮಾ/ಸರ್ಟಿಫಿಕೆಟ್ ಕಾರ್ಯಕ್ರಮಗಳಿಗೆ ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರವೇಶಾತಿ ಪ್ರಾರಂಭ ಆ.23ರಿಂದ ಆರಂಭಿಸಿದೆ., ದಂಡಶುಲ್ಕ ರಹಿತ ಕೊನೆಯ ದಿನಾಂಕ ಸೆ.10. ಪ್ರವೇಶಾತಿ ದಂಡ ಶುಲ್ಕ ಸಹಿತ ಕೊನೆಯ ದಿನಾಂಕ ಸೆ.15.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಆವರಣ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ ಇಲ್ಲಿ 2024-25 ಶೈಕ್ಷಣಿಕ ಸಾಲಿನ ಸ್ನಾತ್ತಕೋತ್ತರ/ಡಿಪ್ಲೊಮಾ/ಸರ್ಟಿಫಿಕೆಟ್ ಕಾರ್ಯಕ್ರಮಗಳಿಗೆ ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರವೇಶಾತಿ ಪ್ರಾರಂಭ ಆ.23ರಿಂದ ಆರಂಭಿಸಿದೆ., ದಂಡಶುಲ್ಕ ರಹಿತ ಕೊನೆಯ ದಿನಾಂಕ ಸೆ.10. ಪ್ರವೇಶಾತಿ ದಂಡ ಶುಲ್ಕ ಸಹಿತ ಕೊನೆಯ ದಿನಾಂಕ ಸೆ.15.

ಜ್ಞಾನಕಾವೇರಿ ಕ್ಯಾಂಪಸ್‌ನಲ್ಲಿ ನೀಡಲಾಗುವ ಕೋರ್ಸ್‌ಗಳು: ಎಂ.ಎಸ್ಸಿ: ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವವಿಜ್ಞಾನ, ಯೋಗ ವಿಜ್ಞಾನ, ರಸಾಯನಶಾಸ್ತ್ರ, ಗಣಕ ಯಂತ್ರ ವಿಜ್ಞಾನ, ಸಸ್ಯಶಾಸ್ತ್ರ ಮತ್ತು ಪರಿಸರ ವಿಜ್ಞಾನ,

ಎಂಕಾಂ, ಎಂ.ಎ.: ಕನ್ನಡ, ಕೊಡವ, ರಾಜ್ಯಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ,

ಎಂಎಸ್‌ಡಬ್ಲ್ಯೂ ಹಾಗೂ ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ.

ಎಫ್‌ಎಂಕೆಎಂಸಿ ಮಡಿಕೇರಿಯಲ್ಲಿ ನೀಡಲಾಗುವ ಕೋರ್ಸ್‌ಗಳು: ಎಂಎಸ್ಸಿ: ಭೌತಶಾಸ್ತ್ರ, ಎಂ.ಕಾಂ,

ಎಂಬಿಎ (TTM), ಎಂ.ಎ.: ಕೊಡವ, ಅರ್ಥಶಾಸ್ತ್ರ ಹಾಗೂ ಇಂಗ್ಲೀಷ್, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ.

ಕೊಡಗು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ, ಉತ್ತಮ ಗ್ರಂಥಾಲಯ, ವೈಫೈ ಮತ್ತು ಇಂಟರ್ನೆಟ್, ಶುದ್ಧ ಕುಡಿಯುವ ನೀರು, ಸಿಸಿಟಿವಿ ಮತ್ತು 24/7 ಭದ್ರತೆ, ಕೌಶಲ್ಯ ಅಭಿವೃದ್ಧಿ ಕೋಶ, ತರಬೇತಿ ಮತ್ತು ಉದ್ಯೋಗ ಕೋಶ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮೊದಲಾದ ಸೌಲಭ್ಯಗಳು, ಸಂಶೋಧನಾ ಪ್ರಯೋಗಾಲಯಗಳು, ಮತ್ತು ಪರಿಣಿತ ಅಧ್ಯಾಪಕರನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ: ಜ್ಞಾನ ಕಾವೇರಿ ಕ್ಯಾಂಪಸ್, ಚಿಕ್ಕ ಅಳುವಾರ, ಕುಶಾಲನಗರ ತಾಲ್ಲೂಕು, ಕೊಡಗು ಜಿಲ್ಲೆ, ಪಿನ್‌ಕೋಡ್-571232. ಕೊಡಗು ವಿಶ್ವವಿದ್ಯಾನಿಲಯ: 8861774778 | FMKMC ಮಡಿಕೇರಿ: 8088272689 ವೆಬ್‌ಸೈಟ್: kuk.karnataka.gov.in ಇಮೇಲ್: kodaguuniversityadmission@gmail.com ಗೆ ಭೇಟಿ ನೀಡುವಂತೆ ಕೊಡಗು ವಿವಿ ಪ್ರಕಟಣೆ ತಿಳಿಸಿದೆ.