ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ದಾಸೋಹ ಪರಂಪರೆಯಲ್ಲೇ ದಾಖಲೆ

| Published : Feb 11 2024, 01:47 AM IST

ಸಾರಾಂಶ

ಭಕ್ತರು ತಾವೇ ಬಂದು ದಾಸೋಹದಲ್ಲಿ ಬಡಿಸಿದ್ದು, ಹೇಳದೇ ಕೊಟ್ಟು ಹೋಗಿದ್ದು ಲೆಕ್ಕವೇ ಇಲ್ಲ. ಜ.21ರಂದೇ ಆರಂಭವಾದ ದಾಸೋಹ ಫೆ.9ರ ಮಧ್ಯರಾತ್ರಿಯವರೆಗೂ (19 ದಿನ) ನಡೆಯಿತು.

ಸೋಮರಡ್ಡಿ ಅಳವಂಡಿಕೊಪ್ಪಳ: ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ 19 ದಿನಗಳಲ್ಲಿ ತರಕಾರಿ, ತುಪ್ಪ, ಹಾಲು, ಸಿಹಿಪದಾರ್ಥ, ಅಕ್ಕಿ ಸೇರಿದಂತೆ ಬರೋಬ್ಬರಿ 3179 ಕ್ವಿಂಟಲ್ ಆಹಾರ ಪದಾರ್ಥ ಬಳಕೆಯಾಗಿದೆ. ಇದು ಶ್ರೀಮಠವೇ ಬಿಡುಗಡೆ ಮಾಡಿದ ಪ್ರಕಟಣೆಯ ಲೆಕ್ಕಾಚಾರ.ಭಕ್ತರು ತಾವೇ ಬಂದು ದಾಸೋಹದಲ್ಲಿ ಬಡಿಸಿದ್ದು, ಹೇಳದೇ ಕೊಟ್ಟು ಹೋಗಿದ್ದು ಲೆಕ್ಕವೇ ಇಲ್ಲ. ಜ.21ರಂದೇ ಆರಂಭವಾದ ದಾಸೋಹ ಫೆ.9ರ ಮಧ್ಯರಾತ್ರಿಯವರೆಗೂ (19 ದಿನ) ನಡೆಯಿತು. 16 ಲಕ್ಷ ರೊಟ್ಟಿ ಬಳಕೆಯಾಗಿದ್ದರೆ, 1200 ಕ್ವಿಂಟಲ್ ಅಕ್ಕಿಯ ಅನ್ನ ಮಾಡಿ ಹಾಕಲಾಗಿದೆ. ಕಳೆದ ವರ್ಷ 750 ಕ್ವಿಂಟಲ್ ಅಕ್ಕಿ ಬಳಕೆಯಾಗಿದ್ದರೆ, ಈ ವರ್ಷ 450 ಕ್ವಿಂಟಲ್ ಅಕ್ಕಿ ಹೆಚ್ಚುವರಿಯಾಗಿ ಬಳಕೆಯಾಗಿದೆ. 10 ಲಕ್ಷ ಶೇಂಗಾ ಹೋಳಿಗೆ ಸೇರಿ 900 ಕ್ವಿಂಟಲ್ ಸಿಹಿ ಪದಾರ್ಥ ಖರ್ಚಾಗಿದೆ. ಇದರಲ್ಲಿ 300 ಕ್ವಿಂಟಲ್ ಮಾದಲಿ ಬಳಕೆಯಾಗಿದೆ.5 ಲಕ್ಷ ಮಿರ್ಚಿ ಬಜ್ಜಿ, 500 ಕೆಜಿ ಹಪ್ಪಳ ಬಡಿಸಲಾಗಿದೆ. 400 ಕ್ವಿಂಟಲ್ ತರಕಾರಿ, 350 ಕ್ವಿಂಟಲ್ ದ್ವಿದಳ ಧಾನ್ಯವನ್ನು ಸಾಂಬಾರ್ ಮತ್ತು ಪಲ್ಯ ಮಾಡಲು ಬಳಕೆ ಮಾಡಲಾಗಿದೆ.ನಿತ್ಯವೂ ಲಕ್ಷ ಲಕ್ಷ ಭಕ್ತರು:ದಾಸೋಹದಲ್ಲಿ ನಿತ್ಯ ಲಕ್ಷ ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ರಥೋತ್ಸವದ ದಿನ, ನಂತರದ ಎರಡು ದಿನ ಸೇರಿ ಬರೋಬ್ಬರಿ 5-6 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಒಟ್ಟಾರೆ 15-18 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.20 ಸಾವಿರ ಮಂದಿ ಸೇವೆ:ದಾಸೋಹದಲ್ಲಿ ನಿತ್ಯ ಸಾವಿರಕ್ಕೂ ಅಧಿಕ ಸೇವಕರು ಕಾರ್ಯ ನಿರ್ವಹಿಸಿದ್ದಾರೆ. ಪ್ರತಿ ನಿತ್ಯವೂ 400ಕ್ಕೂ ಅಧಿಕ ಬಾಣಸಿಗರು ಮತ್ತು 600-800 ಸೇವಕರು ಬಡಿಸುವ, ವಿತರಿಸುವ ಮತ್ತು ಪೂರೈಕೆ ಮಾಡುವ ಕಾರ್ಯ ಮಾಡಿದ್ದಾರೆ.ರೊಟ್ಟಿ- 16 ಲಕ್ಷಶೇಂಗಾ ಹೋಳಿಗೆ- 10 ಲಕ್ಷಮಿರ್ಚಿ- 5 ಲಕ್ಷಅಕ್ಕಿ- 1200 ಕ್ವಿಂಟಲ್ಸಿಹಿ ಪದಾರ್ಥ- 900 ಕ್ವಿಂಟಲ್

ತರಕಾರಿ- 400 ಕ್ವಿಂಟಲ್

ದ್ವಿದಳ ಧಾನ್ಯ- 350 ಕ್ವಿಂಟಲ್

ಹಾಲು-15 ಸಾವಿರ ಲೀಟರ್

ತುಪ್ಪ- 1000 ಕೆಜಿಉಪ್ಪಿನಕಾಯಿ- 5000 ಕೆ.ಜಿ.ಪುಠಾಣಿ ಚಟ್ನಿ- 15 ಕ್ವಿಂಟಲ್ಕೆಂಪು ಚಟ್ನಿ- 5 ಕ್ವಿಂಟಲ್ಕಡಲೆಬೇಳೆ- 20 ಕ್ವಿಂಟಲ್ ದಾಸೋಹ ನಿರಂತರ: ಗವಿಸಿದ್ಧೇಶ್ವರ ಮಠದಲ್ಲಿ ನಿರಂತರ ದಾಸೋಹ ಇರುತ್ತದೆ. ಜಾತ್ರೆಯಲ್ಲಿ ಮಾತ್ರ ಮಹಾದಾಸೋಹವನ್ನು ಪ್ರತ್ಯೇಕವಾಗಿ ಮಾಡಲಾಗುತ್ತದೆ. ಉಳಿದಂತೆ ಪ್ರತಿ ನಿತ್ಯವೂ ದಾಸೋಹ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ರಾತ್ರಿ ವರೆಗೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದು ಕೆಲವೊಂದು ಬಾರಿ ಮಧ್ಯರಾತ್ರಿಯವರೆಗೂ ನಡೆಯುತ್ತದೆ. ಡಿಸೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳು ಪ್ರವಾಸಕ್ಕೆ ಬರುವಾಗ ಮಧ್ಯರಾತ್ರಿ 2 ಗಂಟೆಯವರೆಗೂ ಪ್ರಸಾದ ನೀಡಿದ ಉದಾಹರಣೆ ಇದೆ.ಮಹಾದಾಸೋಹದಲ್ಲಿ ಹಿಂದಿನ ಎಲ್ಲ ವರ್ಷಗಳ ದಾಖಲೆ ಮೀರಿ ಈ ವರ್ಷ ಆಹಾರ ಪದಾರ್ಥ ಬಳಕೆಯಾಗಿದೆ ಎನ್ನುತ್ತಾರೆ ಮಹಾದಾಸೋಹ ಉಸ್ತುವಾರಿ ರಾಮನಗೌಡ.