ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ:ಕೋಳಿ ಬೆಸ್ತ ಸಮಾಜವನ್ನು ಎಸ್ಟಿ ಸಮಾಜಕ್ಕೆ ಸೇರಿಸುವುದಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ ಎಂದು ಚಿಕ್ಕೋಡಿ ಲೋಕಸಭೆ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ ಅವರು ಸಮುದಾಯದವರ ಮುಂದೆ ಭರವಸೆ ನೀಡಿದರು.
ಪಟ್ಟಣದ ಹೊರವಲಯದ ಮನಿಷ್ ಇಂಟರ್‌ನ್ಯಾಷನಲ್ ಹೋಟೆಲ್ ಬಳಿಯ ಎಸ್.ಎಸ್.ಕನ್ವೆನ್ಷನ್ ಹಾಲ್‌ನಲ್ಲಿ ಕೋಳಿ ಬೆಸ್ತ ಸಮಾಜ ಜಿಲ್ಲಾ ಸಂಘದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ, ಸಮುದಾಯದಿಂದ ಆತ್ಮೀಯವಾಗಿ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕೂಡ ಕೋಳಿ- ಬೆಸ್ತ ಸಮಾಜವನ್ನು ಎಸ್ಟಿ ಸಮಾಜಕ್ಕೆ ಸೇರಿಸಬೇಕೆಂಬ ನಿಲುವು ಹೊಂದಿದ್ದಾರೆ. ನಾನು ಕೂಡ ಈ ಸಮಾಜದ ಪ್ರಗತಿಯನ್ನು ಬಯಸುತ್ತೇನೆಂದು ಅವರು ತಿಳಿಸಿದರು.ಲೋಕಸಭೆ ಚುನಾವಣೆಯಲ್ಲಿ 45 ದಿನಗಳ ಕಾಲ ನನ್ನ ಪ್ರಚಾರ ಸಭೆಯಲ್ಲಿ ಮಹಿಳೆಯರು ನನ್ನ ಬಳಿ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರು. ಅಲ್ಲದೇ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಹಿಳೆಯರ ಅಭಿಪ್ರಾಯದಂತೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.ಮುಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕೆಂಬುವುದು ನನ್ನ ಆಶಯ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 30ವಯಸ್ಸಿಗಿಂತ ಕಡಿಮೆ ವಯಸ್ಸಿನವರು ನನ್ನನ್ನು ಸೇರಿ ಐದು ಜನ ಮಹಿಳೆಯರು ಸಂಸತ್ತಿನಲ್ಲಿ ಕಾಲಿಟ್ಟಿದ್ದು ಖುಷಿಯ ಸಂಗತಿ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಇಂದು ಮಹಿಳೆಯರು ಸ್ವ ಶಕ್ತಿಯಿಂದ ಸಮಾಜದಲ್ಲಿ ಮುನ್ನುಗ್ಗುತ್ತಿದ್ದಾರೆ. ಆದ್ದರಿಂದ ಮಹಿಳೆಯರನ್ನು ತಂದೆ, ತಾಯಿ, ಕುಟುಂಬಸ್ಥರು ಸೇರಿದಂತೆ ಸರ್ವರೂ ಮಹಿಳೆಯರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಅವರು ತಿಳಿಸಿದರು.ಜಿಲ್ಲಾ ಕೋಳಿ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ದಿಲೀಪ್ ಕುಮಾರ್ ಕುರಂದವಾಡೆ ಮಾತನಾಡಿ, ನಮ್ಮ ಸಮಾಜದ ಮಹಿಳಾ ಸಂಘಟನೆಯನ್ನು ಸಂಘಟಿಸಿ, ಮಹಿಳೆಯರನ್ನು ಸದೃಢಗೊಳಿಸಬೇಕೆಂದು ಇಂದು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಹಿಂದುಳಿದ ಸಮಾಜವನ್ನು ಮೇಲೆ ಎತ್ತಬೇಕೆಂದು ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ನಮ್ಮ ಸಮಾಜಕ್ಕೂ ಸತೀಶ್ ಜಾರಕಿಹೊಳಿ ಅವರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಸಿದ್ದು ಸುಣಗಾರ, ಜಿಲ್ಲಾ ಕೋಳಿ ಬೆಸ್ತ ಸಮಾಜದ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ ಮಾತನಾಡಿದರು.ಸಮಾಜದ ತಾಲೂಕು ಅಧ್ಯಕ್ಷ ಕಿಶೋರ್ ಶಿರಗೆ ಸ್ವಾಗತಿಸಿದರು. ಕೊಲ್ಲಾಪುರ ಜಿಲ್ಲೆಯ ಕೋಳಿ ಬೆಸ್ತ ಸಮಾಜದ ಉಪಾಧ್ಯಕ್ಷ ಭಗವಾನ್ ಕೋಳಿ, ಮುಖಂಡರಾದ ಸಂಜಯ ಪಾಟೀಲ್, ರಂಗನಾಥ್ ಬಾರಕೇರ, ರಾಜು ಕುರಂದವಾಡೆ, ಮಹಾದೇವ ಬೋನಿ, ಶಿವನಿಂಗ ನಾಯಕ, ಸಂಗೀತಾ ಕೋಳಿ ಮುಂತಾವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಫೋಟೋ ಶಿಷಿಕೆ : 16Huk-1
ಹುಕ್ಕೇರಿಯಲ್ಲಿ ರವಿವಾರ ನಡೆದ ಕೋಳಿ ಬೆಸ್ತ ಸಮಾಜದ ಮಹಿಳಾ ಸಮಾವೇಶದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿದರು.---------------
ಹುಕ್ಕೇರಿಯಲ್ಲಿ ರವಿವಾರ ನಡೆದ ಕೋಳಿ ಬೆಸ್ತ ಸಮಾಜದ ಮಹಿಳಾ ಸಮಾವೇಶದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು.---------------------------
ಕೋಟ್ಮುಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕೆಂಬುವುದು ನನ್ನ ಆಶಯ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 30 ವಯಸ್ಸಿಗಿಂತ ಕಡಿಮೆ ವಯಸ್ಸಿನವರು ನನ್ನನ್ನು ಸೇರಿ ಐದು ಜನ ಮಹಿಳೆಯರು ಸಂಸತ್ತಿನಲ್ಲಿ ಕಾಲಿಟ್ಟಿದ್ದೇವೆ. ಇದು ನನಗೆ ಖುಷಿಯ ಸಂಗತಿ.
ಪ್ರಿಯಾಂಕಾ ಜಾರಕಿಹೊಳಿ, ಚಿಕ್ಕೋಡಿ ಸಂಸದೆ