ಕಾಂತರಾಜ್ ಆಯೋಗ ವರದಿ ಜಾರಿಗೆ ಕೋಲಿ ಸಮಾಜ ಒತ್ತಾಯ

| Published : Feb 01 2024, 02:04 AM IST

ಸಾರಾಂಶ

ಎಲ್ಲಾ ಜಾತಿ ಜನಾಂಗಗಳಿಗೆ ಸಮಾನ ಅವಕಾಶ, ಸಾಮಾಜಿಕ ನ್ಯಾಯ, ಸಾಮಾಜಿಕ ಸಮಾಜತೆ ಸಿಗಬೇಕಾದರೆ ಜಾತಿಯ ಜನಸಂಖ್ಯೆ, ಆಯಾ ಜಾತಿಯ ಸ್ಥಿತಿಗತಿಯ ಮಾಹಿತಿ ಸರ್ಕಾರದ ಬಳಿ ನಿಖರವಾದ ಮಾಹಿತಿ ಇರದೇ ಕಾರಣ ಅನ್ಯಾಯವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಹಿಂದುಳಿದ ಜನರ ಸಾಮಾಜಿಕ ನ್ಯಾಯ ಮತ್ತು ಸಮಾಜಿಕ ಸಮಾನತೆಯ ಹಕ್ಕಿಗಾಗಿ ಎಚ್.ಕಾಂತಾರಾಜ್ ಆಯೊಗದ ವರದಿಯನ್ನು ಜಾರಿಗೊಳಿಸಬೇಕು ಎಂದು ತಾಲೂಕು ಕೊಲಿ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ್ ಒತ್ತಾಯಿಸಿದರು.

ಪಟ್ಟಣದಲ್ಲಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಎಲ್ಲಾ ಜಾತಿ ಜನಾಂಗಗಳಿಗೆ ಸಮಾನ ಅವಕಾಶ, ಸಾಮಾಜಿಕ ನ್ಯಾಯ, ಸಾಮಾಜಿಕ ಸಮಾಜತೆ ಸಿಗಬೇಕಾದರೆ ಜಾತಿಯ ಜನಸಂಖ್ಯೆ, ಆಯಾ ಜಾತಿಯ ಸ್ಥಿತಿಗತಿಯ ಮಾಹಿತಿ ಸರ್ಕಾರದ ಬಳಿ ನಿಖರವಾದ ಮಾಹಿತಿ ಇರದೇ ಕಾರಣ ಅನ್ಯಾಯವಾಗುತ್ತಿದೆ. ಇಂತಹ ಕೊರತೆಯನ್ನು ನಿವಾರಣೆ ಮಾಡಲು ೨೦೧೫ ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೊಗದಿಂದ ಎಚ್. ಕಾಂತಾರಾಜ್ ಅವರ ನೇತೃತ್ವದಲ್ಲಿ ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಜೌದ್ಯೊಗಿಕ ಸ್ಥಿತಿಗತಿಯ ಜಾತಿಗಣತಿಯ ಸಮೀಕ್ಷೆ ಒಂದು ಮೈಲಿಗಲ್ಲಾಗಿದೆ. ಆದರೆ ಸಮೀಕ್ಷೆಯ ವರದಿ ಸಿದ್ದವಾಗಿ ಏಳು ವರ್ಷಗಳೇ ಕಳೆದರೂ ಇಲ್ಲಿಯವರೆಗೆ ಅದನ್ನು ಸ್ವೀಕರಿಸಿ ಬಿಡಗಡೆ ಮಾಡದಿರುವದರಿಂದ ಶೊಷಿತ ಹಿಂದುಳಿದ ಸಮುದಾಯಗಳು ವರದಿ ಬಿಡುಗಡೆಗೆ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿವೆ ಸರ್ಕಾರ ಆಯೊಗದ ವರದಿಯನ್ನು ಸ್ವೀಕರಿಸಿ ಬಿಡುಗಡೆ ಮಾಡಿ ಸಾಮಾಜಿಕ ನ್ಯಾಯಕ್ಕೆ ಸಮಾನ ಅವಕಾಶ ಕಲ್ಪಿಸಲು ಬುನಾದಿ ಹಾಕಬೇಕು ಎಂದು ಅವರು ಹೇಳಿದರು.

ಭೀಮಣ್ಣ ಹೊತಿನಮಡು, ಸಾಬಣ್ಣ ಭರಾಟೆ, ಗುಂಡಪ್ಪ ,ಈರಣ್ಣ ಕೊಳಕೂರ,ಶಂಕರ ಕೊಳ್ಳಿ,ನಿಂಗಣ್ಣ ಡೊಣಗಾಂವ, ಪ್ರಭು ಹಲಕಟ್ಟಿ,ಮಹಾದೇವ ಅಲ್ಲೂರ,ಹಣಮಂತ ಕಟ್ಟಿ, ಮಲ್ಲಿಕಾರ್ಜುನ ಸಂಗಾವಿ, ಕಾಶಿನಾಥ ಅಲ್ಲೂರ,ಶ್ರೀಮಂತ ಗಮಗಾ,ಅಣ್ಣರಾಯ ಮ್ಯಾಗೇರಿ,ಗುರುನಾಥ ಅಲ್ಲೂರ,ಕರಣಕುಮಾರ ಅಲ್ಲೂರ, ಮಹಾದೇವ ಕೊನಗೇರಿ, ಮಲ್ಲಣ್ಣ ಮೊಸಿನ್, ಭಿಮಶಪ್ಪ ಬೊಗೊಣೆ ಇತರರು ಇದ್ದರು.