ಸಾರಾಂಶ
ಮಣೂರಿನ ಹೇರಂಬ ಶ್ರೀ ಮಹಾಗಣಪತಿ - ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಇದರ ಅಂಗವಾಗಿ ದೇವಾಲಯದಲ್ಲಿ ಗರಿಕೆಮಠ ಶ್ರೀರಾಮ ಅಡಿಗರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕೋಟಇಲ್ಲಿನ ಮಣೂರಿನ ಹೇರಂಬ ಶ್ರೀ ಮಹಾಗಣಪತಿ - ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಇದರ ಅಂಗವಾಗಿ ದೇವಾಲಯದಲ್ಲಿ ಗರಿಕೆಮಠ ಶ್ರೀರಾಮ ಅಡಿಗರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ನೂರಾರು ಮಂದಿ ಭಕ್ತರು ದೇಗುಲದ ಸುತ್ತಲು ಹಣತೆಯ ಸಾಲನ್ನಿಟ್ಟು ಜ್ಯೋತಿ ಬೆಳಗಿ, ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಗಲು ರಂಗಪೂಜೆ, ಬಲಿ ಪೂಜೆ, ಭಜನೆ ಸಂಕೀರ್ತನೆ, ಶ್ರೀ ದೇಗುಲದ ಪುಷ್ಕರಣಿಯಲ್ಲಿ ಉತ್ಸವ ಮೂರ್ತಿಯನ್ನಿಟ್ಟು ತೆಪ್ಪೋತ್ಸವ ವೈಭವದಿಂದ ನಡೆಸಲಾಯಿತು. ಭಕ್ತರಿಗೆ ಪ್ರಸಾದ ರೂಪದಲ್ಲಿ ಪನಿವಾರ ಸೇವೆಯೂ ಜರುಗಿತು.ದೇಗುಲದ ಅಧ್ಯಕ್ಷ ಸತೀಶ್ ಎಚ್. ಕುಂದರ್, ಮಾಜಿ ಅಧ್ಯಕ್ಷ ರಾಧಕೃಷ್ಣ ಉರಾಳ್, ಟ್ರಸ್ಟಿಗಳಾದ ಅಶೋಕ್ ಶೆಟ್ಟಿ ಕೊಯ್ಕೂರು, ದಿವ್ಯ ಪ್ರಭು, ಸುಫಲ ಶೆಟ್ಟಿ, ರವಿ ಐತಾಳ್, ದಿನೇಶ್ ಆಚಾರ್, ಅಚ್ಯುತ ಹಂದೆ, ಕೃಷ್ಣ ದೇವಾಡಿಗ, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಅರುಣಾಚಲ ಮಯ್ಯ, ಎಂ.ಎನ್. ಮಧ್ಯಸ್ಥ, ಶಿವರಾಮ್ ಶೆಟ್ಟಿ, ವಿಷ್ಣುಮೂರ್ತಿ ಮಯ್ಯ, ಗೋಪಾಲ್ ಪೈ, ಮಹೇಶ್ ಹೊಳ್ಳ, ಸ್ನೇಹಕೂಟದ ಪ್ರಮುಖರಾದ ಭಾರತಿ ವಿ. ಮಯ್ಯ, ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷೆ ಚಂದ್ರಿಕಾ ಭಟ್ ಮತ್ತಿತರರು ಉಪಸ್ಥಿತರಿದ್ದರು.