ಕೊಂಗಾಡಿಯಪ್ಪ ಚಿಂತನೆಗಳು ಯುವಪೀಳಿಗೆಗೆ ದಾರಿದೀಪ: ಧೀರಜ್‌

| Published : Feb 23 2024, 01:52 AM IST

ಕೊಂಗಾಡಿಯಪ್ಪ ಚಿಂತನೆಗಳು ಯುವಪೀಳಿಗೆಗೆ ದಾರಿದೀಪ: ಧೀರಜ್‌
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಮಾರುಕಟ್ಟೆ ಚೌಕದಲ್ಲಿರುವ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಪುತ್ಥಳಿ ಮುಂಭಾಗ ದೇವಾಂಗ ಮಂಡಲಿ ನೇತೃತ್ವದಲ್ಲಿ ಡಿ.ಕೊಂಗಾಡಿಯಪ್ಪ ಅವರ 164ನೇ ಜನ್ಮದಿನಾಚರಣೆ ಕಾರ್‍ಯಕ್ರಮ ಆಯೋಜಿಸಲಾಗಿತ್ತು.

ದೊಡ್ಡಬಳ್ಳಾಪುರ: ಇಲ್ಲಿನ ಮಾರುಕಟ್ಟೆ ಚೌಕದಲ್ಲಿರುವ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಪುತ್ಥಳಿ ಮುಂಭಾಗ ದೇವಾಂಗ ಮಂಡಲಿ ನೇತೃತ್ವದಲ್ಲಿ ಡಿ.ಕೊಂಗಾಡಿಯಪ್ಪ ಅವರ 164ನೇ ಜನ್ಮದಿನಾಚರಣೆ ಕಾರ್‍ಯಕ್ರಮ ಆಯೋಜಿಸಲಾಗಿತ್ತು.

ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ದೊಡ್ಡಬಳ್ಳಾಪುರದ ಇಂದಿನ ಪ್ರಗತಿ ಅವರ ದೂರದೃಷ್ಟಿಯ ಫಲ. ಈ ನಗರವನ್ನು ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿ ಮಾಡುವ ಚಿಂತನೆ ಬಿತ್ತಿದ ಪುಣ್ಯಪುರುಷರು. ಅವರ ನಿಸ್ವಾರ್ಥ ಚಿಂತನೆಗಳು ನಮ್ಮ ಯುವಪೀಳಿಗೆಯ ಮಾರ್ಗದರ್ಶಿ ಸೂತ್ರಗಳಾಗಬೇಕು ಎಂದರು.

ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಮಾತನಾಡಿ, ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಊರಿನ ಅಭಿವೃದ್ಧಿಯ ಕನಸು ಕಂಡ ಅವರ ಜೀವನಗಾಥೆಯೇ ರೋಚಕ. ಅವರ ಪುತ್ಥಳಿಯನ್ನು ನಗರಸಭೆ ನೂತನ ಕಟ್ಟಡದ ಮುಂಭಾಗ ಸ್ಥಾಪಿಸುವ ಚಿಂತನೆಗೆ ಪುಷ್ಠಿ ದೊರೆಯಬೇಕು. ಈ ಹಂತದಲ್ಲಿ ಶಾಸಕರು ಸೇರಿದಂತೆ ಆಡಳಿತಶಾಹಿಯ ಒತ್ತಾಸೆ ಅಗತ್ಯವಿದೆ ಎಂದರು.

ದೇವಾಂಗ ಮಂಡಲಿ ಉಪಾಧ್ಯಕ್ಷರಾದ ಬಿ.ಜಿ.ಅಮರನಾಥ್, ಗೋಪಾಲ್, ಗೌ.ಕಾರ್‍ಯದರ್ಶಿ ಪ್ರೊ.ಎಂ.ಜಿ.ಅಮರನಾಥ್, ಸಹಕಾರ್‍ಯದರ್ಶಿ ಯೋಗ ನಟರಾಜ್, ಖಜಾಂಚಿ ಅಖಿಲೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ದೇವಾಂಗ ಮಂಡಲಿಯ ಪದಾಧಿಕಾರಿಗಳು, ನಗರಸಭೆ ಪ್ರತಿನಿಧಿಗಳು ಪಾಲ್ಗೊಂಡರು.