ಕೊಳ್ಳೇಗಾಲ ಟಿಎಪಿಸಿಎಂಎಸ್ ವ್ಯಾಪಕ ಭ್ರಷ್ಟಾಚಾರ

| Published : Sep 18 2024, 01:46 AM IST

ಕೊಳ್ಳೇಗಾಲ ಟಿಎಪಿಸಿಎಂಎಸ್ ವ್ಯಾಪಕ ಭ್ರಷ್ಟಾಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲದ ಟಿಎಪಿಸಿಎಂಎಸ್ ಆವರಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯನ್ನು ಪರಶಿವ ಮತ್ತು ಬಸವರಾಜು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲದ ಟಿಎಪಿಸಿಎಂಎಸ್ ಆವರಣದಲ್ಲಿ ಮಂಗಳವಾರ ಕರೆಯಲಾಗಿದ್ದ ವಾರ್ಷಿಕ ಸಭೆಯಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘದ ಬೈಲಾ ನಿಯಮ ಮತ್ತು ಹಲವು ದಾಖಲೆಗಳನ್ನು ಓದುವ ಮೂಲಕ ಆಡಳಿತ ಮಂಡಳಿಯೇ ನಿಬ್ಬೆರಗಾಗುವಂತೆ ಸಂಘದ ಸದಸ್ಯರು ಗಮನ ಸೆಳೆದಿದ್ದಾರೆ.

ಇಲ್ಲಿನ ವ್ಯಾಪಕ ಭ್ರಷ್ಟಾಚಾರದ ವಿರುದ್ಧ ಹಲವು ಸದಸ್ಯರು ತಿರುಗಿ ಬಿದ್ದು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಆಹಾರ ಇಲಾಖೆಯ ಹಿಂದಿನ ನಿರ್ದೇಶಕರು, ನಿರೀಕ್ಷಕರನ್ನು ರಕ್ಷಿಸುವ ಕೆಲಸ ಆಗುತ್ತಿದೆ. ಎರಡೂವರೆ ವರ್ಷಗಳಿಂದಲೂ ಆಡಳಿತ ಮಂಡಳಿ ನಿಷ್ಕ್ರಿಯವಾಗಿದೆ ಎಂದು ತರಾಟೆ ತೆಗೆದುಕೊಂಡ ಘಟನೆ ಜರುಗಿತು.

ಟಿಎಪಿಸಿಎಂಎಸ್ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಪಾಳ್ಯ ಪರಶಿವ ಅವರು ಇಲ್ಲಿನ ಕೋಟಿಗಟ್ಟಲೆ ಅವ್ಯವಹಾರದಲ್ಲಿ ಸಿದ್ದರಾಜು ಇನ್ನಿತರರನ್ನು ಬಲಿಪಶು ಮಾಡಲಾಗಿದೆ. ನಿಜಕ್ಕೂ ಅವ್ಯವಹಾರ ಪ್ರಮುಖ ಆರೋಪಿಗಳಾದ ಆಹಾರ ಇಲಾಖೆಯ ಹಿಂದಿನ ನಿರ್ದೇಶಕರಾದ ರಾಚಪ್ಪ ಮತ್ತು ಆಹಾರ ಇಲಾಖೆಯ ನಿರೀಕ್ಷಕರನ್ನು ರಕ್ಷಿಸಲಾಗಿದೆ. ಮೊದಲು ಅವರ ಮೇಲೆ ಕ್ರಮಕೈಗೊಳ್ಳಬೇಕಿತ್ತು. ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಸಂಘದ ಬೈಲಾ ಹಾಗೂ ದಾಖಲೆಗಳನ್ನು ಓದುವ ಮೂಲಕ ಪರಶಿವ ಅವರು ಸಂಘದ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಗೆ ಬೆವರಿಳಿಸಿದ ಘಟನೆ ಜರುಗಿತು.

ಹಿಂದಿನ ನೌಕರ ಕೃಷ್ಣಶೆಟ್ಟಿ ಅವರನ್ನು ಸಂಸ್ಥೆಯಿಂದ ವಜಾಗೊಳಿಸಿರುವುದಾಗಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಪ್ರಶ್ನಿಸುತ್ತಿದ್ದಂತೆ ಗಣಕ ಯಂತ್ರ ನಿರ್ವಾಹಕ ಮಹದೇವಸ್ವಾಮಿ ಅದು ಕಂಪ್ಯೂಟರ್ ನಿಂದ ಆದ ತಪ್ಪಿರಬಹುದು ಎನ್ನುತ್ತಿದ್ದಂತೆ ಸದಸ್ಯ ಬಸವರಾಜು, ಪರಶಿವ ಅವರು ಕಾರ್ಯದರ್ಶಿ ಹಾಗೂ ಕಂಪ್ಯೂಟರ್ ಆಪರೇಟರ್ ಅವರನ್ನು ತರಾಟೆ ತೆಗೆದುಕೊಂಡರು. ನ್ಯಾಯಾಲಯವನ್ನೆ ದಿಕ್ಕು ತಪ್ಪಿಸಲು ಹೇಗೆ ಆ ರೀತಿ ಮಾಹಿತಿ ನೀಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಸೋಮಶೇಖರ್ ಅವರು ಇಲ್ಲಿನ ಅವ್ಯವಹಾರದಲ್ಲಿ ನಾನು ಭಾಗಿಯಾಗಿಲ್ಲ, ಆಡಿಟ್ ವರದಿ ಪರಿಶೀಲಿಸದೆ ಲೋಪ ಎಸಗಿ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ನೌಕರ ನಾಗೇಂದ್ರಸ್ವಾಮಿ ಎಂಬವರು ಹೇಳುತ್ತಿದ್ದಾರೆ, ಇದು ಸುಳ್ಳಿನ ಪ್ರಕರಣ ಎಂದು ಹೇಳುತ್ತಿದ್ದಾರೆ. ಅವರು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ದಾಖಲೆ ಏನಿದೆ ಎಂದು ಪ್ರಶ್ನಿಸಿದರಲ್ಲದೆ ಯಾರು ಹಣ ದುರ್ಬಳಕೆ ಮಾಡಿಕೊಂಡಿದ್ದರೆ ಅವರ ಮೇಲೆ ಕ್ರಮವಾಗಲಿ ಎಂದು ಆಗ್ರಹಿಸಿದರು .ಕೃಷ್ಣಶೆಟ್ಟಿ ವಜಾ ಪ್ರಕರಣದಲ್ಲಿ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಕೃಷ್ಣಶೆಟ್ಟಿ ಅವರನ್ನು ವಯೋ ನಿವೃತ್ತಿ ಹೊಂದಿದ ಹಿನ್ನೆಲೆ ನೌಕರನನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದ್ದಿರಿ, ಆದರೆ ಆತನನ್ನು ಅಮಾನತ್ತುಗೊಳಿಸಲಾಗಿದೆ. ಆತನ ವಿರುದ್ಧ ಹಣ ದುರ್ಬಳಕೆ ಪ್ರಕರಣವಿದೆ, 2 ಲಕ್ಷ ಹಣವನ್ನು ಸಂಸ್ಥೆಗೆ ಪಾವತಿಸಿಕೊಂಡಿದ್ದಿರಿ, ಹೀಗಾಗಿ ನೀವು ನಿಯಮ ಮೀರಿ ಆತನನ್ನು ಯಾವ ರೀತಿ ವಜಾಗೊಳಿಸಿದ್ದೀರಿ, ಬೈಲಾ ಪ್ರಕರಣ ಇದು ಅಕ್ಷಮ್ಯ ಅಪರಾಧ ಎಂದು ಬೈಲಾ ಹಾಗೂ ಸರ್ಕಾರಿ ನಿಯಮ ಓದಿ ಹೇಳುವ ಮೂಲಕ ಆಡಳಿತ ಮಂಡಳಿಯೆ ನಿಬ್ಬೆರಗಾಗುವಂತೆ ಪಾಳ್ಯ ಪರಶಿವಮೂರ್ತಿ ಆದೇಶ ಪ್ರತಿ ಓದಿ ಗಮನ ಸೆಳೆದರು. ಹಿಂದಿನ ಆಡಳಿತ ಮಂಡಳಿಯೇ ಇಲ್ಲಿನ ಕೋಟಿಗಟ್ಟಲೆ ಅವ್ಯವಹಾರಕ್ಕೆ ಕಾರಣವಾಗಿದ್ದು ಯಾರ ವಿರುದ್ಧ ದೂರು ಕೊಡಿಸಲಾಗಿದೆ ತಿಳಿಸಿ, ಅದೇ ರೀತಿ ಅವ್ಯವಹಾರದಲ್ಲಿ ಭಾಗಿಯಾದ ಎಲ್ಲರ ಮೇಲೆ ಕ್ರಮವಾಗಲಿದೆ ಎಂದಿದ್ದೀರಿ, ಯಾರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೊದಲು ಸಭೆಗೆ ಮಾಹಿತಿ ನೀಡಿ. ಅಲ್ಲದೆ ಕೃಷ್ಣಶೆಟ್ಟಿ ಅವರನ್ನು ನಿಯಮ ಮೀರಿ ವಜಾಗೊಳಿಸಿದ್ದು ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ಬಸವರಾಜು, ಪರಶಿವ ಅವರು ಆಡಳಿತ ಮಂಡಳಿಯ ಕಾರ್ಯವೈಖರಿಗೆ ಹರಿಹಾಯ್ದರು.ಎರಡೂವರೆ ವರ್ಷದಲ್ಲಿ ನೂತನ ಆಡಳಿತ ಮಂಡಳಿ ತಪ್ಪಿತಸ್ಥರ ರಕ್ಷಣೆ ಮಾಡುತ್ತಿದೆ, ನಿಜಕ್ಕೂ ಸಹ ಮಂಡಳಿಗೆ ಸೌಜನ್ಯವಿದ್ದರೆ ಹಿಂದಿನ ಆಹಾರ ಇಲಾಖೆಯ ನಿರ್ದೇಶಕರ ರಾಚಪ್ಪ ಮತ್ತು ನಿಂಗರಾಜು ಸೇರಿದಂತೆ ಹಲವರನ್ನು ರಕ್ಷಣೆ ಮಾಡಲಾಗಿದೆ. ಈ ಬೆಳವಣಿಗೆ ಸರಿಯಲ್ಲ ಎಂದು ಸಭೆಯಲ್ಲಿ ತರಾಟೆ ತೆಗೆದುಕೊಳ್ಳಲಾಯಿತು.ಅನುಭವಿಗಳಿದ್ದೀರಾ, ನೀವು ಮಾಡಿದ್ದೇನು?: ನೀವು ಅನುಭವಿಗಳಿದ್ದೀರಿ, ಜಿಪಂನ ಪ್ರಭಾರಿ ಅದ್ಯಕ್ಷರಾಗಿದ್ದ ಚಾಮರಾಜು, ತಾಪಂನ ಅಧ್ಯಕ್ಷರಾಗಿದ್ದ ಮುರಳಿ ಸೇರಿದಂತೆ ಇಲ್ಲಿರುವ ಅನೇಕ ಮಂದಿ ಟಿಎಪಿಸಿಎಂಎಸ್ ಆಡಳಿತ ಮಂಡಳಿಯಲ್ಲಿದ್ದೀರಿ, ನೀವು ಇಲ್ಲಿಗೆ ಸುಪ್ರಿಂಗಳು, ಹಾಗಿದ್ದರೂ ಸಹ ಇಲ್ಲಿನ ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಇಲ್ಲಾಗುತ್ತಿದೆ. ಹಿಂದಿನ ಪುಡ್ ಡಿಡಿ ಸೇರಿದಂತೆ ಅವ್ಯವಹಾರ ನಡೆಸಿದ ಇಲ್ಲಿನ ನೌಕರರ ಮೇಲೂ ಕ್ರಮ ಆಗಬೇಕು ಎಂದು ಕೆಲವು ಸದಸ್ಯರು ಆಗ್ರಹಿಸಿದರು. ಎರಡೂವರೆ ವರ್ಷದಲ್ಲಿ ಆಗದ ಕೆಲ ಮುಂದಿನ ದಿನಗಳಲ್ಲಾದರೂ ಆಗಲಿ ಎಂದು ಹಲವು ಸದಸ್ಯರ ಸಭೆಯಲ್ಲಿ ಪ್ರಸ್ತಾಪಿಸಿ ಗಮನ ಸೆಳೆದರು ಕಳೆ ಬದಲು ಪೈರನ್ನೆ ಕಿತ್ತರು!

ಹಿಂದಿದ್ದ ಆಡಳಿತ ಮಂಡಳಿ ಮತ್ತು ನೌಕರರನ್ನು ಕಳೆ ಕೀಳಿ ಎಂದು ಕಳುಹಿಸಿದರೆ ಪೈರನ್ನೆ ಕಿತ್ತು ಹಾಕುವಷ್ಟರ ಮಟ್ಟಿಗೆ ಭ್ರಷ್ಟಾಚಾರ ಮಾಡಿಬಿಟ್ಟಿದ್ದಾರೆಂದು ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಮಾದನಾಯಕ ಹೇಳಿದರು. ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲಿ ಈ ಹಿಂದಿದ್ದವರು ಅಕ್ರಮ ನಡೆಸಿದ್ದು ಹಿಂದಿದ್ದವರೆಲ್ಲ (ಆಡಳಿತ ಮಂಡಳಿ- ನೌಕರರು) ಕಳೆ ಕಿಳಿ ಎಂದರೆ ಪೈರನ್ನು ಕಿತ್ತು ಹಾಕಿ ಬಿಟ್ಟಿದ್ದಾರೆ. ಸಾಕಷ್ಟು ಲೋಪ ಮಾಡಿದ್ದಾರೆ. ಹಾಗಾಗಿ ಮುಂದಿನ ಕ್ರಮಕ್ಕಾಗಿ ಮತ್ತೊಂದು ಪ್ರಕರಣಕ್ಕೆ ಅನುಮತಿ ನೀಡಿ ಎಂದು ಪೊಲೀಸ್ ಇಲಾಖೆಯ ಎಸ್ಪಿಯವರಲ್ಲಿ ಮನವಿ ಮಾಡಿದ್ದರು ಸಹ ಫಲಪ್ರದವಾಗಿಲ್ಲ, ಈ ಕುರಿತು ನಿಯಮವನ್ನು ಹಿಂಬರಹದಲ್ಲಿ ನೀಡಿದ್ದಾರೆ. ನಾನೇನು ಮಾಡಲು ಸಾಧ್ಯ ಎಂದು ಅಧ್ಯಕ್ಷ ಚಿಕ್ಕಮಾದನಾಯಕ ಬೇಸರ ಹೊರಹಾಕಿದರು.