3ನೇ ಆವೃತ್ತಿಯ ಕ್ರಿಕೆಟ್‌ ಪಂದ್ಯಾಟವನ್ನು 2026 ಏ. 24ರಿಂದ ಮೇ 1ರ ವರೆಗೆ ಎಸ್‌ಎಂಎಸ್‌ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪುಡಿಯಂಡ ದೇವಣಗೇರಿ-ಕೊಂಡಂಗೇರಿ ಕುಟುಂಬಸ್ಥರ ವತಿಯಿಂದ ಕೊಡವ ಜಮ್ಮಾ ಮುಸ್ಲಿಂ ಸ್ಫೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಆಶ್ರಯದಲ್ಲಿ ಕೊಡವ ಜಮ್ಮಾ ಮುಸ್ಲಿಂ ಸಮಾಜಬಾಂಧವರಿಗೆ 3ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟವನ್ನು 2026ರ ಏ.24ರಿಂದ ಮೇ 1ರವರೆಗೆ ಎಸ್.ಎಂ.ಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುಡಿಯಂಡ ಕುಟುಂಬದ ಅಧ್ಯಕ್ಷ ಉಸ್ಮಾನ್ ತಿಳಿಸಿದರು.ಮೊದಲ ವರ್ಷ ಕುವಲೆರ ಚಾಮಿಯಾಲ ಕುಟುಂಬ ಮತ್ತು ಎರಡನೇ ಪರ್ಷ ಆಲಿರ ಕುಟುಂಬಸ್ಥರು ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಿದ್ದು, 70 ಕುಟುಂಬಸ್ಥರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಈ ಬಾರಿ ಪುಡಿಯಂಡ ದೇವಣಗೇರಿ-ಕೊಂಡಂಗೇರಿ ಕುಟುಂಬಸ್ಥರು ಆಯೋಜಿಸುತ್ತಿದ್ದು, ಕ್ರಿಕೆಟ್ ಪಂದ್ಯವು ಚಾಮಿಯಾಲ ಅರಮೇರಿ ಗ್ರಾಮದಲ್ಲಿರುವ ಎಸ್.ಎಂ.ಎಸ್ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.ವಿಜೇತ ತಂಡಕ್ಕೆ ಪ್ರಥಮ ಬಹುಮಾನ 1,22, 222 ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 66, 666 ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ 33, 333 ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಜತೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ ಒಂದು ಗೋಲ್ಡ್ ಕಾಯಿನ್ ನೀಡಿ ಗೌರವಿಸಲಾಗುವುದು. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಸಮಾಜ ಬಾಂದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕುಟುಂಬದ ಕಾರ್ಯದರ್ಶಿ ಅಬ್ದುಲ್ ರಹೀಂ, ಕುಟುಂಬಸ್ಥರಾದ ಶಾದಲಿ, ಸಮದ್, ಅಯಮದ್, ಮೊಯ್ದು ಉಪಸ್ಥಿತರಿದ್ದರು.