ತಾಲೂಕಿನ ಕಬಕ-ಕೊಡಿಪ್ಪಾಡಿ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ಈ ರಸ್ತೆ ಅಭಿವೃದ್ಧಿಗೆ ಅನುದಾನ ಇರಿಸಲಾಗಿದೆ ಎನ್ನುವ ಶಾಸಕರ ಹೇಳಿಕೆಗಳು ಅಭಿನಂದನಾ ಬ್ಯಾನರ್‌ಗೆ ಮಾತ್ರ ಸೀಮಿತವಾಗಿದೆ. ತಕ್ಷಣ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಪುತ್ತೂರು : ತಾಲೂಕಿನ ಕಬಕ-ಕೊಡಿಪ್ಪಾಡಿ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ಈ ರಸ್ತೆ ಅಭಿವೃದ್ಧಿಗೆ ಅನುದಾನ ಇರಿಸಲಾಗಿದೆ ಎನ್ನುವ ಶಾಸಕರ ಹೇಳಿಕೆಗಳು ಅಭಿನಂದನಾ ಬ್ಯಾನರ್‌ಗೆ ಮಾತ್ರ ಸೀಮಿತವಾಗಿದೆ. ತಕ್ಷಣ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಗುರುವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಪಂ ಮಾಜಿ ಸದಸ್ಯ ಚಂದ್ರಶೇಖರ್ ಕೊಡಿಪ್ಪಾಡಿ, ಕಬಕದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಿಂದ ಒಳಹೋಗಿರುವ ಕುಡೇರಪಡ್ಪು-ಅರ್ಕ-ಬಟ್ರಪ್ಪಾಡಿ-ಕೊಡಿಪ್ಪಾಡಿ ಶಾಲೆ-ಕೊಡಿಪಾಡಿ ಪಂಚಾಯಿತಿ-ಕೋಂಟ್ರಪ್ಪಾಡಿಯ ಸುಮಾರು ೪ ಕಿ.ಮೀ. ಸಂಚಾರಕ್ಕೆ ಅಯೋಗ್ಯವಾಗಿದೆ. ಕಳೆದ ೧೦ ವರ್ಷಗಳಿಂದ ಒಮ್ಮೆಯೂ ಈ ರಸ್ತೆಗೆ ಸಂಪೂರ್ಣ ಡಾಮರೀಕರಣ ಮಾಡಿಲ್ಲ. ಕುಡೇರಪಡ್ಪು-ಓಜಾಲ-ಕುಂಡಡ್ಕ ಕವಲೊಡೆಯುವ ರಸ್ತೆಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕುಡೇರಪಡ್ಪು-ಬಟ್ರಪ್ಪಾಡಿಯ ೨ ಕಿ.ಮೀ. ರಸ್ತೆಯಂತೂ ನಡೆದಾಡಲೂ ಕಷ್ಟಪಡುವ ಸ್ಥಿತಿಯಲ್ಲಿದೆ. ಕೊಡಿಪ್ಪಾಡಿ ಗ್ರಾಪಂ ವ್ಯಾಪ್ತಿಯನ್ನು ಅಭಿವೃದ್ಧಿಯಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

ಸುಮಾರು ೪ ಸಾವಿರ ಜನಸಂಖ್ಯೆ ಹೊಂದಿರುವ ಈ ಭಾಗದ ಜನತೆ ನಿತ್ಯ ಸಂಚಾರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕಬಕ ಜೈ ಹಿಂದ್ ರಿಕ್ಷಾ ಚಾಲಕ -ಮಾಲೀಕರ ಸಂಘದ ಅಧ್ಯಕ್ಷ ಧನಂಜಯ ಗೌಡ, ಸದಸ್ಯ ಮುರಳೀಧರ ಗೌಡ, ಹರೀಶ್ ನಾಯಕ್ ಕೊಡಿಪ್ಪಾಡಿ, ಕೊಡಿಪಾಡಿ ಗ್ರಾಪಂ ಮಾಜಿ ಸದಸ್ಯರಾದ ಗಿರಿಧರ್ ಗೋಮುಖ, ಸ್ಮಿತಾ ಇದ್ದರು.