ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಿಂದ ತೆರಳಿದ್ದ 10 ಮಂದಿ ಕರಾಟೆ ಪಟುಗಳು ಮೈಸೂರಿನಲ್ಲಿ ನಡೆದ ಯೂತ್ ಕಪ್ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ 14 ಬಹುಮಾನ ಗೆಲ್ಲುವ ಮೂಲಕ ಸಾಧನೆಗೈದಿದ್ದಾರೆಂದು ತರಬೇತುದಾರ ಕಾರ್ತಿಕ್ ತಿಳಿಸಿದ್ದಾರೆ.ಈ ಸ್ಪರ್ಧೆಯಲ್ಲಿ 10 ಮಂದಿ ಪಾಲ್ಗೊಂಡಿದ್ದು ಕತಾ ಮತ್ತು ಕುಮಿತೆ ವಿಭಾಗದಲ್ಲಿ 14 ಬಹುಮಾನಗಳಿಸಿ ಸಾಧನೆ ಮಾಡಿದ್ದಾರೆ. ಕತ ಮತ್ತು ಕುಮಿತೆ ವಿಭಾಗದಲ್ಲಿ ಕುಮಾರಿ ಪ್ರಥಮ ಸ್ಥಾನ, ನವ್ಯಶ್ರೀ ಕತಾ ಮತ್ತು ಕುಮಿತೆ ವಿಭಾಗಗಳಲ್ಲೂ ಪ್ರಥಮ ಸ್ಥಾನಗಳಿಸಿದ್ದಾರೆ. ಉಳಿದಂತೆ ಶ್ರೇಯಸ್ ಕತಾದಲ್ಲಿ ತೃತೀಯ ಹಾಗೂ ಕುಮಿತೆಯಲ್ಲಿ ದ್ವಿತೀಯ ಬಹುಮಾನ, ನಿಹಾರಿಕ ಕಥಾ ದ್ವಿತೀಯ, ಕುಮಿತೆ ತೃತೀಯ ಸ್ಥಾನಗಳಿಸಿದ್ದಾರೆ.
ಸಾನ್ವಿ ಕತಾ ವಿಭಾಗದಲ್ಲಿ ಪ್ರಥಮ, ಅಭಯ್ ಕತಾದಲ್ಲಿ ತೃತೀಯ ಸ್ಥಾನ, ನೂತನ್ ಕತಾದಲ್ಲಿ ತೃತೀಯ ವಿಭಾಗ, ಧ್ರುವಂತ್ ಕಥಾ ತೃತೀಯ ಹಾಗೂ ವೀರಜ್ ಕಥಾ ತೃತೀಯ ಸ್ಥಾನ ಪಡೆದಿದ್ದಾರೆ ಎಂದರು.--
5ಕೆಜಿಎಲ್ 4
ಕೊಳ್ಳೇಗಾಲದ ಕರಾಟೆ ಪಟುಗಳು ಮೈಸೂರಿನಲ್ಲಿ ಬಹುಮಾನಗಳಿಸಿದ ಹಿನ್ನೆಲೆ ವಿಜೇತರಿಗೆ ಕರಾಟೆ ಶಿಕ್ಷಕರಾದ ಸೆನ್ಸಾಯ್ ಮಾದೇಶ್, ಸೋಸ್ಲೆ ಸಿದ್ದರಾಜು ಬಹುಮಾನ ವಿತರಿಸಿದರು. ಕಾರ್ತಿಕ್ ಇದ್ದರು.