ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ಕೂತಂಡ ಕಾರೇರ ವಿರುದ್ಧ 6-0 ಸೊನ್ನೆ ಅಂತರದ ಭರ್ಜರಿ ಜಯಗಳಿಸಿತು. ಕೂತಂಡ ತಂಡದ ಆಟಗಾರರಾದ ಬೋಪಣ್ಣ -1, ಸಂತೋಷ್
-2, ಸೋಮಣ್ಣ-1, ಪೂಣಚ್ಚ-1 ಹಾಗೂ ಸಜನ್ ದೇವಯ್ಯ-1 ಗೋಲು ಗಳಿಸಿ ತಂಡಕ್ಕೆ ಭರ್ಜರಿ ಜಯ ತಂದಿತ್ತರು.ಅಂಜಪರವಂಡ ಮುಂಡಿಯೋಳಂಡ ಮುಂದು ವಿರುದ್ಧ 2-0 ಅಂತರದಿಂದ, ಚೇಂದೀರ ಕೋಟೆರ ವಿರುದ್ಧ 3-1 ಅಂತರದಿಂದ, ಕನ್ನಂಡ ಮೇವಡ ವಿರುದ್ಧ 2-1 ಅಂತರದಿಂದ ಜಯಗಳಿಸಿತು.
ಪಾಡೆಯಂಡ ಮತ್ತು ಕಾಯಪಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು .ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿದವು.
ಪಾಡೆಯಂಡ ಕಾಯಪಂಡ ವಿರುದ್ಧ 4-3 ಅಂತರದಿಂದ ಟೈಬ್ರೇಕರ್ ನಲ್ಲಿ ಜಯಗಳಿಸಿತು.
ಇಂದಿನ ಪಂದ್ಯಗಳು
ಮೈದಾನ 1`9 ಕ್ಕೆ ಕರವಂಡ v/s ಚೇನಂಡ 10 ಕ್ಕೆ ಕರ್ತಮಾಡ v/s ಕುಲ್ಲೇಟಿರ11ಕ್ಕೆ ಕುಂಡ್ಯೋಳಂಡ v/s ಬೊವೇರಿಯಂಡ 12ಕ್ಕೆ ಕಲಿಯಂಡ v/s ಪೆಮ್ಮಂಡ 1ಕ್ಕೆ ಮೇಚಿಯಂಡ v/s ಅಪ್ಪನೆರವಂಡ 2ಕ್ಕೆ ಬಿದ್ದಾಟಂಡ v/s ನೆರವಂಡ ಮೈದಾನ 2
9ಕ್ಕೆ ಪಳಂಗಂಡ v/s ಮಾತಂಡ 10ಕ್ಕೆ ಮೂಕಳಮಾಡ v/s ಕಾಂಡಂಡ 11ಕ್ಕೆ ಅಮ್ಮಣಿಚಂಡ v/s ಮುರುವಂಡ 12ಕ್ಕೆ ಕುಪ್ಪಂಡ (ನಾಂಗಾಲ) v/s ಸಣ್ಣುವಂಡ 1ಕ್ಕೆ ಚೌರೀರ (ಹೊದ್ದೂರ್) v/s ಪುಲ್ಲಂಗಡ 2ಕ್ಕೆ ಬೊಳ್ಳಚಂಡ v/s ಕೂತಂಡ