ಸಾರಾಂಶ
ಕೊಕಟನೂರ ಗ್ರಾಮದ ಶ್ರೀ ಯಲ್ಲಮ್ಮದೇವಿ ಜಾತ್ರೆ
ಅಥಣಿಃ ಜ.6 ರಿಂದ ಪ್ರಾರಂಭವಾಗಲಿರುವ ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ಯಲ್ಲಮ್ಮದೇವಿ ಜಾತ್ರೆಯಲ್ಲಿ ಅನಿಷ್ಟ ಪದ್ದತಿ ಮತ್ತು ಪ್ರಾಣಿ ಬಲಿಯಂಥ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಮತ್ತು ತಾಲೂಕಾ ಕಟ್ಟಚ್ಚರ ವಹಿಸುವಂತೆ ಶಾಸಕ ಲಕ್ಷ್ಮಣ ಸವದಿ ಸೂಚಿಸಿದರು.
ಜಾತ್ರೆ ಪೂರ್ವ ತಯಾರಿ ಕುರಿತು ಅಥಣಿ ಶಾಸಕ ಲಕ್ಷ್ಮಣ ಸಂಗಪ್ಪ ಸವದಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸಭೆ ನಡೆಸಿತು. ಸಭೆಯಲ್ಲಿ ಮಾತನಾಡಿದ ಅವರು, ಜಾತ್ರೆಯಲ್ಲಿ ಸರಿಯಾಗಿ ಲೈಟಿಂಗ ವ್ಯವಸ್ಥೆ ಮತ್ತು ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಹಾಕಲು ಸೂಚನೆ ನೀಡಲಾಯಿತು. ಕೊರೊನಾ ಹಿನ್ನೆಲೆ ವಯೋವೃದ್ಧರು ಕಡ್ಡಾಯವಾಗಿ ಮಾಸ್ಕ ಧರಿಸಿರಬೇಕು. ಶುದ್ಧ ಕುಡಿಯುವ ನೀರು, ಭಕ್ತರಿಗೆ ವಸತಿ ಕಲ್ಪಿಸಬೇಕು. ಆರೋಗ್ಯ ಇಲಾಖೆ ಯಾವುದೆ ಸಾಂಕ್ರಾಮೀಕ ರೋಗಗಳು ಹರಡದಂತೆ ಮುಂಜಾಗ್ರತ ಕ್ರಮವಹಿಸಬೇಕು. ಅದಲ್ಲದೆ ಎರಡು ಆಂಬ್ಯುಲೆನ್ಸ್ ಸಹಿತ ಹಗಲು ರಾತ್ರಿ ವೈದ್ಯಕೀಯ ಸೇವೆ ಸಿಗುವಂತೆ ವ್ಯವಸ್ಥೆ ಮಾಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿಲಾಯಿತು. ಸಭೆಯಲ್ಲಿ ಚಿಕ್ಕೋಡಿ ಉಪ-ವಿಭಾಗಾಧಿಕಾರಿ ಎಸ್.ಎಸ್. ಸಂಪಗಾಂವಿ, ಅಥಣಿ ತಹಸೀಲ್ದಾರ ವಾಣಿ. ಐ. ತಾ.ಪಂ.ಅಧಿಕಾರಿ ಶಿವಾನಂದ ಕಲ್ಲಾಪೂರ ಭಾಗವಹಿಸಿದ್ದರು