ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡವ ವಾಲಗತಾಟ್ ತರಬೇತಿ ಶಿಬಿರ

| Published : Aug 15 2025, 01:00 AM IST

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡವ ವಾಲಗತಾಟ್ ತರಬೇತಿ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಇದೇ ಪ್ರಥಮ ಬಾರಿಗೆ ಶಾಲಾ ಮಕ್ಕಳಿಗೆ ಕೊಡವ ಜಾನಪದ ಕಲೆ ವಾಲಗತಾಟ್‌ ತರಬೇತಿ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಇದೇ ಪ್ರಥಮ ಬಾರಿಗೆ ಶಾಲಾ ಮಕ್ಕಳಿಗೆ ಕೊಡವ ಜಾನಪದ ಕಲೆ ವಾಲಗತಾಟ್ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.

ಕೊಡವ ವಾಲಗತಾಟ್ ನಮ್ಮ ಸಂಸ್ಕೃತಿಯ ಅಂಗವಾಗಿದ್ದು, ನಮ್ಮ ಜನಪದ ನೃತ್ಯದ ಮೂಲ ಬೇರಾಗಿರುತ್ತದೆ, ಇದಕ್ಕಾಗಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿ ಯರಿಗೆ ಇದರ ತರಬೇತಿ ಅನಿವಾರ್ಯವಾಗಿದ್ದು, ಮುಂದಿನ ಪೀಳಿಗೆಗೆ ಇದು ಅನುಕೂಲವಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ 120 ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿ ಪಡೆದರು ಎಂದು ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ತಿಳಿಸಿದರು.

ತರಬೇತಿದಾರರಾಗಿ ಮುಲ್ಲೇಂಗಡ ಮಾದೋಶ್ ಪೂವಯ್ಯ, ಮಾಚಿಮಾಡ ಡಾಲಿ ಮಂದಣ್ಣ, ಮೂಕಳೇರ ರಮೇಶ್, ಕೊಣಿಯಂಡ ಮಾದಯ್ಯ, ಗುಮ್ಮಟ್ಟಿರ ಕೌಶಿಕ್, ಕುಲ್ಲಚಂಡ ವಿನುತ ಕೇಸರಿ, ಸುಳ್ಳಿಮಾಡ ಶಿಲ್ಪಾ, ಮಚ್ಚಮಾಡ ಕವಿತಾ ಭಾಗವಹಿಸಿದ್ದರು. ಈ ತರಬೇತಿ ಶಿಬಿರವು ಕೊಡವ ಸಮಾಜದ ಅಧ್ಯಕ್ಷ ಹಾಗೂ ಜಾನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಶಿಬಿರದಲ್ಲಿ ಸಮಾಜದ ಗೌರವ ಕಾರ್ಯದರ್ಶಿ ಕೋಟೇರ ಕಿಶನ್ ಉತ್ತಪ್ಪ, ಸಹ ಕಾರ್ಯದರ್ಶಿ ಆಲೇಮಾಡ ಸುಧೀರ್, ನಿರ್ದೇಶಕರಾದ ಕಳ್ಳಿಚಂಡ ಚಿಪ್ಪ ದೇವಯ್ಯ, ಚೀರಂಡ ಕಂದ ಸುಬ್ಬಯ್ಯ, ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಮುಕಳೇರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಗಂಗಮ್ಮ ಅಲ್ಲದೆ ವಿವಿಧ ಶಾಲೆಯ ಶಿಕ್ಷಕರು ಪೋಷಕರು ಭಾಗವಹಿಸಿದ್ದರು.