ಯಕ್ಷಗಾನ ಕಲೆಗೆ ಕೋಟ ವೈಕುಂಠರು ನೀಡಿದ ಕೊಡುಗೆ ಗಣನೀಯವಾದದ್ದು ಮತ್ತು ಇತರ ಕಲಾವಿದರಿಗೆ ಆದರ್ಶವಾದುದು ಎಂದು ಕೋಟದ ಅಮೃತೇಶ್ವರೀ ಮೇಳದ ಯಜಮಾನ ಆನಂದ್ ಸಿ. ಕುಂದರ್ ಹೇಳಿದರು.

ಕುಂದಾಪುರ: ಯಕ್ಷಗಾನ ಕಲೆಗೆ ಕೋಟ ವೈಕುಂಠರು ನೀಡಿದ ಕೊಡುಗೆ ಗಣನೀಯವಾದದ್ದು ಮತ್ತು ಇತರ ಕಲಾವಿದರಿಗೆ ಆದರ್ಶವಾದುದು ಎಂದು ಕೋಟದ ಅಮೃತೇಶ್ವರೀ ಮೇಳದ ಯಜಮಾನ ಆನಂದ್ ಸಿ. ಕುಂದರ್ ಹೇಳಿದರು. ಅವರು ಕೋಟತಟ್ಟು ಬಾರಿಕೆರೆ ಹತ್ತು ಸಮಸ್ತರ ವತಿಯಿಂದ ಹಮ್ಮಿಕೊಂಡ ಕೋಟ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮೇಳದ ಗ್ರಾಮದ ಸೇವೆಯಾಟದಲ್ಲಿ ಕೋಟ ಸುರೇಶ್ ಬಂಗೇರರಿಗೆ ಯಕ್ಷ ಕಲಾವಿದ ಕೋಟ ವೈಕುಂಠ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಒಬ್ಬ ಕಲಾವಿದ ರಂಗಸ್ಥಳದಲ್ಲಿ ಹೇಗೆ ಪಳಗಬೇಕು ಎಂಬುವುದನ್ನು ಕೋಟ ವೈಕುಂಠರು ಆ ಕಾಲಘಟ್ಟದಲ್ಲಿ ತೊರಿಸಿಕೊಟ್ಟಿದ್ದಾರೆ. ಯಕ್ಷಗಾನ ಮೇಳವನ್ನು ಮುನ್ನುಡೆಸುವುದರೊಂದಿಗೆ ತನ್ನ ವೇಷ ನಿರ್ವಹಿಸುವ ಅವರ ಪರಿ ಪದಗಳಲ್ಲಿ ವರ್ಣಿಸಲಾಗದು, ಅದೇ ರೀತಿ ತನ್ನ ಸಂಪ್ರದಾಯ ಬದ್ಧ ಪ್ರದರ್ಶನದ ಮೂಲಕ ಸುರೇಶ್ ಬಂಗೇರರು ಯಕ್ಷಕಲಾ ಕ್ಷೇತ್ರಕ್ಕೆ ಸೇವೆ ಸಲ್ಲಿಸುತಿದ್ದಾರೆ ಎಂದರು.

ಕೋಟತಟ್ಟು ಗ್ರಾಮದ ಹಿರಿಯರಾದ ಒಳಮಾಡು ಸೋಮ ಮರಕಾಲ, ಯಕ್ಷ ಸಂಘಟಕರಾದ ರಾಜು ಮರಕಾಲ, ರಂಜೀತ್ ಕುಮಾರ್, ರತ್ನಾಕರ ಬಾರಿಕೆರೆ, ಅನಂತ ಮರಕಾಲ, ಕೋಟ ಅಮೃತೇಶ್ವರೀ ದೇವಸ್ಥಾನದ ಟ್ರಸ್ಟಿಗಳಾದ ಎಂ.ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.