ಮೈಸೂರಿನ ಕೊಡಗು ಗೌಡ ಸಮಾಜದ ಅಧ್ಯಕ್ಷರಾಗಿ ಕೊಂಬಾರನ ಬಸಪ್ಪ ಪುನರಾಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲುಮೈಸೂರಿನ ಕೊಡಗು ಗೌಡ ಸಮಾಜದ ಅಧ್ಯಕ್ಷರಾಗಿ ಕೊಂಬಾರನ ಬಸಪ್ಪ ಪುನರಾಯ್ಕೆಯಾಗಿದ್ದಾರೆ.
ಸಮಾಜದಲ್ಲಿ ಇತ್ತೀಚೆಗೆ ಜರುಗಿದ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೊಂ ಬಾರನ ಬಸಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಚಂಡೀರ ಬಸಪ್ಪ, ಕಾರ್ಯದರ್ಶಿಯಾಗಿ ಪೊನ್ನೆಟಿ ನಂದ, ಖಜಾಂಚಿಯಾಗಿ ಉಳುವಾರನ ಸುರೇಶ್, ಸಹ ಕಾರ್‍ಯದರ್ಶಿಯಾಗಿ ನಡುಮನೆ ಚಂಗಪ್ಪ ಆಯ್ಕೆಯಾದರು.ನೂತನ ಆಡಳಿತ ಮಂಡಳಿ ನಿರ್ದೇಶಕರಾಗಿ ನಡುವಟ್ಟಿರ ಲಕ್ಷ್ಮಣ್, ಪಟ್ಟಡ ಶಿವಕುಮಾರ್, ಹೊಸೂರು ರಾಘವಯ್ಯ, ಕುಂಟುಪುಣಿ ರಮೇಶ್, ಮೊಟ್ಟನ ಕೌಶಿಕ್, ಹಾಗೂ ಮಹಿಳಾ ನಿರ್ದೇಶಕರಾಗಿ ಕುಂಟುಪುಣಿ ಶೀಲ, ಚಪ್ಪೇರ ಯಮುನಾ, ಶಂಕರನ ಶ್ಯಾಮಲ ಆಯ್ಕೆಯಾಗಿದ್ದಾರೆ.