ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತಾಲೂಕಿನ ಕಳೆಂಜ ಗ್ರಾಮದ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ನಂದಗೋಕುಲ ಗೋಶಾಲೆಯಲ್ಲಿ ಗೋಮಾತೆಗೆ ಪ್ರಣಾಮ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ ‘ಪುಣ್ಯಕೋಟಿಗೆ ಒಂದು ಕೋಟಿ’ ನಂದಗೋಕುಲ ದೀಪೋತ್ಸವವು ಇತ್ತೀಚೆಗೆ ಕಳೆಂಜದ ನಂದಗೋಕುಲ ಗೋಶಾಲೆಯಲ್ಲಿ ನೆರವೇರಿತು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿ, ಭಾರತಮಾತೆಗೆ ಪುಷ್ಪಾರ್ಚನೆಗೈದು ಮಾತನಾಡಿದರು.
ಮುಖ್ಯ ಅತಿಥಿ, ದೀಪೋತ್ಸವ ಸಮಿತಿ ಗೌರವ ಸಲಹೆಗಾರ ಶಾಸಕ ಹರೀಶ್ ಪೂಂಜ ಮಾತನಾಡಿ, ಗೋಶಾಲೆಯಲ್ಲಿ ಗೋಪೂಜೆ, ಗೋನಂದಾರತಿ ವಿಶಿಷ್ಟ ಪರಿಕಲ್ಪನೆ. ಅಶಕ್ತ ಗೋವುಗಳನ್ನು ಆರೈಕೆ ಮಾಡಿ ಅವುಗಳನ್ನು ಸಂರಕ್ಷಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ನಂದಗೋಕುಲ ದೀಪೋತ್ಸವ ಸಮಿತಿ ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ, ಪುತ್ತೂರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಚಾಲಕ ವಿನಯಚಂದ್ರ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ವಿಭಾಗದ ಸಿಇಒ ಪೂರನ್ ವರ್ಮ, ಪುದುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ, ನಂದಗೋಕುಲ ದೀಪೋತ್ಸವ ಸಂಚಾಲನ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಪಂಚಶ್ರೀ, ಎಸ್‌ಕೆಆರ್‌ಡಿಪಿ ಯೋಜನಾಧಿಕಾರಿ ಸುರೇಂದ್ರಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ ಅವರನ್ನು ನಂದಗೋಕುಲ ದೀಪೋತ್ಸವ ಸಂಚಾಲನ ಸಮಿತಿ ಅಧ್ಯಕ್ಷ ನಾರಾಯಣ ಗೌಡ, ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಗೌರವಿಸಿ,ಸನ್ಮಾನಿಸಿದರು. ದೀಪೋತ್ಸವಕ್ಕೆ ಗೂಡುದೀಪ ಒದಗಿಸಿದ ಉಜಿರೆ ಪದ್ಮಶ್ರೀಯ ಪದ್ಮನಾಭ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಕುವೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ತಮ್ಮ ಒಂದೂವರೆ ವರ್ಷದ ಪಂಚಾಯಿತಿ ಗೌರವಧನ ರೂ 43 ಸಾವಿರ ರುಪಾಯಿಯನ್ನು ಗೋಶಾಲೆಗೆ ದಾನವಾಗಿ ಸಮರ್ಪಿಸಿದರು.
ಸಂಜೆ ಸಾಮೂಹಿಕ ಭಜನೋತ್ಸವ ಕಾರ್ಯಕ್ರಮ ಜರುಗಿತು. ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ. ದಯಾಕರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಂದಿಸಿದರು. ಆದಿತ್ಯ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ದೀಪೋತ್ಸವ ಸಂಚಾಲನ ಸಮಿತಿ ಪದಾಧಿಕಾರಿಗಳು,ಟ್ರಸ್ಟಿಗಳು, ನವೀನ ನೆರಿಯ, ಹರೀಶ್ ನೆರಿಯ, ಕೀರ್ತಿರಾಜ್ ಮೊದಲಾದವರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಮೂಹಿಕ ಗೋಪೂಜೆ, ಗೋನಂದಾರತಿ ಮತ್ತು ದೀಪೋತ್ಸವವು ನಡೆಯಿತು.