ಸಾರಾಂಶ
ತಾಲೂಕಿನ ಬಿಕ್ಕೋಡು ಹೋಬಳಿ ಲಕ್ಕುಂದ ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಗೀತಾ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಸದಸ್ಯೆ ರಾಧಾರವರು ಅಧ್ಯಕ್ಷೆ ಸ್ಧಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಹತ್ತು ಜನ ಸದಸ್ಯರನ್ನು ಒಳಗೊಂಡಿರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಸ್ಧಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷೆ ಸ್ಥಾನಕ್ಕಾಗಿ ರಾಧಾ ಹಾಗೂ ಗೀತಾ ನಡುವೆ ಸ್ಪರ್ಧೆ ನಡೆದು ಚುನಾವಣೆಯಲ್ಲಿ ರಾಧಾ 6 ಮತಗಳನ್ನು ಪಡೆದರೆ, ತಮ್ಮ ಪ್ರತಿಸ್ಪರ್ಧಿ ಗೀತಾ 4 ಮತಗಳನ್ನು ಪಡೆದು ಪರಾಭವಗೊಂಡರು.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಬಿಕ್ಕೋಡು ಹೋಬಳಿ ಲಕ್ಕುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಬಿಜೆಪಿ ಜೆಡಿಎಸ್ ಬೆಂಬಲಿತ ಸದಸ್ಯೆ ರಾಧಾ ಕೆ. ಪಿ ಆಯ್ಕೆಯಾದರು.ಸೋಮವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಗೀತಾ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಸದಸ್ಯೆ ರಾಧಾರವರು ಅಧ್ಯಕ್ಷೆ ಸ್ಧಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಹತ್ತು ಜನ ಸದಸ್ಯರನ್ನು ಒಳಗೊಂಡಿರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಸ್ಧಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷೆ ಸ್ಥಾನಕ್ಕಾಗಿ ರಾಧಾ ಹಾಗೂ ಗೀತಾ ನಡುವೆ ಸ್ಪರ್ಧೆ ನಡೆದು ಚುನಾವಣೆಯಲ್ಲಿ ರಾಧಾ 6 ಮತಗಳನ್ನು ಪಡೆದರೆ, ತಮ್ಮ ಪ್ರತಿಸ್ಪರ್ಧಿ ಗೀತಾ 4 ಮತಗಳನ್ನು ಪಡೆದು ಪರಾಭವಗೊಂಡರು. ಆರು ಮತಗಳನ್ನು ಪಡೆದ ರಾಧಾ ಅವರನ್ನು ಚುನಾವಣಾಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಸತೀಶ್ ಅವರು ರಾಧಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ರಾಧಾ ನನನ್ನು ಅಧ್ಯಕ್ಷೆಯಾಗಿ ಆಯ್ಕೆಯಾಗಲು ಸಹಕರಿಸಿದ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರುಗಳಿಗೂ ಹಾಗೂ ಕ್ಷೇತ್ರದ ಶಾಸಕರಾದ ಎಚ್ ಕೆ ಸುರೇಶ್ ರವರಿಗೆ ಧನ್ಯವಾದಗಳು ತಿಳಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಪಕ್ಷಪಾತ ಮಾಡದೆ ಹಂತಹಂತವಾಗಿ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಚೈತ್ರ ಸುಂದರೇಶ್, ಸುರೇಶ್ ಮಲ್ಲಾಪುರ, ನಾಗರಾಜು ಇರಕರವಳ್ಳಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್, ಸಾಗರ್, ಕುಮಾರ್ ಇತರರು ಹಾಜರಿದ್ದರು.