ಕೊಡವ ಕೌಟುಂಬಿಕ ಹಾಕಿ: ಪಾಲಚಂಡ ತಂಡ ಭರ್ಜರಿ ಜಯ

| Published : Apr 04 2024, 01:04 AM IST

ಸಾರಾಂಶ

ಕೊಡಗಿನಲ್ಲಿ ಈಗ ಕೌಟುಂಬಿಕ ಹಾಕಿ ಹಬ್ಬ ಸಂಭ್ರಮ. ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಬುಧವಾರದ ಪಂದ್ಯಗಳಲ್ಲಿ ಪಾಲಚಂಡ, ನಂಬುಡ ಮಂಡ, ವಾಟೇರಿರ, ಕೂಪದಿರ ಮತ್ತಿತರ ತಂಡಗಳು ಮುನ್ನಡೆ ಸಾಧಿಸಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಬುಧವಾರದ ಪಂದ್ಯಗಳಲ್ಲಿ ಪಾಲಚಂಡ ತಂಡ ಭರ್ಜರಿ ಜಯ ಗಳಿಸಿತು. ಪಾಲಚಂಡ ತಂಡ ಬಿಜ್ಜಂಡ ತಂಡದ ವಿರುದ್ಧ 6-0 ಅಂತರದಿಂದ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

ನಂಬುಬುಡಮಂಡ ಮತ್ತು ಪೊನ್ನಾಲತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಂಬುಡ ಮಂಡ ತಂಡ 3-1 ಅಂತರದಿಂದ ಗೆಲವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ನಡಿಕೇರಿಯಂಡ ವಿರುದ್ಧ ವಾಟೇರಿರ 3 -0 ಅಂತರದ ಗೆಲವು ಸಾಧಿಸಿತು . ಕೇಕಡ ಮತ್ತು ಕೂಪದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಕೂಪದಿರ 3-1 ಅಂತರದ ಗೆಲವು ಸಾಧಿಸಿತು. ಮೊಣ್ಣಂಡ ಆಪಟ್ಟಿರ ತಂಡದ ವಿರುದ್ಧ 3-0 ಜಯ ಸಾಧಿಸಿತು.

ಅಮ್ಮನಕುಟ್ಟಂಡ ವಿರುದ್ಧ ಬೊಟ್ಟೋಳಂಡ ತಂಡ, ಕಿರಿಯಮಾಡ ತಂಡದ ವಿರುದ್ಧ ಬೈರಟಿರ ತಂಡ, ನೆಲ್ಲಿರ ವಿರುದ್ಧ ಕುಪ್ಪಣಮಾಡ, ಜಂಬಂಡ ವಿರುದ್ಧ ಚೊಟ್ಟೆಮಾಡ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು

ಪಾಲೆಯಡ ತಂಡವು ತಂಬಂಡ ವಿರುದ್ಧ 3-0 ಅಂತರದ ಗೆಲವು ಸಾಧಿಸಿತು. ಕಲ್ಲೆಂಗಡ ಪಳಂಗೇಟಿರ ತಂಡದ ವಿರುದ್ಧ ಗೆಲವು ಸಾಧಿಸಿತು. ಕಲ್ಲೇಂಗ 3 ಗೋಲು ಗಳಿಸಿದರೆ ಪಳಂಗೇಟಿರ ಯಾವುದೇ ಗೋಲು ಗಳಿಸಲಿಲ್ಲ. ಚೊಟ್ಟೇರ ಕಾಯಪಂಡ ವಿರುದ್ಧ 2-1 ಅಂತರದ ಗೆಲವು ಸಾಧಿಸಿತು. ಕೊಕ್ಕಲ ಮಾಡ ತಂಡವು ಬಾಚಮಂಡ ವಿರುದ್ಧ ಸೋಲು ಅನುಭವಿಸಿತು.

ಬಾಚಮಂಡ ತಂಡ 3 ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಬೋಳ್ತಂಡ ತಂಡದ ವಿರುದ್ಧ ಅದೇಂಗಡ ಗೆಲವು ಸಾಧಿಸಿದರೆ ಬಲ್ಲಿಯಂಡ ವಿರುದ್ಧ ಚೆರುವಾಳಂಡ 2-1 ಅಂತರದ ಗೆಲವು ಸಾಧಿಸಿತು.

ಬೊಜ್ಜಂಗಡ ತಂಡವು 5 ಗೋಲು ಗಳಿಸಿ ಮುದ್ದಿಯಂಡ ವಿರುದ್ಧ ಗೆಲವು ಸಾಧಿಸಿತು. ಆತಿಥೇಯ ಕುಂಡ್ಯೋಳಂಡ 3-2ರ ಮುನ್ನಡೆಯೊಂದಿಗೆ ಪುಚ್ಚಿಮಾಡ ತಂಡದ ವಿರುದ್ಧ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

-------------

ಇಂದಿನ ಪಂದ್ಯಗಳುಮೈದಾನ ಒಂದು

9 ಗಂಟೆಗೆ: ಪೊಂಜಂಡ-ಪೊನ್ನಕಚಿರ

10 ಗಂಟೆಗೆ: ಬಡ್ಡಿರ-ಚರಿಮಂಡ

11 ಗಂಟೆಗೆ: ಕಾಳಚಂಡ-ಬೊಳ್ಳಚೆಟ್ಟಿರ

1 ಗಂಟೆಗೆ: ಪೆಬ್ಬಟ್ಟಿರ-ಮಲ್ಲಜ್ಜಿರ

2 ಗಂಟೆಗೆ: ಪಟ್ಟಚೆರುವಾಳಂಡ-ಮಳವಂಡ

3 ಗಂಟೆಗೆ: ಬಾಚಿರ-ಮಲ್ಲಂಡ

...............

ಮೈದಾನ ಎರಡು

9 ಗಂಟೆಗೆ: ಕಳ್ಳಿರ- ಮುಕ್ಕಾಟಿರ(ಕುಂಜಿಲಗೇರಿ)

10 ಗಂಟೆಗೆ: ಮಚ್ಚಾರಂಡ-ಕೈಮುಡಿಯಂಡ

11 ಗಂಟೆಗೆ: ಓಡಿಯಂಡ- ದೆಯಂಡ

1 ಗಂಟೆಗೆ: ಆಪಾಡಂಡ- ದಾಸಂಡ

2 ಗಂಟೆಗೆ: ಪಳಂಗಿಯಂಡ-ತಡಿಯಂಗಡ

3 ಗಂಟೆಗೆ: ಮುಕ್ಕಾಟಿರ (ಕುಂಬಳದಾಳು) -ತಿರೋಟಿರ

...............

ಮೈದಾನ 39 ಗಂಟೆಗೆ: ಅಳ್ತಂಡ-ಬೊಳಿಯಾಡಿರ

10 ಗಂಟೆಗೆ: ಕೋಟೆರ (ಮುಗುಟಗೇರಿ)-ನಂದೀರ

11 ಗಂಟೆಗೆ: ಕುಂಡಚ್ಚಿರ-ಮಾಪಂಗಡ

1 ಗಂಟೆಗೆ: ನಿಡುಮಂಡ -ಸಿದ್ದಂಡ

2 ಗಂಟೆಗೆ: ಅಜ್ಜೇಟಿರ -ಬಟ್ಟೀರ

3 ಗಂಟೆಗೆ: ಕೊಟ್ಟಂಗಡ-ಮಂಗೇರ