ಕೊಡೇಕಲ್‌: ರಾಯರ 353ನೇ ಆರಾಧನಾ ಮಹೋತ್ಸವ

| Published : Aug 21 2024, 12:44 AM IST

ಸಾರಾಂಶ

Kodekal: 353rd Aradhana Mahotsava of Raya

ಕನ್ನಡಪ್ರಭ ವಾರ್ತೆ ಕೊಡೇಕಲ್‌

ಶ್ರೀರಾಘವೇಂದ್ರ ಸ್ವಾಮಿಗಳವರ 353 ನೇ ಆರಾಧನಾ ಮಹೋತ್ಸವ ಪೂರ್ವಾರಾಧನೆ ನಾರಾಯಣಪೂರ ಗ್ರಾಮದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಆರಾಧನಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.ನಾರಾಯಣಪುರ ಗ್ರಾಮದ ನರಸಿಂಹ ಆಚಾರ್ಯ ಕೊಳ್ಳಿ ಇವರ ಮನೆಯಿಂದ ಬೆಳಿಗ್ಗೆ 6 ಗಂಟೆಗೆ ರಾಯರ ಭಾವಚಿತ್ರದೊಂದಿಗೆ ಭಜನೆ ವೇದ ಘೋಷಗಳೊಂದಿಗೆ ಗ್ರಾಮ ಸಂಕಿರ್ತನೆ ಮಾಡುವ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಅರ್ಚಕ ಶ್ರೀ ರಾಘವೇಂದ್ರ ಜೋಶಿ ಮಾರಲಬಾವಿ ಮಾತನಾಡಿ, ಈ ಕಲಿಯುಗದಲ್ಲಿ ಶರಣಾಗಿ ಬಂದ ಭಕ್ತರಿಗೆ ಗುರುಗಳು ಬೇಡಿದನ್ನು ಕೊಡುವ ಮಹಾಮಹಿಮರು ಅದಕ್ಕಾಗಿಯೇ ಅವರನ್ನು ಕಲಿಯುಗದ ಕಾಮಧೇನು- ಕಲ್ಪವೃಕ್ಷ ಎಂದು ಸ್ಮರಿಸುತ್ತಾರೆ. ಗುರುಗಳ ಆರಾಧನಾ ಮಹೋತ್ಸವ ಮಂಗಳವಾರದಿಂದ ಆರಂಭವಾಗಿದ್ದು ಮೂರು ದಿನಗಳವರೆಗೆ ನಡೆಯಲಿದೆ, ಶುಕ್ರವಾರದಂದು ಮಧ್ಯಾರಾಧನೆ ದಿನದಂದು ಮಹಾರಥೋತ್ಸವ ಜರುಗಲಿದೆ ಎಂದು ಹೇಳಿದರು.

-------ಫೋಟೋ: 20ವೈಡಿಆರ್‌11

ಶ್ರೀ ರಾಘವೇಂದ್ರಸ್ವಾಮಿಗಳವರ 353 ನೇ ಆರಾಧನಾ ಮಹೋತ್ಸವ ಪ್ರಯುಕ್ತ ನಾರಾಯಣಪುರ ಗ್ರಾಮದ ಶ್ರೀ ರಾಘವೇಂದ್ರಸ್ವಾಮಿಗಳ ನಗರ ಸಂಕಿರ್ತನೆಯೊಂದಿಗೆ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಶ್ರೀ ಗುರುರಾಜ ಭಜನಾ ಮಂಡಳಿ, ಶ್ರೀ ಛಾಯಾದೇವಿ ಮಹಿಳಾ ಭಜನಾ ಮಂಡಳಿ ಸದಸ್ಯರು ಸೇರಿದಂತೆ ಇತರರು ಇದ್ದರು.