ಕೊರಟಗೆರೆ: ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

| Published : Jan 19 2024, 01:46 AM IST

ಕೊರಟಗೆರೆ: ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊರಟಗೆರೆ ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ಪುನರ್ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗ್ರೇಡ್-2 ತಹಸಿಲ್ದಾರ್ ನರಸಿಂಹಮೂರ್ತಿ ರವರ ಅಧ್ಯಕ್ಷತೆಯಲ್ಲಿ ಕೊರಟಗೆರೆ ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ಪುನರ್ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಬಗ್ಗೆ ಎಲ್ಲಾ ಕಂದಾಯ ನೌಕರರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಗ್ರೇಡ್-2 ತಹಸೀಲ್ದಾರ್ ನರಸಿಂಹಮೂರ್ತಿ, ಅಧ್ಯಕ್ಷರಾಗಿ ಶಿರಸ್ತೇದಾರ್ ವೆಂಕಟೇಶ್, ಉಪಾಧ್ಯಕ್ಷರಾಗಿ ಸಿ.ಎನ್. ದುರ್ಗಾ ಉಪ ತಹಸೀಲ್ದಾರ್ ಎ.ಜಿ. ರಾಜು, ಪ್ರಧಾನ ಕಾರ್ಯದರ್ಶಿಯಾಗಿ ಶಿರಸ್ತೇದಾರ್ ವೆಂಕಟರಂಗನ್, ಖಜಾಂಚಿಯಾಗಿ ತಿಮಲಾಪುರ ಗ್ರಾಮ ಹುಲೀಕುಂಟೆ ವೃತ್ತ ಬಸವರಾಜು, ಜಂಟಿ ಕಾರ್ಯದರ್ಶಿಯಾಗಿ ಪ್ರ.ದ.ಸ ನಾರಾಯಣ್ ನಾಯಕ್, ಸಂಘಟನಾ ಕಾರ್ಯದರ್ಶಿಯಾಗಿ ಹೊಳವನಹಳ್ಳಿ ಹೋಬಳಿಯ ರಾ. ಜಸ್ವಾ ನಿರೀಕ್ಷಕರಾದ ಜೈಪ್ರಕಾಶ್, ಆಂತರಿಕ ಲೆಕ್ಕಪರಿಶೋಧಕರಾಗಿ ಹಾರಿಕಾ ಡಿ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದ್ವಿತಿಯ ದರ್ಜೆ ಸಹಾಯಕರಾದ ಸುಧಾಕರ್, ಕಾರ್ಯದರ್ಶಿಯಾಗಿ ಮಲ್ಲೇಕಾವಿನ ಗ್ರಾಮ ಸಹಾಯಕರಾದ ರಮೇಶ್ ಟಿ., ಜಿಲ್ಲಾ ಸಂಘದ ಪ್ರತಿನಿಧಿಯಾಗಿ ಕೃಷ್ಣಮೂರ್ತಿ, ನಿರ್ದೇಶಕರಾಗಿ ಸಿ.ಎನ್. ದುರ್ಗ ಹೋಬಳಿಯ ರಶ್ಮಿ, ಸಬೀಹಾಬಾನು, ನಕುಲ್, ದರ್ಶನ್, ಆಯ್ಕೆಮಾಡಲಾಯಿತು.