ಕೊಡವ ಸಮಾಜದಲ್ಲಿ ಕಾವೇರಿ ತೀರ್ಥ ವಿತರಣೆ

| Published : Oct 19 2024, 12:33 AM IST

ಸಾರಾಂಶ

ಕಾವೇರಿ ತೀರ್ಥ ಸ್ವರೂಪಿಣಿಯಾಗಿ ನಾಡು ಸೇರಿದಂತೆ ದೇಶಕ್ಕೆ ಒಳಿತು ಮಾಡುತ್ತಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ವಿಜಯನಗರದಲ್ಲಿರುವ ಕೊಡವ ಸಮಾಜದಲ್ಲಿ ಶುಕ್ರವಾರ ಕಾವೇರಿ ಮಾತೆಗೆ ವಿಶೇಷ ಕಣಿ ಪೂಜೆ ಸಲ್ಲಿಸಿ ಕೊಡವ ಬಂಧುಗಳಿಗೆ ಕಾವೇರಿ ತೀರ್ಥವನ್ನು ವಿತರಿಸಲಾಯಿತು.ಮೈಸೂರು ಕೊಡವ ಸಮಾಜದ ಐವರು ಸದಸ್ಯರ ತಂಡವು ಕಾವೇರಿ ತೀರ್ಥೋದ್ಭವ ಮುನ್ನ ದಿನ ಭಾಗಮಂಡಲಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ತಲಕಾವೇರಿಗೆ ಕಾಲ್ನಡಿಗೆ ಮೂಲಕ ತೆರಳಿ ತೀರ್ಥೋದ್ಭವದ ನಂತರ ಅಲ್ಲಿಂದ 2 ಸಾವಿರ ಲೀಟರ್ ತೀರ್ಥವನ್ನು ಮೈಸೂರಿಗೆ ತಂದಿದ್ದಾರೆ.ಇದಕ್ಕೆ ತೀರ್ಥಕ್ಕೆ ವಿಶೇಷ ಕಣಿ ಪೂಜೆ, ಕಾವೇರಿ ಪೂಜೆ ಸಲ್ಲಿಸಿದ ವಿತರಿಸಲಾಯಿತು. ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ ಅವರು ಭಾಗವಹಿಸಿ ಕಾವೇರಿ ತೀರ್ಥ ಸ್ವೀಕರಿಸಿದರು. ನಂತರ 2 ಸಾವಿರ ಲೀಟರ್ ತೀರ್ಥವನ್ನು 250 ಎಂಎಲ್ ಬಾಟಲ್ ಗಳಲ್ಲಿ ತುಂಬಿಸಿ ವಿತರಿಸಲಾಯಿತು.ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಕಾವೇರಿ ತೀರ್ಥ ಸ್ವರೂಪಿಣಿಯಾಗಿ ನಾಡು ಸೇರಿದಂತೆ ದೇಶಕ್ಕೆ ಒಳಿತು ಮಾಡುತ್ತಾರೆ. ದೇವರು ಎಲ್ಲಾ ರೂಪದಲ್ಲಿ ಇರುತ್ತಾರೆ ಎನ್ನುವುದಕ್ಕೆ ಕಾವೇರಿ ಸಾಕ್ಷಿ ಎಂದರು.ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಕಾವೇರಿ ಮಾತೆ ಕೋಟ್ಯಾಂತರ ಜನರ ಜೀವ ನದಿಯಾಗಿದೆ. ಗಂಗಾ ಆರತಿ ರೀತಿಯಲ್ಲಿ ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ತಲಕಾವೇರಿ ಅಥವಾ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ನಡೆಯಲಿದೆ ಎಂದು ತಿಳಿಸಿದರು. ಕೊಡವ ಸಮಾಜದ ಅಧ್ಯಕ್ಷ ಪೊಂಜಂಡ ಎ. ಗಣಪತಿ, ಉಪಾಧ್ಯಕ್ಷ ಮಾಚಿಮಾಡ ಪಿ. ನಾಣಯ್ಯ, ಕಾರ್ಯದರ್ಶಿ ಕೆಟೋಳಿರ ಎ. ಬೆಳ್ಳಿಯಪ್ಪ, ಖಜಾಂಚಿ ಇಟ್ಟೀರ ಜಿ. ಕಾಶಿಯಪ್ಪ, ಜಂಟಿ ಕಾರ್ಯದರ್ಶಿ ಅಜ್ಜಿಕುಟ್ಟೀರ ಡಯಾನಾ ಪೂವಯ್ಯ ಮೊದಲಾದವರು ಇದ್ದರು.