ಸಾರಾಂಶ
ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಹಿಡಿಯಲೆಂದು ಪ್ರಾರ್ಥಿಸಿ ಇಲ್ಲಿನ ಜಯನಗರ ಬಿಜೆಪಿ ಬೂತ್ ಸಮಿತಿಯವರು ಕೊರಂಬಡ್ಕ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಮತ್ತು ಕೊರಗಜ್ಜ ದೈವಸ್ಥಾನದಲ್ಲಿ ಸಂಕಲ್ಪ ಮಾಡಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಶನಿವಾರ ಕೊರಗಜ್ಜ ದೈವದ ಕೋಲ ನಡೆಯಿತು.
ಕನ್ನಡಪ್ರಭ ವಾರ್ತೆ ಸುಳ್ಯ
ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಹಿಡಿಯಲೆಂದು ಪ್ರಾರ್ಥಿಸಿ ಇಲ್ಲಿನ ಜಯನಗರ ಬಿಜೆಪಿ ಬೂತ್ ಸಮಿತಿಯವರು ಕೊರಂಬಡ್ಕ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಮತ್ತು ಕೊರಗಜ್ಜ ದೈವಸ್ಥಾನದಲ್ಲಿ ಸಂಕಲ್ಪ ಮಾಡಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಶನಿವಾರ ಕೊರಗಜ್ಜ ದೈವದ ಕೋಲ ನಡೆಯಿತು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಕೋಲದಲ್ಲಿ ಪಾಲ್ಗೊಂಡು, ದೈವದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ವಿಜಯೇಂದ್ರ ಅವರಿಗೆ ಹರಸಿದ ದೈವ, ‘ಚಕ್ರವರ್ತಿಯಂತೆ ಬಾಳಿ ಬೆಳಗಿ’ ಎಂದು ಅಭಯ ನೀಡಿತು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ ಸಹಿತ ಹಲವು ಗಣ್ಯರು ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು. ಸಂಸದ ಬ್ರಿಜೇಶ್ ಚೌಟ ಅವರು ಕೊರಗಜ್ಜ ದೈವದ ಈ ಪ್ರಸಾದವನ್ನು ಪ್ರಧಾನಿ ಮೋದಿಯವರಿಗೆ ತಲುಪಿಸಲಿದ್ದಾರೆ ಎಂದು ತಿಳಿದು ಬಂದಿದೆ.